Top

ರಾಜ್ಯದಲ್ಲಿ ಇವತ್ತಿನಿಂದ ಜನವರಿ 2ರ ವರೆಗೆ ನೈಟ್​ ಕರ್ಫ್ಯೂ ಜಾರಿ - ಸಿಎಂ ಬಿಎಸ್​ವೈ

ಶಾಲಾ-ಕಾಲೇಜು ಈಗಾಗಲೇ ನಿರ್ಧರಿಸಿದ್ದೇವೆ. ಅದು ಯತಾಪ್ರಕಾರ ಮುಂದುವರಿಯಲಿದೆ

ರಾಜ್ಯದಲ್ಲಿ ಇವತ್ತಿನಿಂದ ಜನವರಿ 2ರ ವರೆಗೆ ನೈಟ್​ ಕರ್ಫ್ಯೂ ಜಾರಿ - ಸಿಎಂ ಬಿಎಸ್​ವೈ
X

ಬೆಂಗಳೂರು: ರೂಪಾಂತರ ಕೊರೊನಾ ವೈರಸ್​ ಹಿನ್ನೆಲೆ ಇಂದು ರಾತ್ರಿಯಿಂದಲೇ ರಾಜ್ಯದಾದ್ಯಂತ ರಾತ್ರಿ ಕರ್ಪ್ಯೂ ಜಾರಿ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಮಿತ್ರರೊಂದಿಗೆ ಮಾತನಾಡಿದ ಅವರು, ನೈಟ್​ ಕರ್ಫ್ಯೂ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಇರಲಿದ್ದು, ಜನವರಿ 2, 2021ರ ವರೆಗೆ ರಾತ್ರಿ ಕರ್ಪ್ಯೂ ಇರುತ್ತದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ ಎಂದರು.

ಸದ್ಯ ಹೊರಗಿನಿಂದ ಬರುವವರಿಗೆ ಟೆಸ್ಟ್ ಸರ್ಟಿಫಿಕೆಟ್ ಕಡ್ಡಾಯವಾಗಿದ್ದು, 72ಗಂಟೆಯೊಳಗೆ ಮಾಡಿಸಿರಬೇಕು. ಆ ರಿಪೋರ್ಟ್ ಇದ್ದರೆ ಮಾತ್ರ ಅನುಮತಿ ನೀಡಲಾಗುವುದು. ಏರ್​ಪೋರ್ಟ್​ಗಳಲ್ಲೂ ಇದನ್ನ ಕಡ್ಡಾಯ ಮಾಡಿದ್ದೇವೆ ಎಂದು ಸಿಎಂ ತಿಳಿಸಿದರು.

ಇನ್ನು ಶಾಲಾ-ಕಾಲೇಜು ಈಗಾಗಲೇ ನಿರ್ಧರಿಸಿದ್ದೇವೆ. ಅದು ಯತಾಪ್ರಕಾರ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದರು.​

Next Story

RELATED STORIES