Top

ಆಯಮ್ಮಇಲ್ಲಿಂದಲೇ ರಾಜ್ಯಸಭೆಗೆ ಹೋದವರು ನಮಗೆ ಯಾವ ನೆರವು ಕೊಡುತ್ತಿದ್ದಾರೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಸೆಸ್​ನಿಂದ 65 ಸಾವಿರ ಕೋಟಿ ಬರುತ್ತೆ. ಉಳಿದ 2 ಲಕ್ಷದ 35 ಸಾವಿರ ಕೋಟಿ ಖೋತಾ ಆಗುತ್ತೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ತುಂಬಿಕೊಡೋಕೆ ಆಗಲ್ಲ.

ಆಯಮ್ಮಇಲ್ಲಿಂದಲೇ ರಾಜ್ಯಸಭೆಗೆ ಹೋದವರು ನಮಗೆ ಯಾವ ನೆರವು ಕೊಡುತ್ತಿದ್ದಾರೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
X

ಬೆಂಗಳೂರು: ಕೊರೊನಾದಿಂದ ನಾನು ಗುಣಮುಖನಾಗಿದ್ದೇನೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕ್ವಾರಂಟೈನ್ ಮುಗಿಸಿದ್ದೇನೆ. ನನಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಸೋಂಕುಬಹಳ ಬೇಗ ಹರಡುವ ರೋಗ, ಕೆಲವರಿಗೆ ರೋಗದ ಲಕ್ಷಣ ಕಾಣಿಸುತ್ತೆ. ಕೆಲವರಿಗೆ ರೋಗದ ಲಕ್ಷಣಗಳೇ ಕಾಣಿಸಿಕೊಳ್ಳಲ್ಲ, ನನಗೆ ಆಗಸ್ಟ್ 2ರಂದು ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ ಪಡೆದಿದ್ದೆ. 15 ದಿನ ಮನೆಯಲ್ಲೇ ಕ್ವಾರಂಟೈನ್​ನಲ್ಲಿದ್ದೆ. ನಿನ್ನೆಗೆ ಎಲ್ಲಾ ಅವಧಿ ಮುಗಿದಿದೆ. ಇಂದು ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆನ್​ಲೈನ್ ಮೂಲಕ ಭಾಗಿಯಾಗಿದ್ದೆ ಎಂದರು.

ಇನ್ನು ಕೇಂದ್ರದ ಜಿಎಸ್​ಟಿ ಬಾಕಿ ತಡೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಗಳಿಗೆ ದ್ರೋಹ ಮಾಡುತ್ತಿದೆ. ಜಿಎಸ್​ಟಿ ಜಾರಿ ವೇಳೆ ಕೌನ್ಸಿಲ್​ನಲ್ಲಿ ಒಪ್ಪಂದವಾಗಿದೆ. ಜಿಎಸ್​ಟಿ ನಷ್ಟವಾದರೆ ನಷ್ಟ ಭರಿಸಿಕೊಡಬೇಕು. 2005ರಲ್ಲಿ ಜಿಎಸ್​ಟಿ ಜಾರಿಗೆ ಬಂತು ಎಂದು ಹೇಳಿದರು.

2020ರ ವರೆಗೆ ಒಕ್ಕೂಟ ವ್ಯವಸ್ಥೆಯಂತೆ ಒಪ್ಪಂದವಾಗಿದೆ. ಒಪ್ಪಂದದಂತೆ ಮೋದಿ ಸರ್ಕಾರ ನಡೆದುಕೊಳ್ಳಬೇಕು. ಜಿಎಸ್​ಟಿ ತುಂಬಿಕೊಡುವ ಬಗ್ಗೆ ಅವರು ಒಪ್ಪಿಕೊಂಡಿದರು. ನಾವು ಒಪ್ಪಿಕೊಂಡಿದ್ದೇವೆ. ಪ್ರತಿವರ್ಷ ನಷ್ಟವನ್ನೂ ರಾಜ್ಯ ಸರ್ಕಾರಕ್ಕೆ ತುಂಬಿಕೊಡಬೇಕು. ನಿರ್ಮಲಾ ಸೀತಾರಾಮನ್ ಏನ್ ಹೇಳ್ತಾರೆ. ಕೊರೊನಾದಿಂದ 3 ಲಕ್ಷ ಕೋಟಿ ಜಿಎಸ್​ಟಿ ಕೊರತೆಯಾಗಿದೆ. ಸೆಸ್​ನಿಂದ 65 ಸಾವಿರ ಕೋಟಿ ಬರುತ್ತೆ. ಉಳಿದ 2 ಲಕ್ಷದ 35 ಸಾವಿರ ಕೋಟಿ ಖೋತಾ ಆಗುತ್ತೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ತುಂಬಿಕೊಡೋಕೆ ಆಗಲ್ಲ ಅಂದಿದ್ದಾರೆ ಎಂದು ತಿಳಿಸಿದರು.

