Top

ಮಕ್ಕಳನ್ನು ಶಾಲೆಗೆ ಕಳಿಸಲೇ ಬೇಕು ಅನ್ನೋ ಒತ್ತಾಯ ಇಲ್ಲ - ಸಚಿವ ಎಸ್​ ಸುರೇಶ್ ಕುಮಾರ್

ಕೊರೊನಾದಂತೆ ಈ ರೂಪಾಂತರಿ ವೈರಸ್ ಅಷ್ಟು ಪರಿಣಾಮಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ

ಮಕ್ಕಳನ್ನು ಶಾಲೆಗೆ ಕಳಿಸಲೇ ಬೇಕು ಅನ್ನೋ ಒತ್ತಾಯ ಇಲ್ಲ - ಸಚಿವ ಎಸ್​ ಸುರೇಶ್ ಕುಮಾರ್
X

ಬೆಂಗಳೂರು: ನಾಳೆ ಶಾಲೆ ಕಾಲೇಜು ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆ ನಿನ್ನೆಯಿಂದ ರೌಂಡ್ಸ್ ಹೊಡೆಯುತ್ತಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಇವತ್ತು ಜಯನಗರ, ಬಸವನಗುಡಿ ಕಡೆ ಭೇಟಿ ಕೊಡಲಿದ್ದೇನೆ. ನಿನ್ನೆ ಯಲಹಂಕ ಕಡೆ ಭೇಟಿಕೊಟ್ಟಿದ್ದೆ. ನಾಳೆ ಆನೆಕಲ್ ಕಡೆ ಭೇಟಿ ಕೊಡಲಿದ್ದೇನೆ ಎಂದರು.

ಇನ್ನು ಹೇಗಿದೆ ಸಿದ್ಧತೆ ಅನ್ನೋದನ್ನ ಗಮನಿಸಲು ಭೇಟಿ ಕೊಡುತ್ತಿದ್ದೇನೆ. ಸಿಲಬಸ್ ಹೇಗಿದೆ ಅನ್ನೋದರ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಎಲ್ಲಾ ಕಡೆಯಿಂದಲೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆ. ವಿದ್ಯಾರ್ಥಿಗಳಲ್ಲಿ ಶಾಲೆ ಆರಂಭ ಬಗ್ಗೆ ಸಂತೋಷವಿದೆ. ಇದನ್ನು ಗಮನ ಹರಿಸುತ್ತಿದ್ದೇನೆ ಎಂದು ಹೇಳಿದರು.

ಸದ್ಯ ಕೆಲವು ಕಾಲೇಜುಗಳಲ್ಲಿ ಬ್ಯಾಂಡ್ ಹಾಗೂ ತೋರಣ ಕಟ್ಟಿ ಆರಂಭಿಸುತ್ತಿದ್ದಾರೆ. ಇದೆಲ್ಲಾ ಸಂಸ್ಥೆಗಳು ಯಾವ ರೀತಿ ಸಜ್ಜಾಗಿದ್ದಾರೆ ಅನ್ನೋದಕ್ಕಿರುವ ಸಾಕ್ಷ್ಯ. ನಾಳೆ ಶಾಲೆ-ಕಾಲೇಜು ಆರಂಭವಾದ ಬೆನ್ನಲ್ಲೇ, ಮೊದಲ ಪಿರಡ್​ನಲ್ಲಿ ಪಾಠ ಮಾಡಬೇಡಿ ಅಂತ ಶಿಕ್ಷಕರಿಗೆ ಹೇಳಿದ್ದೇನೆ. ಮಕ್ಕಳ ಭಾವನೆ ಬಗ್ಗೆ ಕೇಳಿ, ಅವರ ಅನುಭವ ಹೇಗಿದೆ ಈ ಕೋವಿಡ್ ಸಮಯದಲ್ಲಿ ಅನ್ನೋದರ ಬಗ್ಗೆ ಕೇಳಿ ಅಂತ ಸೂಚಿಸಿದ್ದೇನೆ. ಮಕ್ಕಳನ್ನು ಶಾಲೆಗೆ ಕಳಿಸ್ಲೇ ಬೇಕು ಅನ್ನೋ ಒತ್ತಾಯ ಇಲ್ಲ ಎಂದಿದ್ದಾರೆ.

ಬ್ರಿಟನ್ ವೈರಸ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾದಂತೆ ಈ ರೂಪಾಂತರಿ ವೈರಸ್ ಅಷ್ಟು ಪರಿಣಾಮಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಯಾವ ಪೋಷಕರಿಗೂ, ಯಾರಿಗೂ ಭಯ ಬೇಡ. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದರು.

Next Story

RELATED STORIES