Top

ಸಿಎಲ್​ಪಿ ನಾಯಕರ ವಿರುದ್ಧ ಮಾತನಾಡಿಲ್ಲ - ಮಾಜಿ ಸಚಿವ ತನ್ವೀರ್​ ಸೇಠ್

ಸಿಎಲ್​ಪಿ ನಾಯಕರ ವಿರುದ್ಧ ಮಾತನಾಡಿಲ್ಲ, ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದೇನೆ.

ಸಿಎಲ್​ಪಿ ನಾಯಕರ ವಿರುದ್ಧ ಮಾತನಾಡಿಲ್ಲ - ಮಾಜಿ ಸಚಿವ ತನ್ವೀರ್​ ಸೇಠ್
X

ಬೆಂಗಳೂರು: ಪಕ್ಷದಲ್ಲಿ ಯಾವ ಬಣವೂ ಉದ್ಬವವಾಗಲ್ಲ, ಆ ಬಣ ಈ ಬಣ ಯಾವುದೂ ಇಲ್ಲ, ನಾನು ಪಕ್ಷದ ಸಿದ್ಧಾಂತಗಳಿಗೆ ಅಂಟಿಕೊಂಡವನು. ನಮ್ಮ ವಿಚಾರಧಾರೆಗಳಲ್ಲಿ ಸ್ವಲ್ಪ ಗೊಂದಲವಿದೆ ಎಂದು ಮಾಜಿ ಸಚಿವ ತನ್ವೀರ್​ ಸೇಠ್ ಅವರು ಸೋಮವಾರ ಹೇಳಿದ್ದಾರೆ.

ಮೈಸೂರು ಪಾಲಿಕೆ ಮೇಯರ್ ಆಯ್ಕೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್​ ಮೈತ್ರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಮೈತ್ರಿ ಮಾಡಿಕೊಳ್ಳದೇ ಹೋಗಿದ್ದರೆ ಕಷ್ಟವಾಗುತ್ತಿತ್ತು. ಅವರು ಬಿಜೆಪಿ ಜೊತೆಹೋಗುತ್ತಿದರು. ನಮಗೆ ಮೇಯರ್ ಪಡೆಯೋಕೆ ಜವಾವ್ದಾರಿ ಕೊಟ್ಟಿದ್ದರು. ಸಿಎಲ್​ಪಿ ನಾಯಕರೇ ಕೊಟ್ಟಿದ್ದರು. ನಾವು ಸುಮ್ಮನೆ ಬಿಟ್ಟಿದರೆ ಫಲಿತಾಂಶ ಏನಾಗುತ್ತಿತ್ತು. ಬಿಜೆಪಿ ದೂರು ಇಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.

ಸಿಎಲ್​ಪಿ ನಾಯಕರ ವಿರುದ್ಧ ಮಾತನಾಡಿಲ್ಲ, ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದೇನೆ. ಪಕ್ಷಕ್ಕೆ ವರದಿ ಕೇಳಿದ್ರು ಕೊಟ್ಟಿದ್ದೇನೆ. ಸಮುದಾಯದ ನಾಯಕತ್ವಕ್ಕೆ ನಾನು ತಿರುಗಿಬಿದ್ದಲ್ಲ, ಜಮೀರ್ ಬೆಳೆಸಿದರು ಅನ್ನೋ ಕೋಪವೂ ಇಲ್ಲ ಎಂದು ಹೇಳಿದರು.

ಸದ್ಯ ನಾನು ಜನರಿಂದ ಆಯ್ಕೆ ಆದವನು. ಸಾಮೂಹಿಕ ನಾಯಕತ್ವ ಒಪ್ಪಿಕೊಂಡಿದ್ದೇವೆ. ನಾನು ಇಂತವರಿಂದಲೇ ಬೆಳೆಯಬೇಕೆಂದಿಲ್ಲ, ನಾನು ಪಕ್ಷದಿಂದ ಕಾಲನ್ನ ಹೊರಗಿಟ್ಟಿಲ್ಲ, ನಾನು ಪಕ್ಷದಲ್ಲೇ ಉಳಿದಿದ್ದೇನೆ. ಇಂದು ಪಾಲಿಕೆ ಹೊಂದಾಣಿಕೆ ಬಗ್ಗೆ ವರದಿ ಕೊಟ್ಟಿದ್ದೇನೆ ಎಂದು ತನೀರ್​ ಸೇಠ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES