Top

ಬೆಳಗಾವಿಯಲ್ಲಿ ಆಗಿರೋ ತೀರ್ಮಾನ ದೇಶಕ್ಕೆ ಮಾದರಿ - ಸಚಿವ ಕೆ.ಎಸ್​ ಈಶ್ವರಪ್ಪ

ದೇಶದ ಸ್ವಾತಂತ್ರ್ಯಕ್ಕಾಗಿ ಇಬ್ಬರ ಹೋರಾಟ ಸ್ಮರಣೀಯ. ಕೆಲ ಸಂಕುಚಿತ ಭಾವನೆ ಬೇರೆ ಬೇರೆ ಉಂಟಾಗಿತ್ತು.

ಬೆಳಗಾವಿಯಲ್ಲಿ ಆಗಿರೋ ತೀರ್ಮಾನ ದೇಶಕ್ಕೆ ಮಾದರಿ - ಸಚಿವ ಕೆ.ಎಸ್​ ಈಶ್ವರಪ್ಪ
X

ಬೆಳಗಾವಿ: ನಾಲ್ಕು ದಿನದ ಹಿಂದೆ ಬೆಳಗಾವಿಗೆ ಭೇಟಿ ತೀರ್ಮಾನ ಮಾಡಲಾಗಿತ್ತು. ಇಷ್ಟು ಸುಲಭವಾಗಿ ಮೂರ್ತಿ ವಿವಾದ ಇತ್ಯರ್ಥ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಹೇಳಿದ್ದಾರೆ.

ಶನಿವಾರ ಬೆಳಗಾವಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಶಿವಾಜಿ, ರಾಯಣ್ಣ ಮೂರ್ತಿ ವಿವಾದ ಇತ್ಯರ್ಥವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಇಬ್ಬರ ಹೋರಾಟ ಸ್ಮರಣೀಯ. ಕೆಲ ಸಂಕುಚಿತ ಭಾವನೆ ಬೇರೆ ಬೇರೆ ಉಂಟಾಗಿತ್ತುದೇಶದ ಸ್ವಾತಂತ್ರ್ಯಕ್ಕಾಗಿ ಇಬ್ಬರ ಹೋರಾಟ ಸ್ಮರಣೀಯ. ಕೆಲ ಸಂಕುಚಿತ ಭಾವನೆ ಬೇರೆ ಬೇರೆ ಉಂಟಾಗಿತ್ತು ಎಂದರು,

ಇನ್ನು ನಿನ್ನೆ ಆಗಿರೋ ತೀರ್ಮಾನ ರಾಷ್ಟ್ರ ಭಕ್ತರಿಗೆ ಸಂತೋಷ ತಂದಿದೆ. ರಾಯಣ್ಣ, ಶಿವಾಜಿ ಇಬ್ಬರು ಜಾತಿ, ಭಾಷೆಯನ್ನು ಮೀರಿದ್ದಾರೆ. ಬೆಳಗಾವಿಯಲ್ಲಿ ಆಗಿರೋ ತೀರ್ಮಾನ ದೇಶಕ್ಕೆ ಮಾದರಿ. ಈ ತೀರ್ಮಾನದಿಂದ ಎಲ್ಲರಿಗೂ ಸಂತೋಷ ಆಗಿದೆ. ಇದು ಮಾದರಿ ತೀರ್ಮಾನ ಎಂದು ಅವರು ತಿಳಿಸಿದರು.

ಸದ್ಯ ಗಲಾಟೆ ಸಂಬಂಧ ಮೂರು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಗೃಹ ಸಚಿವರ ಜತೆಗೆ ಚರ್ಚೆ ಮಾಡಿದ್ದೇನೆ. ಪ್ರಕರಣ ವಾಪಸ್ ಪಡೆಯುವ ಬಗ್ಗೆ ಮಾತಕತೆ ಮಾಡಿದ್ದೇನೆ. ಉಸ್ತುವಾರಿ ಸಚಿವ ರಮೇಶ್​ ಜಾರಕಿಹೊಳಿಗೆ ಅಭಿನಂದನೆ ಸಲ್ಲಿಸಬೇಕು. ರಾಯಣ್ಣ ಪ್ರತಿಮೆ ಸಂಬಂಧ ಅನೇಕರು ಹೋರಾಟ ಮಾಡಿದರು ಎಂದು ಕೆ.ಎಸ್​ ಈಶ್ವರಪ್ಪ ಅವರು ಮಾತನಾಡಿದ್ದಾರೆ.

Next Story

RELATED STORIES