Top

ರೂಪಾಂತರ ಕೊರೊನಾದ ಬಗ್ಗೆ ಆತಂಕ ಬೇಕಿಲ್ಲ - ಸಚಿವ ಡಾ.ಕೆ ಸುಧಾಕರ್

ರೂಪಾಂತರ ಕೊರೊನಾ ಹರಡದಂತೆ ಕ್ರಮ ತೆಗೆದುಕೊಳ್ಳುತ್ತೇವೆ

ರೂಪಾಂತರ ಕೊರೊನಾದ ಬಗ್ಗೆ ಆತಂಕ ಬೇಕಿಲ್ಲ - ಸಚಿವ ಡಾ.ಕೆ ಸುಧಾಕರ್
X

ಬೆಂಗಳೂರು: ನಿನ್ನೆ ತಾಂತ್ರಿಕ ಸಮಿತಿ ಸದ್ಯಸ್ಯರು ಸಭೆ ನಡೆಸಿದ್ದರು. ಇಂದು ಅವರ ಜೊತೆ ಸಭೆ ಮಾಡುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಅವರು ಬುಧವಾರ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ರೂಪಾಂತರ ಕೊರೊನಾ ಹರಡದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಚರ್ಚೆ ನಡೆಸುತ್ತೇವೆ ಬಳಿಕ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ನೈಟ್ ಕರ್ಪ್ಯೂ, ಶಾಲೆ ಪುನಾರಾರಂಭದ ಬಗ್ಗೆ ತೀರ್ಮಾನಿಸುತ್ತೇವೆ. ಸಿಎಂ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಸದ್ಯ ರೂಪಾಂತರ ಕೊರೊನಾದ ಬಗ್ಗೆ ಆತಂಕ ಬೇಕಿಲ್ಲ, ಇದುವರೆಗೂ ಅದು ರಾಜ್ಯದಲ್ಲಿ ಪತ್ತೆ ಆಗಿಲ್ಲ. ಈಗಾಗಲೇ ಬ್ರಿಟನ್​ನಿಂದ ಬಂದವರ ತಪಾಸಣೆ ಮಾಡಲಾಗಿದೆ. ಅವರಲ್ಲಿಯೂ ಹೊಸ ಈ ವೈರಸ್ ಪತ್ತೆ ಆಗಿಲ್ಲ. ಸರ್ಕಾರ ಕೂಡ ಮುಂಜಾಗ್ರತಾ ಕ್ರಮವಹಿಸಿದೆ. ಹೈಸ್ಪೀಡ್ ಕೊರೊನಾ ಹರಡದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಹೀಗಾಗಿ ಸಾರ್ವಜನಿಕರು ಭಯಪಡುವ ಅಗತ್ಯತೆ ಇಲ್ಲ ಎಂದು ಸಚಿವ ಡಾ.ಕೆ ಸುಧಾಕರ್ ಅವರು ತಿಳಿಸಿದರು.

Next Story

RELATED STORIES