Top

10 ಕೋಟಿ ರೂ.ಕೊಟ್ಟು ಹೆಲಿಕ್ಯಾಪ್ಟರ್​ ತೆಗೆದುಕೊಳ್ಳೋರು ಮೀಸಲಾತಿ ಕೇಳ್ತೀರಾ - ಬಿಜೆಪಿ ಸಂಸದ ಆಕ್ರೋಶ

10 ಕೋಟಿ ರೂ.ಕೊಟ್ಟು ಹೆಲಿಕ್ಯಾಪ್ಟರ್​ ತೆಗೆದುಕೊಳ್ಳೋರು ಮೀಸಲಾತಿ ಕೇಳ್ತೀರಾ - ಬಿಜೆಪಿ ಸಂಸದ ಆಕ್ರೋಶ
X

ಮೈಸೂರು: ಮಿಸಲಾತಿ ಕೇಳಲು ನಿಮಗೆ ನಾಚಿಕೆ ಆಗೋಲ್ಲ.10 ಕೋಟಿ ರೂ. ಕೊಟ್ಟು ಹೆಲಿಕ್ಯಾಪ್ಟರ್ ತಗೊಳೋರು ಮಿಸಲಾತಿ ಕೇಳ್ತೀರಾ(?) ಈ ರಾಜ್ಯಕ್ಕೆ ಸಿಎಂ ಆಗ್ತೀರಾ ಅಂತ ಜನಾಂಗಕ್ಕೆ ಮಿಸಲಾತಿ ಕೊಡಬೇಕಾ(?) ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ಮೀಸಲಾತಿ ಕೇಳುತ್ತಿರುವ ಕುರುಬ, ಪಂಚಾಮಸಾಲಿಗಳ ವಿರುದ್ಧ ಪ್ರಶ್ನೆ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಮೇಲೆ ಬಟ್ಟೆ ಇಲ್ಲದವರು ಕೇಳಲಿ. ಆನೆ ಮೇಯಿಸಿಕೊಂಡು ಕಾಡಲ್ಲಿ ಇರೋರು ಕೇಳಿದ್ರೆ ಅದನ್ನ ಒಪ್ಪೋಣ. ದೊಡ್ಡ ದೊಡ್ಡ ಬ್ಯುಸಿನೇಸ್​ ಮ್ಯಾನ್​​ಗಳು, ಉಪಮುಖ್ಯಮಂತ್ರಿಗಳಾಗಿದ್ದರು. ರಿಯಲ್ ಎಸ್ಟೇಟ್ ಮಾಡುವವರಿಗೆ ಮಿಸಲಾಗಿ ಕೊಡಬೇಡಾ(?) ಆ ಎಂಟಿಬಿಗೆ 10 ಕೋಟಿ ಕೊಟ್ಟು ಹೆಲಿಕ್ಯಾಪ್ಟರ್ ತಗೋಳೋಕೆ ಆಗುತ್ತೆ. ಇಂತವರೆಲ್ಲಾ ಮಿಸಲಾತಿ ಕೇಳ್ತಿರಾ(?) ಎಂದಿದ್ದಾರೆ.

ಇನ್ನು ಅದ್ಯಾರೋ 2A ಗೆ ಸೇರಿಸಿ ಅಂತಾರೆ. ಕುಳಿತಿರುವ ಜಾಗದಲ್ಲಿ 2A ಗೆ ಸೇರಿಸಲು ಆಗುತ್ತಾ(?) ಇವೇಲ್ಲದರ ಬಗ್ಗೆ ಸರ್ಕಾರ ಸ್ಪಷ್ಟವಾದ ಹೇಳಿಕೆ ಕೊಡಬೇಕು. ಸಿಎಂ ಹಾಗೂ ಕಾನೂನು ಸಚಿವರು ಇದನ್ನ ಸ್ಪಷ್ಟಪಡಿಸಬೇಕು. ಒಂದೇ ಹೇಳಿಕೆಯಲ್ಲಿ ಎಲ್ಲವನ್ನು ಮುಗಿಸಬೇಕು. ನಮ್ಮ ಇತಿ-ಮಿತಿ ಏನಿದೆ ಅಂತ ಹೇಳಿಕೆ ಕೊಟ್ಟು ಮುಗಿಸಬೇಕು. ನಾನು ಈ ವಿಚಾರವನ್ನ ಸೂಕ್ಮವಾಗಿ ಹೇಳಿಕೆ ಕೊಡುತ್ತಿದ್ದೀನಿ. ಯಾರನ್ನ 2A ಸೇರಿಸುತ್ತಿದ್ದೀರಾ ಹಾಗಾದ್ರೆ 2A ನಲ್ಲಿ ಇರೋರು ಎಲ್ಲಿಗೆ ಹೋಗಬೇಕು. ಮೀಸಲಾತಿ ಶೇ.50ಕ್ಕಿಂತ ಜಾಸ್ತಿ ಇರಬಾರದು ಅಂತ ಸುಪ್ರೀಂಕೋರ್ಟ್ ಹೇಳಿದೆ ಇದನ್ನ ಮುಂದುವರೆಸಬಾರದು ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ್​ ಪ್ರಸಾದ್ ಅವರು ಮಾತನಾಡಿದ್ದಾರೆ.

