Top

ಇಂದಿನಿಂದ 50 ದಿನ ಯಾರಿಗೂ ರಜೆ ಇಲ್ಲ - ಸಚಿವ ಡಾ.ಕೆ ಸುಧಾಕರ್

ಸಣ್ಣಪುಟ್ಟ ಲೋಪಗಳಿದ್ರೆ ನಮ್ಮ ಗಮನಕ್ಕೆ ತನ್ನಿ. ಅದನ್ನ ಸರಿಪಡಿಸೋ ಕೆಲಸ ಮಾಡುತ್ತೇವೆ.

ಇಂದಿನಿಂದ 50 ದಿನ ಯಾರಿಗೂ ರಜೆ ಇಲ್ಲ - ಸಚಿವ ಡಾ.ಕೆ ಸುಧಾಕರ್
X

ವಿಧಾನಸೌಧ: ರಾಜ್ಯದಲ್ಲಿ ಕೋವಿಡ್ ಎರಡನೇ ಹಂತದ ಮುನ್ಸೂಚನೆಯಿದ್ದು ಇದರ ಹಿನ್ನೆಲೆ ಅಧಿಕಾರಿಗಳು, ವೈದ್ಯರ ಸಭೆ ನಡೆಸಿದ್ದೇನೆ. ನಿರ್ದಿಷ್ಟ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಗುರುವಾರ ಹೇಳಿದ್ದಾರೆ.

ಈ ಸಂಬಂಧ ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿರ ಹಾಸಿಗೆ ಮೀಸಲಿಟ್ಟಿದ್ದು, ವ್ಯಾಕ್ಸಿನ್ ಕೊಡುವ ಪ್ರಮಾಣ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಒಂದೇ ದಿನದಲ್ಲಿ ಎರಡು ಲಕ್ಷ ಗುರಿಯಿದೆ. ಸ್ವಯಂ ಪ್ರೇರಿತರಾಗಿ 60 ವರ್ಷ ಮೇಲ್ಪಟ್ಟವರು ಬನ್ನಿ. ಯವಕರು ಅವರನ್ನ ಕರೆತರುವಂತೆ ಸಚಿವರು ಮನವಿ ಮಾಡಿದ್ದಾರೆ.

ಪ್ರತಿ ವಾರ್ಡಿಗೆ ಆಂಬ್ಯುಲೆನ್ಸ್ ನೀಡಲಾಗುತ್ತಿದೆ. 200 ಆ್ಯಂಬುಲೆನ್ಸ್​ ನೇಮಕ ಬೆಂಗಳೂರಿಗೆ, ಗೃಹ ವೈದ್ಯರು ಸೇರಿದಂತೆ ಹಿಂದೆ ತೆಗೆದುಕೊಂಡಿದ್ದ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಕೋವಿಡ್ ವಾರ್ ರೂಮ್ ನಡೆಸಲಾಗುವುದು. ಖಾಸಗಿ ಆಸ್ಪತ್ರೆ ಮಾಲೀಕರ ಜೊತೆ ಮಾತುಕತೆ ಮಾಡಲಾಗುವುದು. ಸೋಂಕು ಹೆಚ್ಚಾದ್ರೆ ಬೆಡ್ ಮೀಸಲಿಡಲು ಸೂಚಿಸಲಾಗಿದೆ. ಇದೆಲ್ಲವೂ ಪೂರ್ವ ಸಿದ್ಧತೆಯಾಗಿದೆ. ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಲಾಗಿದೆ. ಸಿಎಸ್ ನೇತೃತ್ವದಲ್ಲಿ ಕೂಡ ಸಭೆ ಮಾಡಲಾಗಿದೆ. ಕಂದಾಯ ಇಲಾಖೆ ಬಳಕೆ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದ್ದು, ಆಪ್ ಬಳಕೆಯನ್ನು ಮುಂದುವರೆಸುತ್ತೇವೆ. ತಾಂತ್ರಿಕ ಸೌಲಭ್ಯ ಬಳಕೆ ಮಾಡಲಾಗುವುದು. ಪಾರದರ್ಶಕವಾಗಿರಲು ರಿಯಲ್ ಟೈಮ್ ಬಳಸಲಾಗುವುದು. ಲೋಪ ಕಂಡು ಬಂದ್ರೆ, ಆಯಾ ಇಲಾಖೆ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಮರಣ ಸರಾಸರಿ ಕಡಿಮೆ ಇದೆ. ಪಾಸಿಟಿವಿಟಿ ಕೂಡ ಕಡಿಮೆ ಇದೆ. ಗುಣಮುಖರಾದವರ ಸಂಖ್ಯೆ ಶೇ. 97ರಷ್ಟಿದೆ. ಜನರು ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡರು ಮಾಸ್ಕ್ ಮರೆಯಬಾರದು. ಕಡ್ಡಾಯವಾಗಿ ಮಾಸ್ಕ್ ಬಳಸಿ, ಗುಂಪು ಸೇರೋದು ಮಾಡಬಾರದು. ಪತ್ರಕರ್ತರಿಗೂ ಇಂದಿನಿಂದ ಲಸಿಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಡಾ.ಕೆ ಸುಧಾಕರ್ ಅವರು ಮಾತನಾಡಿದ್ದಾರೆ.

ಸಣ್ಣಪುಟ್ಟ ಲೋಪಗಳಿದ್ರೆ ನಮ್ಮ ಗಮನಕ್ಕೆ ತನ್ನಿ. ಅದನ್ನ ಸರಿಪಡಿಸೋ ಕೆಲಸ ಮಾಡುತ್ತೇವೆ. ಎಲ್ಲರೂ ಸೇರಿ ಸೋಂಕು ನಿಯಂತ್ರಿಸೋಣ. ಇಂದಿನಿಂದ 50 ದಿನ ಯಾರಿಗೂ ರಜೆ ಇಲ್ಲ ಎಂದು ಡಾ.ಕೆ ಸುಧಾಕರ್ ಅವರು ತಿಳಿಸಿದರು.

Next Story

RELATED STORIES