Top

ಶಾಲೆಗಳ ಆರಂಭದ ಬಗ್ಗೆ ನಮ್ಮ ಇಲಾಖೆ ಯಾವುದೇ ನಿರ್ಧಾರ ಕೈಕೊಂಡಿಲ್ಲ - ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್

ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ಬಳಿಕ ವರ್ಗಾವಣೆ ಪ್ರಕ್ರಿಯೆ ಆರಂಭ ಮಾಡಲಾಗುವುದು

ಶಾಲೆಗಳ ಆರಂಭದ ಬಗ್ಗೆ ನಮ್ಮ ಇಲಾಖೆ ಯಾವುದೇ ನಿರ್ಧಾರ ಕೈಕೊಂಡಿಲ್ಲ - ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್
X

ಬೆಂಗಳೂರು: ಎರಡು ವಿಚಾರದ ಬಗ್ಗೆ ವಿಸ್ತೃತ ಸಭೆ ನಡೆದಿದೆ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಬೇರೆ ಬೇರೆ ಕಾರಣದಿಂದ ಮುಂದೆ ಹೋಗುತ್ತಿತ್ತು. ಕಳೆದ ಬಾರಿ ಚುನಾವಣಾ ನೀತಿ ಸಂಹಿತೆಯಿಂದ ಮುಂದೂಡಿಕೆ ಆಗಿತ್ತು. ವರ್ಗಾವಣೆ ಕುರಿತು ಚರ್ಚೆ ಆಗಿದೆ. ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ಬಳಿಕ ವರ್ಗಾವಣೆ ಪ್ರಕ್ರಿಯೆ ಆರಂಭ ಮಾಡಲಾಗುವುದು. ಚುನಾವಣಾ ಆಯೋಗದ ಜೊತೆ ಮಾತಾಡಿ ದಿನಾಂಕ ಘೋಷಣೆ ಮಾಡಲಾಗುತ್ತೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್ ಅವರು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವರ್ಗಾವಣೆಗೆ ಸಂಬಂಧಿಸಿದ ಪೂರ್ವಭಾವಿ ಸಿದ್ಧತೆ ನಡೆದಿದೆ. ಇವತ್ತಿನ ಚರ್ಚೆ ನಂತರ ಪ್ರಾಶುಂಪಾಲರ ಹುದ್ದೆಗೆ ಪದೋನ್ನತಿ (Promotion) ಮಾಡಲಾಗಿತ್ತೆ. ಉಪನ್ಯಾಸಕರ ವರ್ಗಾವಣೆ ಕೂಡ ನಡೆಯಲಿದೆ ಎಂದಿದ್ದಾರೆ.

ಇನ್ನೂ ಶಾಲೆಗಳ ಆರಂಭದ ಬಗ್ಗೆ ಈ ಗಳಿಗೆ ವರೆಗೂ ಇಲಾಖೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಶಾಲೆ ಆರಂಭದ ಬಗ್ಗೆ ಮಾಹಿತಿ ಇವತ್ತು ಸಂಗ್ರಹಿಸಲಾಗಿದೆ. ಬೇರೆ ಬೇರೆ ರಾಜ್ಯದ ಸ್ಥಿತಿಗತಿ ಅವಲೋಕನ ಮಾಡಿದ್ದೇವೆ. ಮುಂದಿನ ಎರಡು ದಿನ ಸಮಾಜ ಕಲ್ಯಾಣ, ಆರೋಗ್ಯ, ಬಿಬಿಎಂಪಿ ಎಸ್​ಡಿಎಂಸಿ ಅಧಿಕಾರಿಗಳ ಜೊತೆ ಚರ್ಚೆ ಆಗಲಿದೆ. ಆ ಚರ್ಚೆಯ ಅಭಿಪ್ರಾಯದ ಮೇಲೆ ಒಂದು ವರದಿ ಸಲ್ಲಿಕೆ ಆಗಲಿದೆ. ಆಶ್ರಮ, ಕಿತ್ತೂರು ಚೆನ್ನಮ್ಮ, ಮೊರಾರ್ಜಿ ದೇಸಾಯಿ ಶಾಲೆಗಳ ಜೊತೆ ಆಯುಕ್ತರು ಜೊತೆ ಮಾಡಲಿದ್ದಾರೆ. ಈ ಚರ್ಚೆಗಳು ಆದ ಮೇಲೆ ವರದಿ ನೋಡಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

Next Story

RELATED STORIES