Top

ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆ ಸಚಿವರುಗಳ ಸ್ಪಷ್ಟನೆ ​

ಮರಾಠಾ ಅಭಿವೃದ್ಧಿ ಪ್ರಾಧಿಕಾರ 50 ಕೋಟಿ ಮೀಸಲಿಟ್ಟರುವ ಬಗ್ಗೆ ರಾಜ್ಯ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ

ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆ ಸಚಿವರುಗಳ ಸ್ಪಷ್ಟನೆ ​
X

ಬೆಂಗಳೂರು: ಮರಾಠಾ ಪ್ರಾಧಿಕಾರ ಮತ್ತು ಮಸ್ಕಿ ನಾಲಾ ಯೋಜನೆಯನ್ನು ಉಪ ಚುನಾವಣೆಯ ಗಿಮಿಕ್ಕಾಗಿ ಘೋಷಣೆ ಮಾಡಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಸೋಮವಾರ ಹೇಳಿದರು.

ನಗರದಲ್ಲಿಂದು ಮಾಧ್ಯಮ ಜೊತೆ ಮಾತನಾಡಿದ ಅವರು, ಚುನಾವಣೆ ಕಾಕತಾಳೀಯವಾಗಿ ಅದೇ ಸಮಯದಲ್ಲಿ ಬಂದಿವೆ. ಯಡಿಯೂರಪ್ಪ ಅವರು ದೂರದೃಷ್ಟಿ ಇಟ್ಟುಕೊಂಡು ಯೋಜನೆ ಮಾಡಿದ್ದಾರೆ ಇದರಿಂದ ಆಯಾ ಭಾಗದ ಜನರಿಗೆ ಸಹಾಯ ಆಗಲಿದೆ ಎಂದರು.

ಇನ್ನು ವೀರಶೈವ ಲಿಂಗಾಯತ ನಿಗಮದ ಬೇಡಿಕೆ ಹಳೆಯದು. ನಾವು ನಿಗಮ ರಚನೆಗೆ ಸಿಎಂ ಬಳಿ ಒತ್ತಾಯಿಸಿದ್ದೀವಿ. ಮರಾಠ ಪ್ರಾಧಿಕಾರ ವಿಚಾರ ಗಡಿ ಪ್ರಶ್ನೆ, ಭಾಷಾ ಪ್ರಶ್ನೆ ವ್ಯಾಪ್ತಿಗೆ ಬರಲ್ಲ, ಮರಾಠ ಪ್ರಾಧಿಕಾರ ಮಾಡಿರೋದು ರಾಜ್ಯದ ಮರಾಠ ಸಮುದಾಯಕ್ಕೆ, ಮಹಾರಾಷ್ಟ್ರದ ಮರಾಠಿಗರಿಗೆ ಪ್ರಾಧಿಕಾರ ಮಾಡಿಲ್ಲ. ರಾಜ್ಯದಲ್ಲಿ ಅನೇಕ ವರ್ಷಗಳಿಂದ ಮರಾಠರು ವಾಸವಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ವಿಯಷಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದು, ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ಆಕ್ಷೇಪ ಇಲ್ಲ. ಸರ್ಕಾರದ ನಿರ್ಧಾರ ಸ್ವಾಗತಾರ್ಹ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ನಾವು ಒತ್ತಾಯಿಸಿದ್ದೇವೆ ಜತೆಗೆ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿ ಅಂದಿದ್ದೇವೆ ಎಂದಿದ್ದಾರೆ.

ಡಿಸಿಎಂ ಲಕ್ಷ್ಮಣ್ ಸವದಿ ಅವರು ಸಹ ಈ ವಿಷಯದ ಕುರಿತು ಮಾತನಾಡಿದ್ದು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಾವು ಸಚಿವರು ಸಿಎಂಗೆ ಒತ್ತಡ ಹಾಕಿದ್ದೇವೆ. ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸಮುದಾಯ ಆಧಾರಿತವಾಗಿ ಮಾಡಲಾಗಿದೆ. ಮರಾಠಾ ಭಾಷೆ ಆಧರಿತವಾಗಿ ಪ್ರಾಧಿಕಾರ ಮಾಡಿಲ್ಲ ಅದನ್ನು ನಾವು ಸ್ವಾಗತಿಸುತ್ತೇವೆ. ನಾವು ನಮ್ಮ ಸಮುದಾಯದ ವಿಚಾರದಲ್ಲಿ ಸಿಎಂಗೆ ಒತ್ತಡ ಹಾಕಿದ್ದೇವೆ ಎಂದು ಅವರು ಹೇಳಿದ್ದಾರೆ.

Next Story

RELATED STORIES