Top

ಯಾರೇ ತಪ್ಪು ಮಾಡಿದರು ಅವರ ರಕ್ಷಣೆಯ ಪ್ರಶ್ನೆಯೆ ಇಲ್ಲ - ಸಿಎಂ ಪುತ್ರ ವಿಜಯೇಂದ್ರ

  • ಯಾವುದೇ ಕಾರಣಕ್ಕೂ ಯಾವುದೇ ಪ್ರಭಾವಕ್ಕೂ ನಮ್ಮ ಸರ್ಕಾರ ಮಣಿಯುವುದಿಲ್ಲ.
  • ಪ್ರಕರಣದಲ್ಲಿ ಯಾರೇ ಇದ್ದರು ಅವರಿಗೆ ಕ್ಷಮೆ ಇಲ್ಲ.
  • ನಮ್ಮ ಕುಟುಂಬದ ಮೇಲೆ ಆರೋಪಗಳನ್ನು ಮಾಡುತ್ತಲೆ ಇರುತ್ತಾರೆ.
  • ನಮ್ಮ ಕುಟುಂಬದ ಮೇಲೆ ಆರೋಪಗಳನ್ನು ಮಾಡುತ್ತಲೆ ಇರುತ್ತಾರೆ.

ಯಾರೇ ತಪ್ಪು ಮಾಡಿದರು ಅವರ ರಕ್ಷಣೆಯ ಪ್ರಶ್ನೆಯೆ ಇಲ್ಲ - ಸಿಎಂ ಪುತ್ರ ವಿಜಯೇಂದ್ರ
X

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಮಾತನಾಡಿದರು.

ಮೈಸೂರು: ಹಿಂದೆ ಯಾವ ಸರ್ಕಾರವು ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟಹಾಕಲು ಸರ್ಕಾರ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಯಾವುದೇ ಪ್ರಭಾವಕ್ಕೂ ನಮ್ಮ ಸರ್ಕಾರ ಮಣಿಯುವುದಿಲ್ಲ ಎಂದು ಸಿಎಂ ಪುತ್ರ ವಿಜಯೇಂದ್ರ ಅವರು ಹೇಳಿದ್ದಾರೆ.

ಮಂಗಳವಾರ ಮೈಸೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಗೃಹ ಸಚಿವರು ಡ್ರಗ್ಸ್ ದಂಧೆ ಮಟ್ಟಹಾಕಲು ಶ್ರಮಿಸುತ್ತಿದ್ದಾರೆ. ಪ್ರಕರಣದಲ್ಲಿ ಯಾರೇ ಇದ್ದರು ಅವರಿಗೆ ಕ್ಷಮೆ ಇಲ್ಲ ಎಂದಿದ್ದಾರೆ.

ರಾಗಿಣಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಚಿತ್ರರಂಗದ ಬಗ್ಗೆ ಸಾಕಷ್ಟು ಗೌರವ ಇದೆ. ಚಿತ್ರ ನಟರು ಸಾಮಾನ್ಯವಾಗಿ ಎಲ್ಲಾ ಪಕ್ಷದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಕೆಲ ನಟ-ನಟಿಯರು ಒಂದೇ ಚುನಾವಣೆಯಲ್ಲಿ ಬೇರೆಬೇರೆ ಪಕ್ಷದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದೇ ಪಕ್ಷದವರು ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಯಾರೇ ತಪ್ಪು ಮಾಡಿದರು ಅವರ ರಕ್ಷಣೆಯ ಪ್ರಶ್ನೆಯೆ ಇಲ್ಲಯಾರೇ ತಪ್ಪು ಮಾಡಿದರು ಅವರ ರಕ್ಷಣೆಯ ಪ್ರಶ್ನೆಯೆ ಇಲ್ಲ ಎಂದರು.

ವಿಜಯೇಂದ್ರ ಮೇಲೆ ಭ್ರಷ್ಟಾಚಾರದ ಆರೋಪದ ಕುರಿತು ಮಾತನಾಡಿದ ಅವರು, ಈ ಆರೋಪಗಳು ಹೊಸದೇನಲ್ಲ. ಹಿಂದೆಯು ಮಾಡಿದರು, ಮುಂದೆಯು ಮಾಡುತ್ತಾರೆ. ನಮ್ಮ ಕುಟುಂಬದ ಮೇಲೆ ಆರೋಪಗಳನ್ನು ಮಾಡುತ್ತಲೆ ಇರುತ್ತಾರೆ. ಭ್ರಷ್ಟಾಚಾರ ಆರೋಪಕ್ಕೆ ಸಾಕ್ಷಿಗಳಿದ್ದಾರೆ ಆದಷ್ಟು ಬೇಗ ಬಿಡುಗಡೆ ಮಾಡಲಿ. ಬೇಗ ಬಿಡುಗಡೆ ಮಾಡಲಿ ಅಂತ ನಾನು ಕೂಡ ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ನಾನು ಈ ವಿಚಾರಕ್ಕೆ ತಲೆಕೆಡಿಸುಕೊಳ್ಳುವುದಿಲ್ಲ. ನನ್ನ ಗುರಿ ಸ್ಪಷ್ಟವಾಗಿದೆ ಎಂದು ಮೈಸೂರಿನಲ್ಲಿ ಸಿಎಂ ಪುತ್ರ ವಿಜಯೇಂದ್ರ ಅವರು ತಿಳಿಸಿದ್ದಾರೆ.

Next Story

RELATED STORIES