ನಮಗೆ ಸಿಗಬೇಕಾದ ಆಹಾರಕ್ಕೆ ಕಲ್ಲಾಕುವ ಕೆಲಸ ಆಗುತ್ತಿದೆ
ನಮಗೆ ರಕ್ಷಣೆ ಬೇಕಾಗಿದೆ ನಮ್ಮ ವರ್ಗದ ಮೀಸಲಾತಿಗೆ ಕಲ್ಲಾಕುವುದನ್ನು ತಡೆಯಬೇಕಾಗಿದೆ ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು

X
Admin 29 March 2021 9:45 AM GMT
ಬೆಂಗಳೂರು: ಮೂರು ತಿಂಗಳಿಂದಲೂ ನೋಡುತ್ತಿದ್ದೇವೆ. 2Aನಲ್ಲಿ 15 ಪರ್ಸೆಂಟ್ ಮೀಸಲಾತಿ ಇದೆ. ಪ್ರಬಲ ವರ್ಗಗಳು ಕೂಡ ಇದನ್ನು ಕೇಳುತ್ತಿವೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಮಂಗಳವಾರ ಹೇಳಿದ್ದಾರೆ.
ನಗರದಲ್ಲಿಂದು ಸಿಎಂ ಬಿಎಸ್ವೈ ಅವರನ್ನು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯವರು ಭೇಟಿ ಮಾಡಿದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, 2A ಮೀಸಲಾತಿಯನ್ನು ಪ್ರಬಲ ವರ್ಗಗಳು ಕೇಳುವುದು ಸರಿಯಲ್ಲ, ನಮಗೆ ಸಿಗಬೇಕಾದ ಆಹಾರಕ್ಕೆ ಕಲ್ಲಾಕುವ ಕೆಲಸ ಆಗುತ್ತಿದೆ. ಪಂಚಮಸಾಲಿಯವರು 2 A ಮೀಸಲಾತಿ ಕೇಳುತ್ತಿದ್ದಾರೆ ಎಂದಿದ್ದಾರೆ.
ಇನ್ನು ಪ್ರಬಲ ವರ್ಗಗಳು ನಮ್ಮ ಹಕ್ಕನ್ನು ಕಿತ್ತುಕೊಳ್ಳಲು ಬಿಡಬಾರದು. ಅತಿ ಬಡವರು ಇರುವ ವರ್ಗಗಳಿಗೆ ಮೀಸಲಾತಿ ನೀಡಿ ಬೇಡ ಅನ್ನಲ್ಲ ಆದರೆ ಉನ್ನತ ವರ್ಗ ಅಥವಾ ಮೇಲ್ವರ್ಗಗಳಿಗೆ ಮೀಸಲಾತಿ ನೀಡುವುದು ಸರಿಯಲ್ಲ, ನಮಗೆ ರಕ್ಷಣೆ ಬೇಕಾಗಿದೆ ನಮ್ಮ ವರ್ಗದ ಮೀಸಲಾತಿಗೆ ಕಲ್ಲಾಕುವುದನ್ನು ತಡೆಯಬೇಕಾಗಿದೆ ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿದ್ದಾರೆ.
Next Story