Top

ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲೆಗಳ ಅಸಮಾಧಾನ

ಮುಂದಿನ ವರ್ಷದ ಇಂಡೆಂಟ್ ನೀಡುವಂತೆ ಶಿಕ್ಷಣ ಇಲಾಖೆಯಿಂದ ಒತ್ತಡ.

ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲೆಗಳ ಅಸಮಾಧಾನ
X

ಬೆಂಗಳೂರು: ಈ ವರ್ಷ ಹೆಚ್ಚಾಗಿ ಬುಕ್ ಹಿಡಿಯದ ಮಕ್ಕಳು, ಆನ್ ಲೈನ್ ಮೂಲಕವೇ ಶೈಕ್ಷಣಿಕ ವರ್ಷ ಪೂರೈಸುತ್ತಿದ್ದಾರೆ. ಆದರೆ, ಇದೇ ಬುಕ್ ವಿಚಾರ ಈಗ ಮತ್ತೊಂದು ವಿರೋಧಕ್ಕೆ ಕಾರಣವಾಗಿದೆ. ಇಷ್ಟು ದಿನ ಶುಲ್ಕಕ್ಕೆ ತಲೆ ಕೆಡಿಸಿಕೊಳ್ತಿದ್ದ ಖಾಸಗಿ ಶಾಲೆಗಳಿಗೆ ಇಲಾಖೆ ಮುಂದಿನ ವರ್ಷದ ಬುಕ್ ಖರೀದಿಗೆ ಇಂಡೆಂಟ್ ನೀಡುವಂತೆ ಆದೇಶ ಹೊರಡಿಸಿದೆ. ಇದು ಖಾಸಗಿ ಶಾಲಾ ಒಕ್ಕೂಟದ ಆಕ್ರೋಶಕ್ಕೆ ಕಾರಣವಾಗಿದೆ.

ಪೋಷಕರು ಶುಲ್ಕ ಪಾವತಿಸಿಲ್ಲ, ಸಂಕಷ್ಟಕ್ಕೆ ಸಿಲುಕಿದ್ದೇವೆ ಅಂತ ಖಾಸಗಿ ಶಾಲೆಗಳು ಗೊಣಗಾಡುತ್ತಿವೆ. ಈ ಬಗ್ಗೆ ಪ್ರತಿಭಟಿಸಿದರು, ಸರ್ಕಾರ ಮಾತ್ರ ಖ್ಯಾರೆ ಅಂದಿಲ್ಲಾ. ಹಾಗಾಗಿ ಕೋರ್ಟ್ ಮೆಟ್ಟಿಲೇರಿದ್ದು ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಹೊಸ ಟೆನ್ಷನ್ ಕೊಟ್ಟಿದೆ ಅಂತಾ ಖಾಸಗಿ ಶಾಲಾ ಒಕ್ಕೂಟಗಳು ಆರೋಪಿಸಿವೆ. ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ 2021-22ನೇ ಶೈಕ್ಷಣಿಕ ಅವಧಿಗೆ ಅವಶ್ಯವಾದ ಪಠ್ಯ ಪುಸ್ತಕ ಖರೀದಿಸಲು ಅಂಕಿ-ಅಂಶ ನೀಡುವಂತೆ ರಾಜ್ಯ ಪಠ್ಯ ಪುಸ್ತಕ ಸಂಘದಿಂದ ಒತ್ತಡ ಹಾಕಲಾಗುತ್ತಿದ್ಯಂತೆ.

ಈ ವರ್ಷದ ಶುಲ್ಕದ ಗೊಂದಲದಿಂದ ಅಡ್ಮಿಷನ್ ಪ್ರಕ್ರಿಯೆಯೇ ಸರಿಯಾಗಿ ಆಗಿಲ್ಲ. ಪೋಷಕರು ಮತ್ತು ಖಾಸಗಿ ಶಾಲೆಗಳ ನಡುವೆ ಈಗಲೂ ಪೀಕಲಾಟ ನಿಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪುಸ್ತಕ ಖರೀದಿಸಲು ಅಂಕಿ-ಅಂಶ ಕೇಳಿದ್ರೆ ಹೇಗೆ ಅಂತ ಖಾಸಗಿ ಶಾಲೆಗಳು ಫುಲ್ ಗರಂ ಆಗಿವೆ. ಕಳೆದ ವರ್ಷ ಖರೀದಿಸಿದ ಪುಸ್ತಕಳನ್ನೇ ಇನ್ನು ಯಾರೂ ಪಡೆದುಕೊಂಡಿಲ್ಲ. ಮುಂದಿನ ವರ್ಷಕ್ಕೆ ಖರಿದೀಸಿ ಅನ್ನೋದು ಎಷ್ಟರ ಮಟ್ಟಿಗೆ ಸರಿ. ಖಾಸಗಿ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿ ನೋಡಿ ಉಚಿತ ಪಠ್ಯ ಪುಸ್ತಕ ನೀಡಿ ಅಂತಾ ಕಾಮ್ಸ್ ಮನವಿ ಮಾಡಿಕೊಂಡಿದೆ.

