Top

ಖಾಸಗಿ ಶಾಲೆಯವರ ಒತ್ತಡಕ್ಕೆ ಮಕ್ಕಳ ಪೋಷಕರು ಕಂಗಾಲು

ಶುಲ್ಕ ಭರಿಸಲು ಪೋಷಕರಿಗೆ ಖಾಸಗಿ ಶಾಲೆಗಳ ಒತ್ತಡ

ಖಾಸಗಿ ಶಾಲೆಯವರ ಒತ್ತಡಕ್ಕೆ ಮಕ್ಕಳ ಪೋಷಕರು ಕಂಗಾಲು
X

ಬಳ್ಳಾರಿ: ಕಳೆದ ವರ್ಷದಿಂದ ಕರೋನಾ ಮಹಾಮಾರಿ ಸಾಕಷ್ಟು ಜನರನ್ನು ಸಂಕಷ್ಟಕ್ಕೆ ದೂಡಿದೆ. ಆದರೆ, ಅಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಕರೋನಾಗಿಂತ ಹೆಚ್ಚಿನ ಸಂಕಷ್ಟವನ್ನು ಅಲ್ಲಿನ ಜನರಿಗೆ ನೀಡುತ್ತೀವೆ.

ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಆಂಧ್ರಪ್ರದೇಶದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಂದ ಪೋಷಕರಿಗೆ ಕಿರುಕುಳ ಆರಂಭವಾಗಿದೆ. ತರಗತಿಗಳನ್ನು ನಡೆಸದಿದ್ದರೂ ಶಾಲಾ ಶುಲ್ಕ ಭರಿಸುವಂತೆ ನಗರದ ಕೆಲ ಖಾಸಗಿ ಶಾಲೆಗಳವರು ಪೋಷಕರನ್ನು ಪೀಡಿಸುತ್ತೀದ್ದಾರೆ.

ಜೂನ್​ನಿಂದ ಜಾರಿಗೆ ಬರುವಂತೆ ಪ್ರವೇಶ ಶುಲ್ಕ, ತಿಂಗಳ ಶುಲ್ಕವನ್ನು ಕಡ್ಡಾಯವಾಗಿ ಭರಿಸಬೇಕು. ಇಲ್ಲವಾದಲ್ಲಿ ಅವರ ಪ್ರವೇಶ ರದ್ದುಗೊಳಿಸಲಾಗುವುದು ಎಂದು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಕೆಲ ಪೋಷಕರ ಆರೋಪವಾಗಿದೆ. ಲಾಕ್​ಡೌನ್​ನಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಇಂತಹ ಸಂದರ್ಭದಲ್ಲಿ ಯಾರಿಂದಲೂ ದುಬಾರಿ ಶುಲ್ಕ ವಸೂಲಿ ಮಾಡಬಾರದು ಅಂಥಾ ಸರ್ಕಾರದ ಆದೇಶ ಗಣಿ ಜಿಲ್ಲೆಯಲ್ಲಿ ಬೆಲೆ ಇಲ್ಲದಂತಾಗಿದೆ.

ಇನ್ನೂ ಗಣಿ ಜಿಲ್ಲೆಯ ಕೆಲವು ಖಾಸಗಿ ಶಾಲೆಗಳು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಪ್ರವೇಶದ ಒಟ್ಟು ಶುಲ್ಕ ಈಗ ಭರಿಸಿ, ಜೂನ್​ನಿಂದ ಸೆಪ್ಟೆಂಬರ್ ವರೆಗಿನ ಮಾಸಿಕ ಶುಲ್ಕ ಭರಿಸಬೇಕು ಎಂದು ಶಾಲೆಗಳು ಒತ್ತಡ ಹೇರುತ್ತಿವೆ. ಶಾಲೆಗಳನ್ನೇ ನಡೆಸುತ್ತಿಲ್ಲ. ಶುಲ್ಕ ಪಾವತಿಸುವುದು ಹೇಗೆ ಎನ್ನುವುದು ಪೋಷಕರ ಪ್ರಶ್ನೆಯಾಗಿದೆ. ವಾಟ್ಸ್​ಪ್​ನಲ್ಲಿ ಹೋಂವರ್ಕ್ ಹಾಕುತ್ತಾರೆ. ಆದರೆ, ಜೂನ್​ನಿಂದ ಇದುವರೆಗೆ ಶುಲ್ಕ ಭರಿಸಬೇಕು. ಆನ್​ಲೈನ್​ ಕ್ಲಾಸ್​ಗೆ ಹೆಚ್ಚುವರಿ ಶುಲ್ಕ ಭರಿಸುವಂತೆ ಪೀಡಿಸುತ್ತಿದ್ದಾರೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಹಣ ಕಟ್ಟದಿದ್ದಲ್ಲಿ ನಿಮ್ಮ ಮಗಳ ಪ್ರವೇಶ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರುಗಳನ್ನು ಡಿಡಿಪಿಐ ಅವರಿಗೆ ನೀಡಿದ್ರೇ ಶಾಲಾ ಆಡಳಿತ ಮಂಡಳಿಗಳಿಗೆ ಹೆಚ್ಚಿನ ಶುಲ್ಕ ಪಡೆಯದಂತೆ ಸೂಚನೆ ನೀಡಿದ್ದಾರೆ ಹೇಳಿದರು.

ಸದ್ಯ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಡುತ್ತೀರುವ ಫೀ ಕಿರುಕುಳಕ್ಕೆ ಜನತೆ ಬೇಸತ್ತೀದ್ದಾರೆ. ಇಲ್ಲಿಯವರೆಗೆ ಮೌಖಿಕ ದೂರು ಬಂದಿವೆ. ಸಮಸ್ಯೆ ಬಗೆಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಲಿಖಿತ ರೂಪದಲ್ಲಿ ದೂರನ್ನು ನೀಡಿದ್ರೇ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಬಳ್ಳಾರಿ ಶಿಕ್ಷಣ ಇಲಾಖೆ ಮುಂದಾಗಿದೆ.

Next Story

RELATED STORIES