Top

ಕಲಾಪ ಐದು ದಿನ ನಡೆಸುವುದಕ್ಕೆ ಒಪ್ಪಿಗೆ ಆಗಿದೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

  • ನಾನು ಬಂದಾಗ ಅವರು ಗಲಾಟೆ ಮಾಡುತ್ತಿದ್ದರು. ನಾನೇ ಅವರನ್ನ ಕರೆದು ಸಮಾಧಾನ ಮಾಡಿದೆ.
  • ಶನಿವಾರ ಕಲಾಪ ನಡೆಸೋಕೆ ಒಪ್ಪಿಗೆ ನೀಡಿದ್ದೇವೆ.
  • ನಾವು ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತೇವೆ.

ಕಲಾಪ ಐದು ದಿನ ನಡೆಸುವುದಕ್ಕೆ ಒಪ್ಪಿಗೆ ಆಗಿದೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
X

ಇಂದು ವಿಧಾನಸೌಧದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರು: ಕೆಲವು ಕಾಯ್ದೆಗಳ ಅಧಿಸೂಚನೆ ತಂದಿದ್ದಾರೆ, ಎಪಿಎಂಸಿ, ಭೂಸುಧಾರಣೆ , ಲೇಬರ್ ಲಾಗೆ ತಿದ್ದುಪಡಿ ತಂದಿದ್ದಾರೆ. ಇವೆಲ್ಲದರ ಬಗ್ಗೆ ಸೀರಿಯಸ್ ಚರ್ಚೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ನಾವು ಗಂಭೀರವಾಗಿ ಇದರ ಬಗ್ಗೆ ಮಾತನಾಡುತ್ತೇವೆ. ಬಿಎಸಿ ಸಭೆಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ. ನಿಮಗೆ ಬೇಕಾದ ಬಿಲ್ ಬಗ್ಗೆ ಚರ್ಚೆ ಮಾಡಿ ಅಂದಿದ್ದಾರೆ. ನಾವು ಬಿಲ್ ಟೇಬಲ್ ಮಾಡುತ್ತೇವೆ ಅನ್ನುತ್ತಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ. 40 ಬಿಲ್​ಗಳಿವೆ, ಸಮಗ್ರ ಚರ್ಚೆ ಆಗಬೇಕು. ಕಲಾಪ ಹೆಚ್ಚು ದಿನ ನಡೆಸುವಂತೆ ಒತ್ತಾಯಿಸಿದ್ದೇವೆ. ಅವರು ಬೇಗನೇ ಮುಗಿಸೋಕೆ ಹೊರಟಿದ್ದರು. ಈಗ ಐದು ದಿನ ನಡೆಸೋಕೆ ಒಪ್ಪಿಗೆಯಾಗಿದೆ. ಶನಿವಾರ ಕಲಾಪ ನಡೆಸೋಕೆ ಒಪ್ಪಿಗೆ ನೀಡಿದ್ದೇವೆ. ಜನ ವಿರೋಧಿ ಬಿಲ್​ಗಳು ಹೆಚ್ಚಿವೆ ಎಂದು ಅವರು ತಿಳಿಸಿದರು.

ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಬಗ್ಗೆ ಧರಣಿ ನಡೆಯುತ್ತಿದೆ. ಅಧಿಕಾರಿಗಳು ಅತ್ತ ತಿರುಗಿಯೂ ನೋಡಿಲ್ಲ. ರೈತರ ಪ್ರತಿಭಟನೆ ಸರಿಯಾಗಿದೆ. ಲ್ಯಾಂಡ್ ರಿಫಾರ್ಮ್ಸ್ ತಿದ್ದುಪಡಿ ಬೇಡ ಅನ್ನುತ್ತಿದ್ದಾರೆ. ಎಪಿಎಂಸಿ ಬಿಲ್ ಬಗ್ಗೆ ಅವರು ಧರಣಿ ಮಾಡುತ್ತಿದ್ದಾರೆ. ನಾವು ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತೇವೆ ಎಂದರು.

9 ಜನ ಅಧಿಕಾರಿಗಳು ಮತ್ತು 5 ಮಂದಿ ಸಚಿವರು ಕೊರೊನಾ ಕ್ವಾರಂಟೈನ್​ನಲ್ಲಿದ್ದಾರೆ. ಅದಕ್ಕೆ ಐದು ದಿನಕ್ಕೆ ಒಪ್ಪಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಸಚಿವ, ಶಾಸಕರ ಗಲಾಟೆ ವಿಷಯದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬೆಳ್ಳಿ ಪ್ರಕಾಶ್ ಅಂತ ಅವರು. ನಾರಾಯಣಗೌಡ ಅವರು ಇಬ್ಬರೂ ಕೂಗಾಡುತ್ತಿದ್ದರು. ನಾರಾಯಣಗೌಡರ ಜೊತೆ ಕೂಗಾಡುತ್ತಿದ್ದರು. ಯಾರೇ ಆಗಲಿ ಎಂಎಲ್​ಎ ಜೊತೆ ಸೌಜನ್ಯ ಇಟ್ಕೊಳ್ಳಬೇಕು. ಆರು ಕೋಟಿ ಜನ ನಮ್ಮನ್ನ ನೋಡುತ್ತಿದ್ದಾರೆ. ಅವರು ಎಲ್ಲರನ್ನೂ ಗಮನಿಸುತ್ತಿರುತ್ತಾರೆ. ಸಾರ್ವಜನಿಕವಾಗಿ ಅವರು ಗಲಾಟೆ ಮಾಡಿಕೊಂಡರೆ ತಪ್ಪು. ನಾನು ಬಂದಾಗ ಅವರು ಗಲಾಟೆ ಮಾಡುತ್ತಿದ್ದರು. ನಾನೇ ಅವರನ್ನ ಕರೆದು ಸಮಾಧಾನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿಳಿಸಿದರು.

Next Story

RELATED STORIES