Top

ರ‍್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಅಯೋಗ್ಯ - ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್

ಮನೆಯಲ್ಲಿ ಗೌರಿ ಗಣೇಶನನ್ನ ಪೂಜಿಸುತ್ತೇವೆ. ಮಹದೇಶ್ವರ ಜಾನಪದ ಹಾಡುಗಳೆಂದರೆ ಅದರಲ್ಲಿ ನಮ್ಮ ಸಂಸ್ಕೃತಿಯಿದೆ.

ರ‍್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಅಯೋಗ್ಯ -  ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್
X

ಮೈಸೂರು: ರ‍್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಅಯೋಗ್ಯ ಎಂದು ಮೈಸೂರು ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಅವರು ವಾಗ್ದಾಳಿ ನಡೆಸಿದ್ದಾರೆ.

ಕೋಲುಮಂಡೆ ಹಾಡಿನ ವಿವಾದ ಹಿನ್ನೆಲೆ ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಮನೆಯಲ್ಲಿ ಗೌರಿ ಗಣೇಶನನ್ನ ಪೂಜಿಸುತ್ತೇವೆ. ಮಹದೇಶ್ವರ ಜಾನಪದ ಹಾಡುಗಳೆಂದರೆ ಅದರಲ್ಲಿ ನಮ್ಮ ಸಂಸ್ಕೃತಿ ಇದೆ. ಹುಡುಗಿಯರನ್ನ ಕೆಟ್ಟ ರೀತಿಯಲ್ಲಿ ಬಳಸಿಕೊಂಡು ಅಶ್ಲೀಲವಾಗಿ ಬಿಂಬಿಸುತ್ತಾನೆ ಎಂದು ಅವರು ಹೇಳಿದ್ದಾರೆ.

ಇನ್ನು ನಮ್ಮ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸ ಮಾಡಬಾರದು. ಹೊಸತನ ಕೋಡ್ತೀವಿ ಅಂತ ಇಂಗ್ಲೆಂಡ್​ನ ರೀತಿ ಮ್ಯೂಸಿಕ್ ಮಾಡ್ತೀವಿ ಅಂತಾರೆ. ಲವ್​-ಗಿವ್ ಸಾಂಗ್​ಗಳನ್ನು ಅವರಿಷ್ಟ ಬಂದಂತೆ ಮಾಡಿಕೊಳ್ಳಲಿ. ಆದರೆ, ನಮ್ಮ ಸಂಸ್ಕೃತಿಯನ್ನು ಸಾಯಿಸುವ ಕೆಲಸ ಆಗಬಾರದು ಎಂದರು.

ರ‍್ಯಾಪ್​​ ಸಾಂಗ್ ಕೇಳೋದು ಹಿತವಿರಬಹುದು. ಸಾಂಸ್ಕೃತಿಕವಾಗಿ, ದೇವಿ ಹಿನ್ನೆಲೆಯ ಪ್ರಭಾವಳಿಯನ್ನು ನಾವು ಇಟ್ಟುಕೊಂಡಿದ್ದೆವೆ. ನಮ್ಮ ಸಂಸ್ಕೃತಿಯ ತತ್ವಕ್ಕೆ ಅವಮಾನ ಮಾಡುವಂತ ಕೆಲಸ ಆಗಬಾರದು. ಕೂಡಲೇ ಆ ಸಾಂಗ್ ಹಿಂಪಡೆಯಬೇಕು ಎಂದು ಇತಿಹಾಸ ತಜ್ಞ ನಂಜರಾಜೇ ಅರಸ್ ಅವರು ಹೇಳಿದ್ದಾರೆ.

Next Story

RELATED STORIES