ಹೆಚ್​.ವಿಶ್ವನಾಥ್​ಗೆ ಗೊತ್ತಾಗೋಲ್ವಾ(?) - ಪ್ರಶ್ನೆ

ಸದ್ಯ ಯಾರ್ರೀ ಅದು ಈಶ್ವರಪ್ಪ, ಹೆಚ್​. ವಿಶ್ವನಾಥ್. ಯಾವುದೋ ವೇದಿಕೆ ಮೇಲೆ ನಿಂತ್ಕೊಂಡು ಜನ ಸೇರಿಸಿ ಮಿಸಲಾತಿ ಕೇಳೋಕೆ ಆಗುತ್ತಾ(?) ಆ ವಿಶ್ವನಾಥ್ ದೇಶದೆಲ್ಲಾ ಮಾತನಾಡ್ತಾನೆ ಅವನಿಗೆ ಗೊತ್ತಾಗೋಲ್ವಾ(?) ಬೀದಿಯಲ್ಲಿ ನಿಂತು ಮಿಸಲಾತಿ ಮಾತನಾಡೋದಲ್ಲ ಎಂದು ವಿಧಾನಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮೀಸಲಾತಿಯನ್ನು ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ

ಮಿಸಲಾತಿಗೆ ಬಗ್ಗೆ ನಾನು ಮಾತನಾಡುವಾಗ ಸರಿಯಾಗಿ ಉತ್ತರ ಕೊಡಬೇಕು. ಸುದಿರ್ಘವಾಗಿ ರಾಜಕಾರಣ ಮಾಡಿರುವವನು ನಾನು. ಮಿಸಲಾತಿ ಪ್ರಶ್ನೆ ಕೇಂದ್ರದ ಮುಂದೆ ಇರುತ್ತೆ. ಎಸ್​ಟಿಗೆ ಕೊಡಬೇಕೋ ಬೇಡ್ವೋ ಅನ್ನೋದನ್ನ ಕೇಂದ್ರ ತೀರ್ಮಾನ ಮಾಡುತ್ತೆ. ರಾಜ್ಯ ಸರ್ಕಾರ ಶಿಫಾರಸು ಮಾತ್ರ ಮಾಡಬೇಕು. ತಜ್ಞರ ಸಮಿತಿ ನೇಮಕ ಮಾಡಬೇಕು ಇದನ್ನ ಮಾಡಿದವರು ಎಲ್​.ಜಿ. ಹಾವನೂರು ಒಬ್ಬರೇ. 'ನಾಯಕ ಸಮಾಜ'ವನ್ನು ಪರಿಶಿಷ್ಟ ಪಂಗಡಕ್ಕೆ(ST) ಸೇರಿಸಲು ಕಾನೂನು ರೀತಿಯಲ್ಲಿ ಹೋರಾಟ ಮಾಡಿದರು. ಆದರೆ, ಇವರುಗಳು ಮಾಡುತ್ತಿರುವುದು ಸರಿಯಲ್ಲ ಎಂದು ಮೈಸೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಮೀಸಲಾತಿಗಾಗಿ ಹೋರಾಟ ಮಾಡುತ್ತಿರು ವಿರುದ್ಧ ಗುಡುಗಿದ್ದಾರೆ.

Next Story

RELATED STORIES