Top

ಏಕಲವ್ಯ ಎಂದಾಕ್ಷಣ ನೆನಪಾಗುವುದು ಗುರುದಕ್ಷಿಣೆ - ಸಿಎಂ ಬಿ.ಎಸ್​ ಯಡಿಯೂರಪ್ಪ

2028ರಲ್ಲಿ ಒಲಂಪಿಕ್ಸ್​ನಲ್ಲಿ ಕ್ರೀಡಾಪಟುಗಳು ದೇಶದ ಕೀರ್ತಿ ಪರಾಕೆ ಹಾರಿಸುವ ಕೆಲಸ ಮಾಡಬೇಕು ಅದಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡಲು ರಾಜ್ಯ ಸರ್ಕಾರ ಸಿದ್ದ

ಏಕಲವ್ಯ ಎಂದಾಕ್ಷಣ ನೆನಪಾಗುವುದು ಗುರುದಕ್ಷಿಣೆ - ಸಿಎಂ ಬಿ.ಎಸ್​ ಯಡಿಯೂರಪ್ಪ
X

ಬೆಂಗಳೂರು: ಏಕಲವ್ಯ ಎಂದಾಕ್ಷಣ ನೆನಪಾಗುವುದು ಗುರುದಕ್ಷಿಣೆ ಆಗಿ ಹೆಬ್ಬರಳನ್ನೇ ನೀಡಿದ ಶ್ರೇಷ್ಠ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಹೇಳಿದ್ದಾರೆ.

ನಗರದಲ್ಲಿಂದು ನಡೆದ ಏಕಲವ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಇನ್ನು ಕ್ರೀಡಾಪಟುಗಳು ಇದೊಂದೇ ಪ್ರಶಸ್ತಿಗೆ ತೃಪ್ತರಾಗದೆ ದೇಶವನ್ನು ವಿಶ್ವದಲ್ಲಿ ಬೆಳಗುವಂತೆ ಶ್ರಮವಹಿಸಬೇಕು. ಪ್ರಧಾನಿ ಆಶಯದಂತೆ ವಿಶ್ವ ಮಟ್ಟದಲ್ಲಿ ನಿಮ್ಮ ಸಾಧನೆ ತೋರಬೇಕು. ಆರೋಗ್ಯದ ಕಡೆಗೂ ಗಮನಹರಿಸಬೇಕು. ಪುರಾಣದಲ್ಲಿ ಬರುವ ಏಕಲವ್ಯ ನಿರಂತರ ಸಾಧನೆಯಿಂದ ಏನೆಲ್ಲಾ ಸಾಧಿಸಬಹುದು ಎನ್ನುವುಕ್ಕೆ ಉದಾಹರಣೆ ಎಂದು ಸಲಹೆ ನೀಡಿದರು.

ಸದ್ಯ ತರಬೇತುದಾರರು ಹೆಚ್ಚಿನ ಕ್ರೀಡಾಪಟುಗಳನ್ನು ಗುರುತಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅವರನ್ನೂ ಗೌರವಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಸ್ ಖೆಲ್​ ಇಂಡಿಯಾ, ಫಿಟ್ ಇಂಡಿಯಾ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. 2028ರಲ್ಲಿ ಒಲಂಪಿಕ್ಸ್​ನಲ್ಲಿ ರಾಜ್ಯದ ಕ್ರೀಡಾಪಟುಗಳು ದೇಶದ ಕೀರ್ತಿ ಪರಾಕೆ ಹಾರಿಸುವ ಕೆಲಸ ಮಾಡಬೇಕು ಅದಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡಲು ರಾಜ್ಯ ಸರ್ಕಾರ ಸಿದ್ದವಿದೆ ಎಂದು ಯುವ ಕ್ರೀಡಾಪಟ್ಟುಗಳಿಗೆ ಭರವಸೆ ನೀಡಿದರು.

Next Story

RELATED STORIES