Top

ನಿನ್ನೆ ನಡೆದ ಗಲಾಟೆಯಿಂದಾಗಿ ನಿಜವಾದ ರೈತರ ಹೋರಾಟ ನೀರುಪಾಲಾದಂತೆ ಆಗಿದೆ

ಕೃಷಿ ಕಾಯ್ದೆ ಒಳ್ಳೆಯ ಕಾನೂನು ಆಗಿದೆ. ತಪ್ಪಿದ್ರೆ ತಿದ್ದಿಕೊಳ್ಳುಲು ಸರ್ಕಾರ ಸಿದ್ದವಿದೆ.

ನಿನ್ನೆ ನಡೆದ ಗಲಾಟೆಯಿಂದಾಗಿ ನಿಜವಾದ ರೈತರ ಹೋರಾಟ ನೀರುಪಾಲಾದಂತೆ ಆಗಿದೆ
X

ಬೆಳಗಾವಿ: ರೈತರ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವತ್ತೂ ವಿರೋಧ ಮಾಡಿಲ್ಲ, ನಿನ್ನೆ ರೈತರ ಹೋರಾಟ ನೋಡಿದ್ರೆ ಗೊತ್ತಾಗುತ್ತದೆ ರೈತ ಉದ್ದೇಶ ಏನಿತ್ತು ಅಂತ ಎಲ್ಲರಿಗೂ ನಿನ್ನೆ ಗೊತ್ತಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಬುಧವಾರ ಹೇಳಿದ್ದಾರೆ.

ದೆಹಲಿಯಲ್ಲಿ 72ನೇ ಗಣರಾಜ್ಯೋತ್ಸವದ ದಿನದಂದು ರೈತರ ಟ್ರ್ಯಾಕ್ಟರ್‌ ರ‍್ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರೈತರ ಹೋರಾಟಕ್ಕ ಪಂಜಾಬ್-ಹರಿಯಾಣದಿಂದ ಮಾತ್ರ ರೈತರ ಇದ್ದರು ಅಂತ ಕೆಲವು ಹೇಳುತ್ತಿದ್ದರು. ಆದರೆ, ನಿನ್ನೆ ಅದು ಸಾಬೀತಾಗಿದೆ. ನಿನ್ನೆ ನಡೆದ ರೈತರ ಗಲಾಟೆ ಖಂಡನಿಯ ಎಂದರು.

ತಾಳ್ಮೆ ಕಳೆದುಕೊಂಡು ಧ್ವಜ ಹಾರಿಸಬೇಕಾ(?) ಖಲಿಸ್ಥಾನ್​ ಧ್ವಜಾ ಎರಿಸಬೇಕಾ(?) ನಿನ್ನೆ ನಡೆದ ರೈತರ ಗಲಾಟೆ ನಿಜವಾದ ರೈತರ ಹೋರಾಟ ನೀರುಪಾಲಾದಂತೆ ಆಗಿದೆ. ಸೂಕ್ತ ತನಿಖೆ ನಡೆಸಿ ಸರಕಾರ ತಪ್ಪಿಸ್ತರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಹೇಳಿದರು.

ಕೃಷಿ ಕಾಯ್ದೆ ಒಳ್ಳೆಯ ಕಾನೂನು ಆಗಿದೆ. ತಪ್ಪಿದ್ರೆ ತಿದ್ದಿಕೊಳ್ಳುಲು ಸರ್ಕಾರ ಸಿದ್ದವಿದೆ. ಸುಪ್ರೀಂಕೋರ್ಟ್ ಕೂಡ ಸೂಚನೆ ನೀಡಬಹುದು. ಆದರೆ, ದೆಹಲಿಯಲ್ಲಿ ಭಾಗಿಯಾಗಿದ್ದ ರೈತರು ಇದು ಮುಗಿಬಾರದರು ಎಂದು ಮಾಡಿದ್ದಾರೆ ಎಂದಿದ್ದಾರೆ.

ಭಾರತದಲ್ಲಿ ಅಭದ್ರತೆ ಸೃಷ್ಟಿಸಲು ಚೀನಾ ಮತ್ತು ಪಾಕಿಸ್ತಾನದ ಕುತಂತ್ರ ಮಾಡುತ್ತಲೇ ಇದೆ. ದೆಹಲಿ ಗಲಾಟೆ ವಿಚಾರವಾಗಿ ಪಾಕಿಸ್ತಾನ ಟ್ವೀಟ್ ಮಾಡಿದೆ. ಹೋರಾಟ ಮುಂದುವರಿಸಿ ಅಂತ. ಗಲಾಟೆ ವಿಚಾರ ಸಮಗ್ರ ತನಿಖೆ ಆಗಬೇಕು. ತನಿಖೆ ಮಾಡಿದ ಮೇಲೆ ಗೊತ್ತಾಗುತ್ತದೆ. ಸರ್ಕಾರದಿಂದ ಸೂಕ್ತ ತನಿಖೆ, ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ತನಿಖೆ ಬಳಿಕ ಮತ್ತಷ್ಟು ಗೊತ್ತಾಗುತ್ತದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES