Top

ಮುಂಬೈ ಕೇಂದ್ರಾಡಳಿತ ಮಾಡಿ ಎಂಬ ಠಾಕ್ರೆ ಹೇಳಿಕೆ ವಿರುದ್ಧ ಕೆರಳಿದ ಕನ್ನಡಿಗರು

ಮಹಾರಾಷ್ಟ್ರ ಸಿಎಂ ಠಾಕ್ರೆ ಹೊತ್ತಿಸಿದ ಗಡಿ ಕಿಡಿ ಕನ್ನಡಿಗರ ರಕ್ತ ಕುದಿಯುವಂತೆ ಮಾಡಿದೆ

ಮುಂಬೈ ಕೇಂದ್ರಾಡಳಿತ ಮಾಡಿ ಎಂಬ ಠಾಕ್ರೆ ಹೇಳಿಕೆ ವಿರುದ್ಧ ಕೆರಳಿದ ಕನ್ನಡಿಗರು
X

ಬೆಳಗಾವಿ: ಮಹಾ ಸಿಎಂ ಉದ್ಧವ ಠಾಕ್ರೆ ವಿರುದ್ಧ ಕನ್ನಡಿಗರು ಕೆರಳಿದ್ದಾರೆ. ಬೆಳಗಾವಿಯಲ್ಲ ಮುಂಬೈ ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಡಿಸಿಎಂ ಲಕ್ಷ್ಮಣ ಸವದಿ ಏಟಿಗೆ ಎದುರೇಟು ನೀಡಿದ್ದಾರೆ. ಇತ್ತ ಕುಂದಾನಗರಿಯಲ್ಲಿ ಠಾಕ್ರೆ ಪ್ರತಿಕೃತಿ ದಹಿಸಿ ಕನ್ನಡ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.

ನಿನ್ನೆ ಮುಂಬೈನಲ್ಲಿ ಗಡಿ ಕುರಿತು ವಿವಾದಾತ್ಮಕ ಪುಸ್ತಕವನ್ನ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಬಿಡುಗಡೆ ಗೊಳಿಸಿದ್ದಾರೆ. ಗಡಿ ವಿವಾದವನ್ನ ಮತ್ತೆ ಕೆದುಕಿದ ಠಾಕ್ರೆ ಬೆಳಗಾವಿಯನ್ನ ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಉದ್ಧಟತನದ ಹೇಳಿಕೆ ನೀಡಿದ್ದರು. ಈಗ ಮಹಾ ಸಿಎಂ ಠಾಕ್ರೆ ಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಮಂಗಳರಾತಿ ಮಾಡಿದ್ದಾರೆ. ಗಡಿ ವಿವಾದ ಕೆದುಕಿದ ಠಾಕ್ರೆ ಗೆ ಕನ್ನಡಿಗರ ಹೊಸ ಹಕ್ಕೊತ್ತಾಯವನ್ನ ಮಾಡಿದ್ದಾರೆ. ನಾವು ಮುಂಬೈ ಕರ್ನಾಟಕದವರು. ಹೀಗಾಗಿ ಕರ್ನಾಟಕ ಕ್ಕೆ ಮುಂಬೈ ಸೇರಬೇಕು. ನಮ್ಮ ಕನ್ನಡಿಗರದ್ದು ಹಕ್ಕು ಮುಂಬೈ ಮೇಲಿದೆ. ಕರ್ನಾಟಕ ಕ್ಕೆ ಮುಂಬೈ ಸೇರಿಸುವ ತನಕ ಮುಂಬೈಯನ್ನ ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಕೇಂದ್ರ ಸರ್ಕಾರ ಕ್ಕೆ ಒತ್ತಾಯ ಮಾಡುತ್ತೇವೆ ಎಂದು ಹೇಳುವ ಮೂಲಕ ಡಿಸಿಎಂ ಲಕ್ಷ್ಮಣ ಸವದಿ ಮಹಾ ಸಿಎಂ ಉದ್ಧವ ಠಾಕ್ರೆ ಗೆ ಖಡಕ್ಕಾಗಿಯೇ ಟಾಂಗ್ ಕೊಟ್ಟಿದ್ದಾರೆ.

ಇನ್ನೂ ಉದ್ಧವ ಠಾಕ್ರೆ ಉದ್ಧಟತನ ಕ್ಕೆ ಕನ್ನಡಿಗರು ಮತ್ತೆ ಕೆರಳಿದ್ದಾರೆ. ಕರುನಾಡ ಸೇನೆ ಕಾರ್ಯಕರ್ತರು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಠಾಕ್ರೆ ವಿರುದ್ಧ ಪ್ರತಿಭಟನೆ ನಡೆಸಿದ್ರು. ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಪ್ರತಿಕೃತಿ ದಹಿಸಿ ಬೆಳಗಾವಿಯೂ ನಮ್ಮದೇ... ಮುಂಬೈಯನ್ನ ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಆಗ್ರಹಿಸಿದ್ರು.ಇನ್ನೂ ಮುಂಬೈ ಕರ್ನಾಟಕ ಕ್ಕೆ ಸೇರಿಸಬೇಕೆಂದು ನಾವು ಬೇಡಿಕೆ ಇಡ್ತಿವಿ ಅಂತಾ ಹೇಳಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪರ ಘೋಷಣೆ ಕೂಗಿ ಕನ್ನಡ ಹೋರಾಟಗಾರರು ಹರ್ಷ ವ್ಯಕ್ತ ಪಡಿಸಿದ್ರು.

ಸದ್ಯ ಮಹಾರಾಷ್ಟ್ರ ಸಿಎಂ ಠಾಕ್ರೆ ಹೊತ್ತಿಸಿದ ಗಡಿ ಕಿಡಿ ಕನ್ನಡಿಗರ ರಕ್ತ ಕುದಿಯುವಂತೆ ಮಾಡಿದೆ. ಬೆಳಗಾವಿ ನಮ್ಮದು ಎನ್ನುತ್ತಿರುವ ಮಹಾರಾಷ್ಟ್ರ ಸರ್ಕಾರ ಕ್ಕೆ ಈಗ ಕನ್ನಡಿಗರು ಮುಂಬೈ ನಮ್ಮದು ಅಂತಾ ಹಕ್ಕೊತ್ತಾಯ ಮಾಡುವ ಮೂಲಕ ಏಟಿಗೆ ಏದುರೇಟು ನೀಡಿದ್ದಾರೆ. ಗಡಿ ಪ್ರದೇಶದಲ್ಲಿ ಸದ್ಯ ಗಡಿ ವಿವಾದ ಬೂದಿಮುಚ್ಚಿದ ಕೆಂಡದಂತಿದೆ.

Next Story

RELATED STORIES