Top

ಖಾಸಗಿ ದೇಗುಲಗಳ ಆತಂಕ ಪಡುವ ಅಗತ್ಯವಿಲ್ಲ - ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ಖಾಸಗಿ ದೇಗುಲ ವಶಕ್ಕೆ ಪಡೆಯುವ ಪ್ರಶ್ನೆಯಿಲ್ಲ

ಖಾಸಗಿ ದೇಗುಲಗಳ ಆತಂಕ ಪಡುವ ಅಗತ್ಯವಿಲ್ಲ -  ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ
X

ಬೆಂಗಳೂರು: ಮಾಧ್ಯಮಗಳಲ್ಲಿ ಬಂದ ಸುದ್ದಿ ನೋಡಿದ್ದೇನೆ. ಖಾಸಗಿ ದೇಗುಲಗಳ ಆತಂಕ ಪಡುವ ಅಗತ್ಯವಿಲ್ಲ ಎಂದು ಮುಜರಾಯಿ ಸಚಿವ ಕೋಟಾಶ್ರೀನಿವಾಸ್ ಪೂಜಾರಿ ಅವರು ಭರವಸೆ ನೀಡಿದ್ದಾರೆ.

ಎಲ್ಲ ದೇವಸ್ಥಾನ ಧಾರ್ಮಿಕ ದತ್ತಿಗೆ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನೋಂದಾಣಿ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದೆ. 2015ರಲ್ಲಿ ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿಯಾಗಿದೆ ಎಂದಿದ್ದಾರೆ.

ಇನ್ನು ಖಾಸಗಿ ದೇಗುಲಗಳ ಮೇಲೆ ಹಕ್ಕು ಚಲಾಯಿಸುವುದು. ನಿಗಾ ಇಡುವುದು ಸರ್ಕಾರದ ಮುಂದಿಲ್ಲ, ನೋಂದಣಿ ಪ್ರಕ್ರಿಯೆಗೆ ಸುತ್ತೋಲೆ ಕೊಟ್ಟಿದ್ದೇವೆ. ಸ್ವಾಯತ್ತತೆ ಪಡೆಯುವ ಯಾವುದೇ ಪ್ರಸಂಗವಿಲ್ಲ, ಖಾಸಗಿ ದೇಗುಲ ವಶಕ್ಕೆ ಪಡೆಯುವ ಪ್ರಶ್ನೆಯಿಲ್ಲ, ಸುತ್ತೋಲೆ ನನ್ನ ಗಮನಕ್ಕೆ ಬಂದಿಲ್ಲ, ರೆಗ್ಯುಲರ್ ಪ್ರೋಸಸ್​ನಂತೆ ಸುತ್ತೋಲೆ ಹೋಗಿರುತ್ತೆ. ಖಾಸಗಿ ದೇಗುಲ ಖಾಸಗಿ ಆಗಿಯೇ ಮುಂದುವರೆಯುತ್ತೆ ಎಂದು ಕೋಟಾ ಶ್ರೀನಿವಾಸ್​ ಪೂಜಾರಿ ಅವರು ಸ್ಪಷ್ಟನೆ ನೀಡಿದ್ದಾರೆ.

Next Story

RELATED STORIES