Top

ಸರಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ರೈತರನ್ನು ಪ್ರಚೋದಿಸುತ್ತಿದೆ - ಬಿ.ಶ್ರೀರಾಮುಲು

ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ ಕಾಂಗ್ರೇಸ್ ಬಳಿ ಮುಖ ಇಲ್ಲ ಹಾಗಾಗಿ ರೈತರ ಹೆಸರು ಹೇಳಿಕೊಂಡು ಹೋರಾಟ ಮೂಲಕ ಹೋಗಲು ಷಡ್ಯಂತ್ರ ನಡೆಯುತ್ತಿದೆ

ಸರಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ರೈತರನ್ನು ಪ್ರಚೋದಿಸುತ್ತಿದೆ - ಬಿ.ಶ್ರೀರಾಮುಲು
X

ಬೆಳಗಾವಿ: ರೈತರ ವಿಚಾರದಲ್ಲಿ ನಮಗೆ ಗೌರವವಿದೆ. ರೈತರು ಯಾರು ಇಂತಹ ಗಲಾಟೆ ಮಾಡಿಲ್ಲ, ನಿನ್ನೆಯ ಘಟನೆಯಲ್ಲಿ ಕಾಂಗ್ರೆಸ್​ನ ಕೆಲ ನಾಯಕರು ರೈತರಾಗಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರು ಬುಧವಾರ ಹೇಳಿದ್ದಾರೆ.

ದೆಹಲಿಯಲ್ಲಿನ ರೈತರ ಪ್ರತಿಭಟನೆ ವೇಳೆ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನಿಪ್ಪಾಣಿ ಹಂಚನಾಳ ಗ್ರಾಮದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್​ನವರಿಗೆ ಇವತ್ತು ರೈತರು ನೆನಪಾಗುತ್ತಿದ್ದಾರೆ ಎಂದರು.

ರೈತರಿಗೆ ಅನೂಕುಲ ಆಗಲಿ ಅಂತಾ ಕಾನೂನು ಮಾಡಲಾಗಿದೆ ಅದನ್ನ ಕೂತು ಮಾತನಾಡಿಕೊಳ್ಳಬೇಕು. ಸರಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ರೈತರನ್ನು ಪ್ರಚೋದಿಸುತ್ತಿದೆ. ಐದು ರಾಜ್ಯದ ಚುನಾವಣಾ ಹಿನ್ನೆಲೆ ಕಾಂಗ್ರೆಸ್ ಈ ರೀತಿ ರೈತರನ್ನು ಪ್ರಚೋದಿಸುತ್ತಿದೆ. ಚುನಾವಣಾ ಗೆಲ್ಲಲು ಕಾಂಗ್ರೆಸ್ ಪಕ್ಷ ರೈತರ ಬೆಂಬಲ ಪಡೆಯಲು ಈ ರೀತಿ ಪ್ರಚೋದನೆ ನೀಡಿ ಚುನಾವಣೆ ಗೆಲ್ಲಲು ಷಡ್ಯಂತ್ರ ಮಾಡುತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಡಿ.ಕೆ. ಶಿವಕುಮಾರ್ ಒಂದು ದಿನವೂ ದೆಹಲಿಗೆ ಹೋಗಿಲ್ಲ, ರೈತರ ಹೋರಾಟ ನೋಡಿಲ್ಲಾ ಇಂದು ರೈತರ ಪರ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್​​ನವರು ಹತಾಶರಾಗಿ ಈ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ರೈತರ ಜೋತೆ 11 ಸಭೆ ಮಾಡಿದ್ದಾರೆ ರೈತರು ಸಮಾಧಾನ ದಿಂದಲೆ ಹೋಗಿದ್ದಾರೆ. ಕಾಂಗ್ರೆಸ್ ನಾಯಕರು ನಿರುದ್ಯೋಗಿಗಳಾಗಿದ್ದಾರೆ. ಹತಾಶೆಯಿಂದ ರೈತರಾಗಿ ಬಿಂಬಿಸಿ ಪ್ರಚೋದನೆ ಮಾಡಿ, ಈ ರೀತಿ ಮಾಡುತ್ತಿದ್ದಾರೆ. ನಿನ್ನೆಯ ದೆಹಲಿ ರೈತರ ಗಲಾಟೆ ಬಗ್ಗೆ ತನಿಖೆ ನಡೆಯುತ್ತಿದೆ ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ ಕಾಂಗ್ರೆಸ್​​ ಬಳಿ ಮುಖ ಇಲ್ಲ ಹಾಗಾಗಿ ರೈತರ ಹೆಸರು ಹೇಳಿಕೊಂಡು ಹೋರಾಟ ಮೂಲಕ ಹೋಗಲು ಷಡ್ಯಂತ್ರ ನಡೆಯುತ್ತಿದೆ ಎಂದು ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದ್ದಾರೆ.

Next Story

RELATED STORIES