Top

ಮೂರು ಪಕ್ಷದವರದ್ದು ಅಕ್ರಮ ಗಣಿಗಾರಿಕೆ ಇದ್ರೆ ರದ್ದು ಮಾಡಲಿ - ಸಿದ್ದರಾಮಯ್ಯ

ಎಂಎಲ್​ಸಿ ಆಯನೂರು ಮಂಜುನಾಥ್ ಹೇಳ್ತಾರೆ. ಶಿವಮೊಗ್ಗದಲ್ಲಿ ಅಕ್ರಮ ಗಣಿಗಾರಿಕೆ ನಡಿತ್ತಿದೆ ಅಂತಾ ಹೇಳ್ತಾ ಇದ್ದಾರೆ.

ಮೂರು ಪಕ್ಷದವರದ್ದು ಅಕ್ರಮ ಗಣಿಗಾರಿಕೆ ಇದ್ರೆ ರದ್ದು ಮಾಡಲಿ - ಸಿದ್ದರಾಮಯ್ಯ
X

ಬೆಂಗಳೂರು: ಸಿಎಂ ಯಡಿಯೂರಪ್ಪ ಜಿಲ್ಲೆಯಲ್ಲೇ ಅಕ್ರಮ ಗಣಿಗಾರಿಕೆ ನಡಿತಾ ಇದೆ ಅಂದ್ರೆ ಅದು ಆಡಳಿತ ವೈಫಲ್ಯ, ಯಡಿಯೂರಪ್ಪ ಹಾಗೂ ಈಶ್ವರಪ್ಪ ಹೊಣೆ ಹೊರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಕೆಡಿಪಿ ಸಭೆಯಲ್ಲಿ ಗಣಿ ಅಧಿಕಾರಿಗಳಿಗೆ ಹೇಳೋದು. ನಿಮ್ಮ ಮತ್ತು ನಿಮ್ಮ ಊರಿನ ಒಳ್ಳೆಯದಕ್ಕೆ. ಕಣ್ಣು ಮುಚ್ಚಿಕೊಂಡಿರಿ ಅಂತಾ ಹೇಳಿದ್ದಾರೆ ಅದರ ವರದಿ ಪತ್ರಿಕೆಯಲ್ಲಿ ಬಂದಿದೆ. ಮಿನಿಸ್ಟರ್ ಮತ್ತು ಜನಪ್ರತಿನಿಧಿ ಹೇಳಿದ್ರೆ, ಅಧಿಕಾರಿಗಳು ಬೇಜಾವಾಬ್ದಾರಿಯಿಂದ ಇರದೇ ಏನ್ ಮಾಡ್ತಾರೆ. ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲ ಗಣಿಗಳು ಸಕ್ರಮವಾಗಿದೆ ಅಂತಾರೆ. ಅವರ ಪಾರ್ಟಿಯ ಆಯನೂರುಮಂಜುನಾಥ್ ಅಕ್ರಮ ಗಣಿಗಾರಿಕೆ ನಡಿತಾ ಇದೆ ಅಂತಾರೆ ಎಂದರು.

ಶಿವಮೊಗ್ಗದ ಹುಣಸೋಡು ಸ್ಪೋಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈಗಾಗಲೇ ನಾನು ಟ್ವಿಟ್​ ಮೂಲಕ ಹೇಳಿದ್ದೀನಿ. ಅಲ್ಲಿ ಕೃಷರ್ ನಡಿತಾ ಇದೆ. ಸ್ಪೋಟಕ್ಕೆ ಆರು ಮಂದಿ ಮರಣ ಹೊಂದಿದ್ದಾರೆ. ಇದು ದೊಡ್ಡ ದುರಂತ. ನನಗಿರೋ ಮಾಹಿತಿ ಪ್ರಕಾರ ಆಂಧ್ರದಿಂದ ಡೈನಮೈಟ್ ತಂದಿದ್ದಾರೆ. ತರೋ ಮೊದಲು ಯಾರಿಂದಲು ಅನುಮತಿ ಪಡೆದಿಲ್ಲ. ಇದು ಮೊದಲ ಅಪರಾಧ. ಸುರಕ್ಷಿತ ಜಾಗದಲ್ಲಿ ಇಡದೇ ಇರೋದು ಎರಡನೇ ಅಪರಾಧ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜಬಾಬ್ದಾರಿತನವಿದೆ ಎಂದಿದ್ದಾರೆ.

ಎಂಎಲ್​ಸಿ ಆಯನೂರು ಮಂಜುನಾಥ್ ಹೇಳ್ತಾರೆ. ಶಿವಮೊಗ್ಗದಲ್ಲಿ ಅಕ್ರಮ ಗಣಿಗಾರಿಕೆ ನಡಿತ್ತಿದೆ ಅಂತಾ ಹೇಳ್ತಾ ಇದ್ದಾರೆ. 100ಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆ ನಡಿತಾ ಇದೆ. ಸಿಎಂ ಯಡಿಯೂರಪ್ಪ ಜಿಲ್ಲೆಯಲ್ಲೇ ಅಕ್ರಮ ಗಣಿಗಾರಿಕೆ ನಡಿತಾ ಇದೆ ಎಂದು ಹೇಳಿದರು.

ಕಾನೂನು ಪ್ರಕಾರ ಎಲ್ಲ ಅಕ್ರಮ ಗಣಿಗಾರಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಿ. ಒಂದೊಂದು ಪಕ್ಷಕ್ಕೆ ಒಂದೊಂದು ಕಾನೂನು ಇರಲ್ಲ. ಮೂರು ಪಕ್ಷದವರದ್ದು ಅಕ್ರಮ ಗಣಿಗಾರಿಕೆ ಇದ್ರೆ ರದ್ದು ಮಾಡಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. 28ಕ್ಕೆ ಸಿಎಲ್​ಪಿ ಸಭೆ ಮಾಡಿ ಉಪಸಭಾಪತಿ ಹಾಕುವ ಬಗ್ಗೆ ಚರ್ಚೆ ಮಾಡುತ್ತೇವೆ. 27ಕ್ಕೆ ಶಿವಮೊಗ್ಗ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಮಂತ್ರಿ ಪದವಿ ಅಸಮಾಧಾನ ವಿಚಾರದ ಬಗ್ಗೆ ಹಾಸ್ಯಮಯವಾಗಿಯೇ ಪ್ರತಿಕ್ರಿಯೆ ನೀಡಿದ ಅವರು, ಮಾತು ತಪ್ಪದ ನಾಯಕ ಯಡಿಯೂರಪ್ಪ... ಯಡಿಯೂರಪ್ಪ... ಯಡಿಯೂರಪ್ಪ... ಈಗ ನಾಲಿಗೆ ಇಲ್ಲದ ನಾಯಕ ಯಡಿಯೂರಪ್ಪ... ಯಡಿಯೂರಪ್ಪ... ಯಡಿಯೂರಪ್ಪ...ಇದು ನಾನು ಹೇಳಿದ್ದು ಅಲ್ಲ ಅವರೇ ಹೇಳಿದ್ದು ಎಂದರು.

Next Story

RELATED STORIES