Top

ಸರ್ಕಾರ ಬರಿ ಹೇಳಿಕೆ ಕೊಡುವುದಲ್ಲ ಮುಂದೆ ಈ ರೀತಿ ಆಗದಂತೆ ಕಠಿಣ ಕ್ರಮ ತೆಗೆದುಕೊಳ್ಬೇಕು

ರ್ಕಾರದ ಬೇಜಾವಾಬ್ದಾರಿ ಎದ್ದು ಕಾಣ್ತಿದೆ

ಸರ್ಕಾರ ಬರಿ ಹೇಳಿಕೆ ಕೊಡುವುದಲ್ಲ ಮುಂದೆ ಈ ರೀತಿ ಆಗದಂತೆ ಕಠಿಣ ಕ್ರಮ ತೆಗೆದುಕೊಳ್ಬೇಕು
X

ರಾಮನಗರ: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿವೆ. ಸರ್ಕಾರದ ಬೇಜಾವಾಬ್ದಾರಿ ಎದ್ದು ಕಾಣ್ತಿದೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಧಿಕಾರಿಗಳೇ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನಸಾಮಾನ್ಯರ ಜೀವದ ಬಗ್ಗೆ ಇವರಿಗೆ ಕಾಳಜಿ ಇಲ್ಲ ಎಂದಿದ್ದಾರೆ.

ಕಲ್ಲುಗಣಿಗಾರಿಕೆ ಹೆಚ್ಚಿನ ಹಣವಿದೆ. ಮರಳಿನ ಕೊರತೆಯಿಂದಾಗಿ ಉಲ್ಭಣಗೊಂಡಿದೆ. ಹೀಗಾಗಿ ಅಕ್ರಮ ಗಣಿಗಾರಿಕೆ ಹೆಚ್ಚು ನಡೆಯುತ್ತಿವೆ. ಸರ್ಕಾರ ಬರಿ ಹೇಳಿಕೆ ಕೊಡುವುದಲ್ಲ, ಅನುಭವವಿಲ್ಲದವರು ಸ್ಫೋಟ ವಸ್ತು ಸಾಗಿಸುತ್ತಿದ್ದಾರೆ. ಇದರಿಂದ ಇಂತಹ ಅವಘಡಗಳು ನಡೆಯುತ್ತಿವೆ. ಮುಂದೆ ಈ ರೀತಿ ಆಗದಂತೆ ಕಠಿಣ ಕ್ರಮ ತೆಗೆದುಕೊಳ್ಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೆಚ್ಡಿಕೆ ಆಗ್ರಹಿಸಿದ್ದಾರೆ.

Next Story

RELATED STORIES