ಸದ್ಯ ರಿಸರ್ವ್ ಬ್ಯಾಂಕ್​ನಿಂದ ಸಾಲ ತೆಗೆದುಕೊಳ್ಳಿ ಅಂದಿದ್ದಾರೆ. ಸಾಲ ಪಡೆದ್ರೆ ತೀರಿಸೋದು ಕೂಡ ರಾಜ್ಯ ಸರ್ಕಾರವೇ. ರಾಜ್ಯಗಳಿಗೆ ಮೊದಲ ಕಂತು ಬಿಡುಗಡೆಯಾಗಬೇಕಿತ್ತು. ಆದರೆ, ಇಲ್ಲಿಯವರೆಗೂ ಬಾಕಿಹಣ ಬಂದಿಲ್ಲ. ವೇತನ ಕೊಡೋಕೆ ರಾಜ್ಯ ಸರ್ಕಾರಕ್ಕೆ ಹಣವಿಲ್ಲ, ಕೊರೊನಾ ನಿಯಂತ್ರಣಕ್ಕೂ ಇವರಿಗೆ ದುಡ್ಡಿಲ್ಲದಂತಾಗಿದೆ. ಇಂತಹ ವೇಳೆ ಕೇಂದ್ರ ರಾಜ್ಯಗಳ ಮೇಲೆ ಬರೆ ಎಳೆದರೆ ಹೇಗೆ(?) ಎಂದು ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಒತ್ತಡ ಹಾಕ್ತಿದೆ ಇದನ್ನ ನಾನು ತೀರ್ವವಾಗಿ ಖಂಡಿಸುತ್ತೇನೆ. ಸಂವಿಧಾನ ಬದ್ಧವಾಗಿ ಕೇಂದ್ರ ಕೊಡಬೇಕು. ನಿಮ್ಮ ಮಾತು ಕೇಳಿ ಜನ ನಿಮ್ಮನ್ನ ಆರಿಸಿಕಳಿಸಿದರು. ರಾಜ್ಯದಲ್ಲೂ 25 ಜನ ಸಂಸದರನ್ನ ಗೆಲ್ಲಿಸಿದರು. ನಿಮ್ಮ ಮೇಲೆ ವಿಶ್ವಾಸವಿಟ್ಟು ಕಳಿಸಿಕೊಟ್ಟಿದ್ದಾರೆ. ನೀವು ಜನರಿಟ್ಟ ವಿಶ್ವಾಸಕ್ಕೆ ದ್ರೋಹ ಮಾಡುತ್ತಿದ್ದೀರ. ರಾಜ್ಯಗಳನ್ನ ದಿವಾಳಿ ಹಂತಕ್ಕೆ ತಳ್ಳುತ್ತಿದ್ದೀರ ಎಂದು ಹೇಳಿದರು.

ಸದ್ಯ ಸಂಸದರು ನಿಯೋಗ ಒಯ್ಯಬೇಕು. ಆಯಮ್ಮ ನಿರ್ಮಲಾ ಇಲ್ಲಿಂದಲೇ ರಾಜ್ಯಸಭೆಗೆ ಹೋದವರು ನಮಗೆ ಯಾವ ನೆರವು ಕೊಡುತ್ತಿದ್ದಾರೆ. ಜಿಎಸ್​ಟಿ ಪರಿಹಾರವೇ ಇಲ್ಲವೆಂದ್ರೆ ಎಲ್ಲಿ ಹೋಗಬೇಕು ಎಂದು ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ವಿರುದ್ಧ ಗುಡುಗಿದರು.

Next Story

RELATED STORIES