Top

ಶಿವಾಜಿ ದೇಶದ ಸ್ವಾಭಿಮಾನವಾದ್ರೆ, ಸಂಗೊಳ್ಳಿ ರಾಯಣ್ಣ ಕನ್ನಡಿಗರ ಸ್ವಾಭಿಮಾನ - ಸಂಸದ ಪ್ರತಾಪ್ ಸಿಂಹ

ಇಬ್ಬರೂ ಕೂಡ ನಮಗೆ ಮುಖ್ಯ. ಇಬ್ಬರ ಪ್ರತಿಮೆ ಎರಡೂ ರಾಜ್ಯಗಳಲ್ಲಿ ಆಗಬೇಕು.

ಶಿವಾಜಿ ದೇಶದ ಸ್ವಾಭಿಮಾನವಾದ್ರೆ, ಸಂಗೊಳ್ಳಿ ರಾಯಣ್ಣ ಕನ್ನಡಿಗರ ಸ್ವಾಭಿಮಾನ - ಸಂಸದ ಪ್ರತಾಪ್ ಸಿಂಹ
X

ಮೈಸೂರು: ಭಾಷೆ ಹೆಸರಿನಲ್ಲಿ ಸೌಹಾರ್ದತೆ ಹಾಳು ಮಾಡೋದು ಬೇಡ ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಾಜಿ ದೇಶದ ಸ್ವಾಭಿಮಾನವಾದ್ರೆ, ಸಂಗೊಳ್ಳಿ ರಾಯಣ್ಣ ಕನ್ನಡಿಗರ ಸ್ವಾಭಿಮಾನ. ಯಾರು ಹೆಚ್ಚು, ಯಾರು ಕಡಿಮೆ ಅಂತಾ ನೋಡೋಕೆ. ಕೆಲವರು ಪ್ರಯತ್ನ ಮಾಡುತ್ತಿರೋದು ಸರಿಯಲ್ಲ ಸರಿಯಲ್ಲ ಎಂದು ಅವರು ಹೇಳಿದರು.

ಇನ್ನು ಇಬ್ಬರೂ ಕೂಡ ನಮಗೆ ಮುಖ್ಯ. ಇಬ್ಬರ ಪ್ರತಿಮೆ ಎರಡೂ ರಾಜ್ಯಗಳಲ್ಲಾಗಬೇಕು. ಕನ್ನಡಿಗರು, ಮರಾಠಿಗರು ಅಂತಾ ಸಾಮರಸ್ಯ ಹಾಳು ಮಾಡುವುದು ಬೇಡ. ಈಗಾಗಲೇ ಸಿಎಂ ಬೆಳಗಾವಿಗೆ ಎಡಿಜಿಪಿ ಅವರನ್ನ ಕಳುಹಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಮಾತುಕತೆ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಯಾರೂ ಹೆಚ್ಚು ಪ್ರತಿಕ್ರಿಯೆ ಕೊಡೋದು ಬೇಡ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರು ನುಡಿದರು.

ಮೈಸೂರು ನಿರ್ಗಮಿತ DC ಅಭಿರಾಮ್ ಜಿ ಶಂಕರ್ ಬಗ್ಗೆ ಸಂಸದ ಪ್ರತಾಪ್ ಸಿಂಹ ಮೆಚ್ಚುಗೆ ಮಾತುಗಳನ್ನಾಡಿದ ಅವರು, ಇತ್ತೀಚಿಗೆ ನಾನು ಕಂಡ ಪ್ರಮಾಣಿಕ ಜಿಲ್ಲಾಧಿಕಾರಿ ಅಭಿರಾಮ್. ಅವರು ಶುದ್ಧ ಹಸ್ತ ಹಾಗೂ ದಕ್ಷ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಮೈಸೂರಿನ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಮುಂದಿನ ಕೆಲಸಗಳಿಗೆ ಯಶಸ್ಸು ಸಿಗಲೆಂದು ಹಾರೈಸುತ್ತೇನೆ ಎಂದಿದ್ದಾರೆ.

Next Story

RELATED STORIES