Top

ಆಡಳಿತ ಹಾಗೂ ವಿಪಕ್ಷ ಎರಡರ ಕೆಲಸ ನಾವೇ ಮಾಡುತ್ತಿದ್ದೇವೆ - ಸಚಿವ ಕೆ.ಎಸ್​ ಈಶ್ವರಪ್ಪ

ರಾಜ್ಯದಲ್ಲಿ ಅಧಿಕಾರಕ್ಕೆ ಕಾಂಗ್ರೆಸ್ ಬರಲ್ಲ ಎಂದು ಪಕ್ಷದವರಿಗೆ ಗೊತ್ತಿದೆ. ಹೀಗಾಗಿ ಅವರು ಹೇಳುತ್ತಿಲ್ಲ

ಆಡಳಿತ ಹಾಗೂ ವಿಪಕ್ಷ ಎರಡರ ಕೆಲಸ ನಾವೇ ಮಾಡುತ್ತಿದ್ದೇವೆ - ಸಚಿವ ಕೆ.ಎಸ್​ ಈಶ್ವರಪ್ಪ
X

ಶಿವಮೊಗ್ಗ: ನಿರಂತರ ಜ್ಯೋತಿ ಯೋಜನೆಯಲ್ಲಿ ಅವ್ಯವಹಾರದ ಬಗ್ಗೆ ದೂರು ಬಂದಿತ್ತು. ಹೀಗಾಗಿ ಸಭೆ ನಡೆಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಸೋಮವಾರ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಿರಂತರ ಜ್ಯೋತಿ ಯೋಜನೆ ಸಭೆ ಬಳಿಕ ಮಾತನಾಡಿದ ಅವರು, ಅಪಾದನೆ ಮಾಡೋಕೆ ವಿಪಕ್ಷ ಇರೋದು, ರಾಜ್ಯದಲ್ಲಿ ನ್ಯಾಯಯುತವಾಗಿ ವಿಪಕ್ಷ ಸತ್ತು ಹೋಗಿದೆ. ಆಡಳಿತ ಹಾಗೂ ವಿಪಕ್ಷ ಎರಡರ ಕೆಲಸವನ್ನು ಸಹ ನಾವೇ ಮಾಡುತ್ತಿದ್ದೇವೆ ಎಂದಿದ್ದಾರೆ.

ಇನ್ನು ಸಿದ್ದರಾಮಯ್ಯ ಸಿಎಂ ಬದಲಾವಣೆ ಅಗ್ತಾರೆ ಅಂತ ಕನಸಿನಲ್ಲಿ- ಮನಸ್ಸಿನಲ್ಲಿ ಹೇಳ್ತಾ ಇರ್ತಾರೆ. ಇದು ಮೊದಲನೇ ಸರಿ ಏನು ಅಲ್ಲ. 57 ಅಥವಾ 58ನೇ ಸರಿ ಹೇಳಿರಬಹುದು. ಇತ್ತೀಚಿಗಷ್ಟೇ ಗ್ರಾಮ ಪಂಚಾಯತ್ ಚುನಾವಣೆ ಬಳಿಕ ಸಿಎಂ ಬದಲಾಗ್ತರೆ ಎಂದಿದರು. ಇವಾಗ ಮೂರು ತಿಂಗಳ ನಂತರ ಸಿಎಂ ಬದಲಾಗ್ತಾರೆ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.

ಸದ್ಯ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದನ್ನು ಮರೆತು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಿಎಂ ಸ್ಥಾನ ಕಳೆದುಕೊಂಡ ನಂತರ ಅವರಿಗೆ ಕುಳಿತುಕೊಳ್ಳೋಕೆ ಆಗುತ್ತಿಲ್ಲ. ಅದಷ್ಟು ಸಿಎಂ ಅಗೋಕೆ ಕಾಯುತ್ತಿದ್ದಾರೆ ಅದಕ್ಕೆ ಅವರು ನಾನೇ ಮುಂದಿನ ಸಿಎಂ ಎಂದು ಹೇಳ್ತಾ ಇದ್ದಾರೆ. ಆದರೆ, ಅವರ ಪಕ್ಷವೇ ಹೇಳಿಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಕಾಂಗ್ರೆಸ್ ಬರಲ್ಲ ಎಂದು ಪಕ್ಷದವರಿಗೆ ಗೊತ್ತಿದೆ. ಹೀಗಾಗಿ ಅವರು ಹೇಳುತ್ತಿಲ್ಲ ಎಂದರು.

ಕೊನೆಪಕ್ಷ ಅವರ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಾದರೂ, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಲಿ ನೋಡೋಣ. ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ನಂಬಿಕೆಯಿದೆ. ಹೀಗಾಗಿ ಯಾರು ಹಾಗೇ ಹೇಳಲ್ಲ. ಪಕ್ಷದ ಶಾಸಕರು, ಹೈಕಮಾಂಡ್ ನಾಯಕರು ಚರ್ಚೆ ಮಾಡಿ. ಸಿಎಂ ಯಾರು ಎಂದು ತೀರ್ಮಾನ ಮಾಡ್ತಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಸ್ವಯಂಘೋಷಿತ ಸಿಎಂ ಆಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ಅವರು ವ್ಯಂಗ್ಯವಾಡಿದ್ದಾರೆ.

Next Story

RELATED STORIES