Top

ಲೈಂಗಿಕ ಕಿರುಕುಳ ಪ್ರಕರಣ: ಶಿಕ್ಷಕನಿಗೆ 10 ವರ್ಷ ಜೈಲುವಾಸ, 50 ಸಾವಿರ ದಂಡ ವಿಧಿಸಿದ ಕೋರ್ಟ್​

ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ಸೂಕ್ತ ಪರಿಹಾರ ನೀಡುವಂತೆಯೂ ಕೋರ್ಟ್​ ಆದೇಶಿಸಿದೆ.

ಲೈಂಗಿಕ ಕಿರುಕುಳ ಪ್ರಕರಣ: ಶಿಕ್ಷಕನಿಗೆ 10 ವರ್ಷ ಜೈಲುವಾಸ, 50 ಸಾವಿರ ದಂಡ ವಿಧಿಸಿದ ಕೋರ್ಟ್​
X

ಮೈಸೂರು: 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕನಿಗೆ ಎಫ್​ಟಿಎಮ್​ಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯವು ಆರೋಪಿಗೆ 10 ವರ್ಷ ಜೈಲು, 50 ಸಾವಿರ ರೂಪಾಯಿ ದಂಡ ವಿಧಿಸಿದೆ.

ನವೆಂಬರ್ 2016ರಲ್ಲಿ ಈ ಅಪರಾಧ ಪ್ರಕರಣ ನಡೆದಿತ್ತು. ಮೈಸೂರಿನ ಹುಲ್ಲಿನ ಬೀದಿಯಲ್ಲಿ ಘಟನೆ ಸಂಭವಿಸಿತ್ತು. ಕೆ.ಎಂ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಶಿಕ್ಷಕ ಈ ಕೃತ್ಯದಲ್ಲಿ ಭಾಗಿಯಾಗಿದ್ದ. ಎಸ್​ಎಸ್​ಎಲ್​ಸಿಯಲ್ಲಿ ಟಾಪರ್ ಮಾಡುವುದಾಗಿ ಬಾಲಕಿ ಆಮಿಷಯೊಡ್ಡಿ, ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಈ ಘಟನೆಯ ಸಂಬಂಧ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಧೀಶರಾದ ಬಿ.ಎಸ್​ ಜಯಶ್ರೀ ಅವರಿಂದ ಆದೇಶ ನೀಡಿದ್ದಾರೆ.

ಪಿಪಿ ಎಮ್​ಎಸ್​ ಮಂಜುಳಾ ಅವರು ಸರ್ಕಾರದ ಪರ ವಾದ ಮಂಡಿಸಿದರು. ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ಸೂಕ್ತ ಪರಿಹಾರ ನೀಡುವಂತೆಯೂ ಕೋರ್ಟ್​ ಆದೇಶ ನೀಡಿದೆ.

Next Story

RELATED STORIES