Top

ಬಾಂಬೆನಲ್ಲಿ ಏನ್ ಮಾಡುತ್ತಿದರು ಅಂತ ಈಗ ಹೇಳಲಿ - ಮಾಜಿ ಸಚಿವ ಸಾ.ರಾ ಮಹೇಶ್

ವಿಡಿಯೋ ಪ್ರಸಾರಕ್ಕೆ ತಡೆಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನವಾಗಿದೆ.

ಬಾಂಬೆನಲ್ಲಿ ಏನ್ ಮಾಡುತ್ತಿದರು ಅಂತ ಈಗ ಹೇಳಲಿ - ಮಾಜಿ ಸಚಿವ ಸಾ.ರಾ ಮಹೇಶ್
X

ಮೈಸೂರು: ಯಾರ್ಯಾರು ನ್ಯಾಯಾಲಯಕ್ಕೆ ಹೋಗಿದ್ದಾರೆ ಅವರನ್ನ ಸಂಪುಟದಿಂದ ವಜಾ ಮಾಡಿ, ಇದನ್ನ ಸದನಲ್ಲು ಒತ್ತಾಯ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಶಾಸಕ ಸಾ.ರಾ ಮಹೇಶ್ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಅಂಗೈ ಹುಣ್ಣಿಗೆ ಕನ್ನಡಿ ಬೇಕೇ(?) ಅರ್ಜಿ ಹಾಕಿರೋದೆ ನಾವೇಲ್ಲ ತಲೆ ತಗ್ಗಿಸೋ ವಿಚಾರವಾಗಿದೆ. ಇದೇಲ್ಲದರ ಹಿಂದೆ ಒಂದು ಷಡ್ಯಂತ್ರ ಇದೆ ಅದು ಆಚೆಗೆ ಬರಬೇಕು. ಬಾಂಬೆಯಲ್ಲೂ ಅಷ್ಟು ಟೈಟ್ ಸೆಕ್ಯೂರಿಟಿ ಇಟ್ಟುಕೊಂಡಿದ್ದವರು ಯಾಕೆ ಅರ್ಜಿ ಹಾಕಿದ್ದೀರಿ. ಇವರನ್ನ ಇಟ್ಟುಕೊಂಡು ಬ್ಲಾಕ್ಮೆಲ್ ಮಾಡುವ ಷಡ್ಯಂತ್ರ ಮೊದಲೇ ಆಗಿತ್ತಾ(?) ಸಚಿವರನ್ನೆ ಬ್ಲಾಕ್​ಮೇಲ್ ಮಾಡುವುದಾದರೆ ಜನಸಾಮಾನ್ಯರ ಗತಿ ಏನು(?) ಸಿಎಂ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದರು.

ನಮ್ಮ ಸ್ನೇಹಿತರು ಹಿಂದೆ ಹೇಳಿದಾಗ ಸುಳ್ಳು ಅಂದುಕೊಂಡೆ. ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೆತ್ತೀನಿ ಅಂದಿದರು ಬಹುಶಃ ಅದರಲ್ಲಿ ಇದು ಉಲ್ಲೇಖ ಆಗಬಹುದು. ಜನಪರ ಸರ್ಕಾರ ತರಲು ಬಾಂಬೆಗೆ ಹೋಗಿದ್ವಿ ಅಂದರು. ಬಾಂಬೆನಲ್ಲಿ ಏನ್ ಮಾಡುತ್ತಿದರು ಅಂತ ಈಗ ಹೇಳಲಿ. ಅದನ್ನ ಮಾತನಾಡೋಕು ಅಸಹ್ಯ ಆಗುತ್ತೆ ಎಂದು ಹೇಳಿದರು.

ಇನ್ನು ವಿಡಿಯೋ ಪ್ರಸಾರಕ್ಕೆ ತಡೆಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನವಾಗಿದೆ. ನಿಮಗೆ ಯಾಕೆ ಅನುಮಾನ. ಮೊನ್ನೆಯು ಅನೇಕ ಶಾಸಕರ ವಿಡಿಯೋ ಇದೆ ಅಂತ ಹೇಳಿದ್ದರು. ಆ ಹೇಳಿಕೆ ನೀಡಿದವರನ್ನ ತಕ್ಷಣ ಯಾಕೆ ಅರೆಸ್ಟ್ ಮಾಡಲಿಲ್ಲ. ಅದೇನು ಬ್ಲಾಕ್ ಮೇಲ್ ತಂತ್ರನಾ(?) ಈ ಘಟನೆಯಿಂದ ನಮ್ಮ ಕುಟುಂಬದವರೇ ಅನುಮಾನದಿಂದ ನೋಡುತ್ತಿದ್ದಾರೆ. ತಪ್ಪು ಮಾಡದೆ ಇದ್ರೆ ನೀವ್ಯಾಕೆ ನ್ಯಾಯಾಲಯಕ್ಕೆ ಹೋದ್ರೆ. ಮನೆಲಿ ಕುಟುಂಬಸ್ಥರ ಜೊತೆ ಕುಳಿತು ಟಿವಿ ನೋಡೋಕೆ ಹಿಂಸೆ ಆಗುತ್ತಿದೆ. ಇದು ನಾವೇಲ್ಲರು ತಲೆ ತಗ್ಗಿಸೋ ವಿಚಾರವಾಗಿದ್ದು, ಬಾಂಬೆಗೆ ಹೋದವರ ಬಗ್ಗೆ ಇನ್ನು ಏನೇನು ಇದೇಯೋ(?) ಈ ರೀತಿಯ ಸರ್ಕಾರ ತರೋಕಾ ಬಾಂಬೆಗೆ ಹೋಗಿದ್ದು. ಇದೇನಾ ನಿಮ್ಮ ಘನಕಾರ್ಯ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಪ್ರಶ್ನೆ ಮಾಡಿದ್ದಾರೆ.

Next Story

RELATED STORIES