ಮುಂದಿನ ಶೈಕ್ಷಣಿಕ ವರ್ಷದ ಪುಸ್ತಕ ಮುದ್ರಣಕ್ಕೆ ಸರ್ಕಾರ 125 ಕೋಟಿ ರೂ. ಟೆಂಡರ್ ನೀಡಿದೆ. ರಾಜ್ಯದಲ್ಲಿ ಒಟ್ಟು 41 ಸಾವಿರ ಸರ್ಕಾರಿ ಶಾಲೆಗಳಿದ್ದು, 29,990 ಖಾಸಗಿ ಶಾಲೆಗಳಿವೆ. ಇದರಲ್ಲಿ 2,500 ಸಿಬಿಎಸ್ ಸಿ ಹಾಗೂ 500 ಐಸಿಎಸ್​ಇ ಶಾಲೆಗಳಿವೆ. ಖಾಸಗಿ ಶಾಲೆಯಲ್ಲಿ ಒಟ್ಟು 65 ಲಕ್ಷ ವಿದ್ಯಾರ್ಥಿಗಳ ವ್ಯಾಸಾಂಗ ಮಾಡುತ್ತಿದ್ದು, ಕನಿಷ್ಠ 35 ಲಕ್ಷ ಮಕ್ಕಳು ಕಡ್ಡಾಯವಾಗಿ ಖರೀದಿ ಮಾಡ್ಲೇ ಬೇಕು ಶಿಕ್ಷಣ ಇಲಾಖೆ ನಿಯಮ. 41 ಲಕ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರವೇ ಪುಸ್ತಕ ಉಚಿತ ನೀಡುತ್ತಿದೆ. ಆದರೆ, ಯಾವುದೇ ಪುಸ್ತಕಗಳು ಹೇಳಿಕೊಳ್ಳುವಷ್ಟು ಕ್ವಾಲಿಟಿ ಇರೊಲ್ಲ. ಆದರೆ, ಸಿಬಿಎಸ್ ಸಿ ಸ್ಕೂಲ್ ಗಳಿಗೆ ಎನ್​ಸಿಆರ್​ಟಿನಿಂದ ಪುಸ್ತಕ ವಿತರಣೆ ಮಾಡಲಾಗುತ್ತೆ. ಜೊತೆಗೆ ಪ್ರತಿ ಪುಸ್ತಕದ ಮೇಲೂ ಖಾಸಗಿ ಶಾಲೆಗಳಿಗೆ ಶೇ.20 ರಿಯಾಯಿತಿ ಇದೆ. ಇಂತಹ ಅನುಕೂಲ ಸ್ಟೇಟ್ ಸಿಲೆಬಸ್ ಶಾಲೆಗಳಿಗಿಲ್ಲ ಅಂತ ವಿರೋಧ ವ್ಯಕ್ತಪಡಿಸಿದ್ದಾರೆ.

ಸದ್ಯ ಈಗಲೇ ಶುಲ್ಕದ ವಿಚಾರವಾಗಿ ಗೊಂದಲಕ್ಕೆ ಸಿಲುಕಿರುವ ಶಿಕ್ಷಣ ಇಲಾಖೆ, ಮತ್ತೊಂದು ಪೇಚಿಗೆ ಸಿಲುಕಿದೆ. ಪುಸ್ತಕ ಖರೀದಿಗೆ ಇಂಡೆಂಟ್ ನೀಡುವಂತೆ ಒತ್ತಾಯಿಸುತ್ತಿದ್ದೂ, ಖಾಸಗಿ ಶಾಲೆಗಳು ಇಕ್ಕಟ್ಟಿಗೆ ಸಿಲುಕಿವೆ. ಇತ್ತ ಶಿಕ್ಷಣ ಇಲಾಖೆ ಆಯುಕ್ತ ಮನವಿ ಸ್ವೀಕರಿಸಿ, ಶಿಕ್ಷಣ ಸಚಿವರಿಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

Next Story

RELATED STORIES