Top

ರಾಮನಗರದಲ್ಲಿ ರಣಹದ್ದುಗಳ ಆರ್ಭಟ ಇಳಿದಿದೆ - ಸಚಿವ ಸಿ.ಪಿ ಯೋಗೇಶ್ವರ್

ರಾಮನಗರದ ಉಸ್ತುವಾರಿ ಕೊಟ್ಟರೆ ನಿಭಾಯಿಸುತ್ತೇನೆ

ರಾಮನಗರದಲ್ಲಿ ರಣಹದ್ದುಗಳ ಆರ್ಭಟ ಇಳಿದಿದೆ - ಸಚಿವ ಸಿ.ಪಿ ಯೋಗೇಶ್ವರ್
X

ಕೋಲಾರ: ಖಾತೆ ಬದಲಾವಣೆ ಮಾಡಿದ್ದಕ್ಕೆ ಬೇಸರವಿಲ್ಲ, ತಮ್ಮ ನಿವಾಸಕ್ಕೆ ಕರೆಸಿ ಸಿಎಂ ನನ್ನೊಡನೆ ಮಾತನಾಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ ಯೋಗೇಶ್ವರ್ ಅವರು ಹೇಳಿದರು.

ಕೋಲಾರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಆಡಳಿತಾತ್ಮಕ ದೃಷ್ಟಿಯಿಂದ ಕೆಲ ನಿರ್ಧಾರ ಮಾಡಬೇಕು ಅದಕ್ಕೆ ಖಾತೆ ಬದಲಾವಣೆ ಎಂದಿದ್ದರು. ಖಾತೆ ಬದಲಾವಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು, ನಾವು ಅವರಿಗೆ ಸಾಥ್ ಕೊಡಬೇಕಾಗುತ್ತದೆ. ಖಾತೆ ಬದಲಾವಣೆಗೆ ಅಸಮಾಧಾನವೇನಿಲ್ಲ ಎಂದರು.

ಇನ್ನು ರಾಮನಗರದ ಉಸ್ತುವಾರಿ ಕೊಟ್ಟರೆ ನಿಭಾಯಿಸುತ್ತೇನೆ, ಕೋಲಾರ ಕೊಟ್ಟರೂ ನಾನು ಮಾಡುತ್ತೇನೆ. ಕೋಲಾರ ಕೂಡ ನಮ್ಮ ರಾಜ್ಯದಲ್ಲೇ ಇದೆ. ಅದೇನು ಬೇರೆ ಅಲ್ಲವಲ್ಲ, ಪ್ರವಾಸೋದ್ಯಮಕ್ಕೆ ಇಲ್ಲೂ ಸಾಕಷ್ಟು ಅವಕಾಶಗಳಿವೆ. ಅದರ ಬಗ್ಗೆ ಉತ್ತಮ ಕಾರ್ಯಕ್ರಮ ತರ್ತೇನೆ ಎಂದಿದ್ದಾರೆ.

ಸದ್ಯ ರಾಮನಗರದಲ್ಲಿ ರಣಹದ್ದುಗಳ ಆರ್ಭಟ ಇಳಿದಿದೆ. ನಾನು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ಅವರು ಮಾತನಾಡಿದ್ದಾರೆ.

Next Story

RELATED STORIES