Top

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ಟೀಕೆಗೆ ಸಚಿವ ಸಿ.ಪಿ ಯೋಗೇಶ್ವರ್​ ಸ್ಪಷ್ಟನೆ

ನಮ್ಮ ಕಾರ್ಯಕರ್ತರಿಗೆ ಶಿಫಾರಸು ಮಾಡಬಾರದಾ? ಅದನ್ನು ಟೀಕೆ ಮಾಡಿದರೆ ಹೇಗೆ? ಆದ್ದರಿಂದ ತಡೆದುಕೊಳ್ಳಲು ಆಗದೆ ವೈಯಕ್ತಿಕವಾಗಿ ಟೀಕೆ ಮಾಡಿದ್ದೇನೆ.

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ಟೀಕೆಗೆ ಸಚಿವ ಸಿ.ಪಿ ಯೋಗೇಶ್ವರ್​ ಸ್ಪಷ್ಟನೆ
X

ಮೈಸೂರು: ಕುಮಾರಸ್ವಾಮಿ ನನ್ನ ಬಗ್ಗೆ ವೈಯಕ್ತಿಕವಾಗಿ ಕೀಳಾಗಿ ಮಾತನಾಡುತ್ತಿದ್ದರು. ಈ ರೀತಿ ಮಾತನಾಡದಂತೆ ನಾಲ್ಕು ಜನರ ಬಳಿ ಹೇಳಿ ಕಳುಹಿಸಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಆ ರೀತಿ ಮಾತನಾಡದಂತೆ ನಾಲ್ಕು ಜನರ ಬಳಿ ಹೇಳಿ ಕಳುಹಿಸಿದೆ ಆದರೂ ಅವರು ಅದನ್ನು ಮುಂದುವರಿಸಿದರು. ನನಗೆ ತುಂಬಾ ಘಾಸಿ ಆಯ್ತು ಅದೇ ಕಾರಣಕ್ಕೆ ನಾನು ಸಹ ಮಾತನಾಡಿದೆ ಎಂದು ಇಬ್ಬರ ನಡುವಿನ ವಾಕ್ಸಮರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನು ರಾಜಕಾರಣದಲ್ಲಿ ವೈಯಕ್ತಿಕ ಟೀಕೆ ತಪ್ಪು ನನಗೂ ಗೊತ್ತಿದೆ ಅದನ್ನು ನೀವು ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಹೇಳಿದರೆ ಒಳ್ಳೆಯದು. ನೀರಿನ ಪೈಪ್, ಲೆಟರ್ ಹೆಡ್​ನಲ್ಲಿ ದುಡ್ಡು ಮಾಡುತ್ತಾನೆ ಎಂದು ಆರೋಪ ಮಾಡ್ತಾರೆ. ನಮ್ಮ ಕಾರ್ಯಕರ್ತರಿಗೆ ಶಿಫಾರಸು ಮಾಡಬಾರದಾ(?) ಅದನ್ನು ಟೀಕೆ ಮಾಡಿದರೆ ಹೇಗೆ(?) ಆದ್ದರಿಂದ ತಡೆದುಕೊಳ್ಳಲು ಆಗದೆ ವೈಯಕ್ತಿಕವಾಗಿ ಟೀಕೆ ಮಾಡಿದ್ದೇನೆ ಎಂದರು.

ಜೆಡಿಎಸ್​ಗೆ ಶಕ್ತಿ ತುಂಬಿದ್ರೆ ನಮಗೆ ಮಾರಕ. ಜೆಡಿಎಸ್​ ಯಾವುದೇ ಕಾರಣಕ್ಕೂ ನಂಬುವಂತಿಲ್ಲ. ಬಿಜೆಪಿ ಪ್ರಬಲವಾಗಿ ಕಟ್ಟೋದು ನನ್ನ ಉದ್ದೇಶ. ಈ ವಿಚಾರವನ್ನು ನಾನು ವರಿಷ್ಠರ ವೇದಿಕೆಯಲ್ಲಿ ಅದನ್ನ ನಾನು ಮಾತಾಡುತ್ತೇನೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ನನ್ನ ಉದ್ದೇಶ ಎಂದು ಮೈಸೂರಿನಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಮಾತನಾಡಿದ್ದಾರೆ.

Next Story

RELATED STORIES