Top

ಬಳ್ಳಾರಿಯಲ್ಲಿ ಗಾಂಧಿ ಭವನಕ್ಕೀಲ್ಲ ಲೋಕಾರ್ಪಣೆ ಭಾಗ್ಯ

ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆಗೆ ಮುಂದಾಗದ ಜಿಲ್ಲಾಡಳಿತ.

ಬಳ್ಳಾರಿಯಲ್ಲಿ ಗಾಂಧಿ ಭವನಕ್ಕೀಲ್ಲ ಲೋಕಾರ್ಪಣೆ ಭಾಗ್ಯ
X

ಬಳ್ಳಾರಿ: ಅದು ಆ ಮಹಾತ್ಮನ ಹೆಸರಿನಲ್ಲಿ ನಿರ್ಮಿಸಿದ ಭವನ. ಕಳೆದ ಒಂದು ವರ್ಷದಿಂದ ಉದ್ಘಾಟನಾ ಭಾಗ್ಯ ಕಾಣದಾಗಿದೆ. ಅಷ್ಟಕ್ಕೂ ಅದು ಜಿಲ್ಲಾಧಿಕಾರಿ ಕಚೇರಿಯಲ್ಲೇ ಇದೆ.

ಮಹಾತ್ಮಗಾಂಧಿ ಅವರ ಪ್ರತಿಮೆ ಕಳೆದ ಒಂದು ವರ್ಷದಿಂದ ಗಷಿ ಜಿಲ್ಲೆ ಬಳ್ಳಾರಿಯಲ್ಲಿ ಗಾಂಧಿಭವನ ನಿರ್ಮಾಣಗೊಂಡು ಒಂದು ವರ್ಷ ಕಳೆದ್ರೂ ಕೂಡಾ ಜಿಲ್ಲೆಯ ಸುಸಜ್ಜಿತ ಗಾಂಧಿ ಭವನ ಕಾಮಗಾರಿ ಪೂರ್ಣಗೊಂಡು ಕೆಲ ತಿಂಗಳು ಕಳೆದರೂ, ಭವನಕ್ಕೆ ಇನ್ನೂ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ. ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಉದ್ಘಾಟನೆ ದಿನ ವಿಳಂಬವಾಗುತ್ತಿದೆ. ಅಲ್ಲದೇ ಗಾಂಧಿ ಭವನ ಆದಷ್ಟು ಬೇಗ ಉದ್ಘಾಟನೆಯನ್ನು ಮಾಡಿ ಇಲ್ಲವೇ ಹೋರಾಟದ ಹಾದಿ ಹಿಡಿಯಬೇಕಾಗಲಿದೆ ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.

ಇನ್ನೂ 2017ರಲ್ಲಿ ಕಾಮಗಾರಿ ಆರಂಭಗೊಂಡಿತು ಮುಗಿದಿದ್ದು 2020ರಲ್ಲಿ ಇಲ್ಲಿಯವರೆಗೆ ಉದ್ಘಾಟನಾ ಭಾಗ್ಯಿಲ್ಲದಾಗಿದೆ. ರಾಜ್ಯ ಸರಕಾರದಿಂದ ಉದ್ಘಾಟನೆಯನ್ನು ಮಾಡಲು ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿಲ್ಲ. ಅನುದಾನ ಬಾರದೆ, ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಗೆ ಹಣ ನೀಡದೆ, ಉದ್ಘಾಟನೆ ಮಾಡುವ ಆಗಿಲ್ಲ. ಇದೇ ಕಾರಣಕ್ಕೆ ಉದ್ಘಾಟನೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಷ್ಟೇಅಲ್ಲದೇ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಭವನದಲ್ಲಿ ಮೂಲೆಯಲ್ಲಿ ಮಹಾತ್ಮಗಾಂಧಿ ಅವರ ಪುತ್ಥಳಿ ಬಿಸಾಕಿರುವದು ಜನಸಾಮಾನ್ಯರ ಆಕ್ರೋಶಕ್ಕೆ ಜಿಲ್ಲಾಡಳಿತ ಗುರಿಯಾಗಿದೆ.

ಇನ್ನು ಸಾವಿರಾರು ಹಣವನ್ನು ಖರ್ಚು ಮಾಡಿ ಗಾಂಧಿ ಭವನದಲ್ಲಿ ಹೂದೋಟವನ್ನು ಮಾಡಿದೆ. ಅಲ್ಲಿರೋ ಗಿಡಮರಗಳಿಗೆ ನೀರು ಕಾಣದಾಗಿದೆ.ಇದೆಲ್ಲವನ್ನೂ ಗಮನಿಸಿದ ಜನಸಾಮಾನ್ಯರು ಶೀಘ್ರವಾಗಿ ಗಾಂಧಿ ಭವನವನ್ನು ಲೋಕಾರ್ಪಣೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಸರ್ಕಾರ ಯಾವಾಗ ಭವನಕ್ಕೆ ಲೋಕಾರ್ಪಣೆ ಮಾಡಲಿದೆ ಅನ್ನೋದನ್ನ ಕಾಲವೇ ಉತ್ತರಿಸಲಿದೆ.

Next Story

RELATED STORIES