Top

ಪೋಷಕರ ಪ್ರತಿಭಟನೆ ಹಿನ್ನೆಲೆ ಸಚಿವ ಎಸ್​ ಸುರೇಶ್ ಕುಮಾರ್ ಮನೆಗೆ ಪೊಲೀಸ್ ಸರ್ಪಗಾವಲು

ಪ್ರತಿಭಟನೆಗೂ ಮುನ್ನವೇ ಪೋಷಕರು ಖಾಕಿ ವಶಕ್ಕೆ

ಪೋಷಕರ ಪ್ರತಿಭಟನೆ ಹಿನ್ನೆಲೆ ಸಚಿವ ಎಸ್​ ಸುರೇಶ್ ಕುಮಾರ್ ಮನೆಗೆ ಪೊಲೀಸ್ ಸರ್ಪಗಾವಲು
X

ಬೆಂಗಳೂರು: ಶುಲ್ಕ ವಿಚಾರವಾಗಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದ ಶಿಕ್ಷಣ ಸಚಿವರ ವಿರುದ್ದ ರಾಜ್ಯದ ಪೋಷಕರು ಸಿಡಿದೆದ್ದಿದ್ದಾರೆ. ಪ್ರತಿಭಟನೆ ನಡೆಸಿದರು. ಸುಮ್ಮನಿರೋ ಸುರೇಶ್ ಕುಮಾರ್ ವಿರುದ್ಧ ಇಂದು ವಿನೂತನ ಪ್ರತಿಭಟನೆಗೆ ಮುಂದಾಗಿದರು ಆದರೆ ಪೋಷಕರ ವಿನೂತನ ಪ್ರತಿಭಟನೆಯನ್ನು ಆರಂಭಕ್ಕೂ ಮುನ್ನವೇ ಖಾಕಿ ಹತ್ತಿಕ್ಕಿದೆ.

ಜೂನ್​ನಲ್ಲಿ ಆರಂಭವಾಗಬೇಕಿದ್ದ ಪ್ರಸ್ತುತ ಶೈಕ್ಷಣೀಕ ವರ್ಷ ಕೊರೊನಾದಿಂದಾಗಿ ಜನವರಿ 1 ರಿಂದ ಆರಂಭವಾಗಿದೆ. 10, 12ನೇ ತರಗತಿ ತರಗತಿ ಆರಂಭವಾಗಿದ್ದು ವಿದ್ಯಾಗಮ ಕೂಡ ನಡಿತಿದೆ. ಆದರೆ, ಇದೆಲ್ಲದರ ಮಧ್ಯೆ ಫೀಸ್ ವಿಚಾರ ಮಾತ್ರ ಕಗ್ಗಂಟಾಗಿಯೇ ಉಳಿದಿದ್ದು ಶಾಲೆಗಳು ಪೂರ್ಣ ಪ್ರಮಾಣದ ಫೀಸ್ ಕಟ್ಟುವಂತೆ ಒತ್ತಡ ಹೇರ್ತಿವೆ. ಇತ್ತ ಪೋಷಕರ ಕೇವಲ ಎರಡ್ಮೂರು ತಿಂಗಳಿಗೆ ಪೂರ್ಣ ಪ್ರಮಾಣದ ಫೀಸ್​ಯಾಕೆ ಕಟ್ಟಬೇಕು ಎಂದು ಪ್ರಶ್ನೆ ಮಾಡುತ್ತಿದ್ದು ಶಿಕ್ಷಣ ಸಚಿವರ ಮೌನ ಅವರ ಆಕ್ರೋಶವನ್ನು ಹೆಚ್ಚಿಸಿದೆ.


ಕಳೆದ ಎರಡು ಬಾರಿ ಪ್ರತಿಭಟನೆ ಮಾಡಿದ್ದ ಪೋಷಕರು ಇಂದು ಬಸವೇಶ್ವರ ನಗರದಲ್ಲಿರೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನೆ ಮುಂದೆ ವಿನೂತನ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು. ಶಿಕ್ಷಣ ಸಚಿವರ ಮನೆ ಮುಂದಿನ ರಸ್ತೆ ಕಸ ಗುಡಿಸುವ ಮೂಲಕ ಮೌನ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು. ಆದರೆ, ಪೋಷಕರು ಪ್ರತಿಭಟನೆಗೆ ನಿರ್ಧರಿಸಿರೋ ಹಿನ್ನೆಲೆ ಶಿಕ್ಷಣ ಸಚಿವರ ಮನೆ ಮುಂದೆ ಪೋಲಿಸ್ ಸರ್ಪಗಾವಲು ಹಾಕಲಾಗಿತ್ತು. ಸಚಿವರ ಮನೆ ಸಂಪರ್ಕಿಸುವ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ ಹಾಕಿ ಕೆಎಸ್​ಆಆರ್​ಪಿ ತುಕಡಿ ಸೇರಿದಂತೆ ಪೋಲಿಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು.

ಇತ್ತ ಪೋಷಕರು ಪೊರಕೆ ಸಮೇತ ಬೆಳಗ್ಗೆ 6:50ಕ್ಕೆ ಶಿಕ್ಷಣ ಸಚಿವರ ಮನೆ ಹತ್ತಿರ ಆಗಮಿಸ್ತಾ ಇದ್ದಂತೆ ಪೋಲಿಸರು ಅಲರ್ಟ್ ಆದರು. ಅನುಮತಿ ಇಲ್ಲದೇ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುವಂತಿಲ್ಲಾ. ನೀವೆಲ್ಲಾ ಹೋಗಿ ಎಂದು ಮನವಿ ಮಾಡಿಕೊಂಡರು. ಆದರೆ, ಪೋಷಕರು ಮನವಿಗೆ ಜಗ್ಗದೇ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೋಲಿಸರು ಪೋಷಕರನ್ನಾ ವಶಕ್ಕೆ ಪಡೆದರು. ಇನ್ನೂ ಈ ಸಂದರ್ಭ ಪೋಲಿಸರು ಇಬ್ಬರೂ ಪೋಷಕರನ್ನು ರಸ್ತೆಯಲ್ಲಿಯೇ ಎಳೆದಾಡಿದ ಘಟನೆ ಕೂಡ ನಡೆಯಿತು.

ಬೆಳಗ್ಗೆ 6 ಗಂಟೆಗೆ ಪೋಷಕರನ್ನು ವಶಕ್ಕೆ ಪಡೆದಿದ್ದ ಬ್ಯಾಡರಹಳ್ಳಿ ಪೋಲಿಸರು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಿದ್ದಾರೆ. ಇವತ್ತಿನ ಮೌನ ಪ್ರತಿಭಟನೆಯನ್ನು ಹತ್ತಿಕ್ಕಿರೋದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳೋವರೆಗೂ ಹೋರಾಟ ಮುಂದುವರೆಸೋದಾಗಿ, ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋದಾಗಿ ಎಚ್ಚರಿಸಿದ್ದಾರೆ.

Next Story

RELATED STORIES