Top

ಇರೋ ಎರಡು ತಿಂಗಳು ಮುಂದೂಡಿದರೆ ಆಕಾಶವೇನು ತಲೆ ಮೇಲೆ ಬೀಳಲ್ಲ - ವೈ.ಎಸ್.​ವಿ ದತ್ತಾ

ಸಿಲಬಸ್ ಯಾವುದು ಇರುತ್ತದೆ, ಯಾವುದು ಇರಲ್ಲ ಗೊತ್ತಿಲ್ಲ, ನನಗೂ ಸ್ವಲ್ಪ ಗೊಂದಲವಿದೆ

ಇರೋ ಎರಡು ತಿಂಗಳು ಮುಂದೂಡಿದರೆ ಆಕಾಶವೇನು ತಲೆ ಮೇಲೆ ಬೀಳಲ್ಲ - ವೈ.ಎಸ್.​ವಿ ದತ್ತಾ
X

ಬೆಂಗಳೂರು: ವಿಧಾನ ಪರಿಷತ್​ನ ಉಪಸಭಾಪತಿ ಎಸ್​.ಎಲ್​ ಧರ್ಮೇಗೌಡರ ಸ್ವಭಾವ ಬಹಳ ಸೂಕ್ಷ್ಮದವರು, ತುಂಬಾ ಧೈರ್ಯವಂತರೂ ಹೌದು ಎಂದು ಮಾಜಿ ಸಚಿವ ವೈ.ಎಸ್​.ವಿ ದತ್ತಾ ಅವರು ಬುಧವಾರ ಹೇಳಿದರು.

ವಿಧಾನಸೌಧದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡ ಅವರು ಅನೇಕ ಏಳು ಬೀಳುಗಳನ್ನ ಕಂಡಿದ್ದಾರೆ. ಅವರಿಗೆ ಅವಮಾನ ಆಗುವಂತಾದ್ದೇನಿಲ್ಲ, ರಾಜಕೀಯ ಕಾರಣಗಳು ಕಾರಣವೇನಲ್ಲ, ಅವರ ಸ್ವಭಾವವನ್ನು ನಾನು ಹತ್ತಿರದಿಂದ ಬಲ್ಲೆ, ರಾಜಕೀಯ ಕಾರಣಕ್ಕೆ ಅವರು ಆ ರೀತಿ ಮಾಡಿಕೊಂಡಿಲ್ಲ ಎಂದರು.

ಶಾಲಾ-ಕಾಲೇಜು ಪ್ರಾರಂಭಿಸುವ ವಿಚಾರಕ್ಕೆ ಸಂಬಂಧಸಿದಂತೆ ಮಾತನಾಡಿದ ಅವರು, ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಪಾರ ಬುದ್ದಿವಂತರು. ನಾನು ಒಬ್ಬ ಮೇಷ್ಟ್ರು. ನಾನು ಆನ್​ಲೈನ್ ಪಾಠ ಮಾಡುತ್ತಿದ್ದೇನೆ. ಉಚಿತವಾಗಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಉಚಿತ ಪಾಠ ಮಾಡುತ್ತಿದ್ದೇನೆ. ಮಾಡ್ತಿದ್ದೇನೆ. ಸಿಲಬಸ್ ಯಾವುದು ಇರುತ್ತದೆ, ಯಾವುದು ಇರಲ್ಲ ಗೊತ್ತಿಲ್ಲ, ನನಗೂ ಸ್ವಲ್ಪ ಗೊಂದಲವಿದೆ ಎಂದಿದ್ದಾರೆ.

ಇನ್ನು ಅನೇಕ ಚಾಪ್ಟರ್ ತೆಗೆಯುತ್ತೇವೆ ಅಂತಿದ್ದಾರೆ. ಮೂರು ತಿಂಗಳು ಮಾತ್ರ ಉಳಿದಿದೆ. ಶೇ.70ರಷ್ಟು ಸಮಯ ಮುಗಿದು ಹೋಗಿದೆ. ನಾವು ಪಾಠ ಮಾಡಿಯೇ ತೀರ್ತೇವೆ ಅಂದರೆ ಹೇಗೆ(?) ಈಗ ಅವರನ್ನ ಪಾಸ್ ಮಾಡಿಕಳಿಸಿದ್ರೆ ಹೇಗೆ(?) ಪಿಯುಸಿಯಲ್ಲಿ ಅವರ ಭವಿಷ್ಯ ಏನಾಗಬೇಕು. ಪರೀಕ್ಷೆ, ವೇಳಾಪಟ್ಟಿ ತಜ್ಙರು ಕುರಿತು ಚರ್ಚಿಸಬೇಕು. ವಿದ್ಯಾರ್ಥಿ, ಪೋಷಕರ ಅಭಿಪ್ರಾಯ ಮುಖ್ಯ. ಅವರು ಮಕ್ಕಳನ್ನ ಕಳಿಸಲ್ಲ ಅಂದರೆ ಹೇಗೆ(?) ನಾವು ಬಲವಂತವಾಗಿ ಕರೆದು ತರೋಕೆ ಸಾಧ್ಯವೇ(?) ಬ್ರಿಟನ್ ವೈರಸ್ ಬೇರೆ ಆತಂಕ ಸೃಷ್ಟಿಸಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ತಜ್ಙರು,ಆರೋಗ್ಯ ತಜ್ಙರು ನಿರ್ಧರಿಸಬೇಕು. ಇರೋ ಎರಡು ತಿಂಗಳು ಮುಂದೂಡಿದರೆ ಆಕಾಶವೇನು ತಲೆ ಮೇಲೆ ಬೀಳಲ್ಲ ಎಂದು ಮಾಜಿ ಸಚಿವ ವೈಎಸ್​ವಿ ದತ್ತಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Next Story

RELATED STORIES