Top

ಶಾಲೆ ಆರಂಭದ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ - ಸಚಿವ ಎಸ್​ ಸುರೇಶ್ ಕುಮಾರ್

ವಿದ್ಯಗಮ ಯೋಜನೆ ಕುರಿತು ಮಾಹಿತಿ ಕೊರತೆಯಿದ್ದು, ಅಧ್ಯಯನ ಮಾಡಿ ನಂತರ ನಿರ್ಧಾರ ಕೈಗೊಳ್ಳಲಾಗುವುದು.

ಶಾಲೆ ಆರಂಭದ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ - ಸಚಿವ ಎಸ್​ ಸುರೇಶ್ ಕುಮಾರ್
X

ಬೆಂಗಳೂರು: ಶಾಲೆ ಆರಂಭದ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಜೊತೆ ಚರ್ಚೆ ನಡೆಸಿ ನಂತರ ಶಾಲೆ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಇನ್ನೂ ಕೂಡ ಸಿಎಂ ಜೊತೆ ಶಾಲಾರಂಭದ ಚರ್ಚೆ ಆಗಿಲ್ಲ ಎಂದರು.

ವಿದ್ಯಗಮ ಯೋಜನೆ ಪುನಾರಂಭ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅನೇಕ ಹಳ್ಳಿಗಳಲ್ಲಿ ಯೋಜನೆ ಬೇಕು ಎಂಬ ಮನವಿ ಬಂದಿದೆ. ಶಾಲೆ ಆರಂಭದ ಚರ್ಚೆ ಸಂದರ್ಭದಲ್ಲಿ ವಿದ್ಯಾಗಮ ಯೋಜನೆ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

ಸದ್ಯ ವಿದ್ಯಗಮ ಯೋಜನೆ ಕುರಿತು ಮಾಹಿತಿ ಕೊರತೆಯಿದ್ದು, ಅಧ್ಯಯನ ಮಾಡಿ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಶಾಲೆಯನ್ನು ಆರಂಭ ಮಾಡುವ ಚರ್ಚೆ ಸಂದರ್ಭದಲ್ಲಿ ವಿದ್ಯಾಗಮದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಸಚಿವ ಎಸ್​ ಸುರೇಶ್ ಕುಮಾರ್ ಅವರು ಹೇಳಿದರು.

Next Story

RELATED STORIES