Top

ಕುಮಾರಸ್ವಾಮಿ ಒಂದು ತರಹ ಜೋಕರ್ - ಸಚಿವ ಸಿ.ಪಿ ಯೋಗೇಶ್ವರ್

2023ರ ಚುನಾವಣೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಬಹುಮತ.

ಕುಮಾರಸ್ವಾಮಿ ಒಂದು ತರಹ ಜೋಕರ್ - ಸಚಿವ ಸಿ.ಪಿ ಯೋಗೇಶ್ವರ್
X

ದಕ್ಷಿಣಕನ್ನಡ: ಕುಮಾರಸ್ವಾಮಿ ಓರ್ವ ಅವಕಾಶವಾದಿ ರಾಜಕಾರಣಿ ಎಂದು ಪ್ರವಾಸೋದ್ಯಮದ ಸಚಿವ ಸಿ.ಪಿಯೋಗೇಶ್ವರ್ ಅವರು ಶುಕ್ರವಾರ ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಕುಮಾರಸ್ವಾಮಿ ಒಂದು ತರಹ ಜೋಕರ್ ತರಹ. ಯಾವ ಪಾರ್ಟಿಯಾದರೂ ಅಡ್ಜೆಸ್ಟ್​ಮೆಂಟ್ ಆಗುತ್ತಾರೆ. ಅವರಿಗೆ ನೈತಿಕತೆ, ಸಿದ್ದಾಂತ ಯಾವುದೂ ಇಲ್ಲ ಎಂದು ಟೀಕಿಸಿದ್ದಾರೆ.

ಸಿಎಂ ಆಗಿದ್ದಾಗ ಕುಮಾರಸ್ವಾಮಿ ಉಡಾಫೆಯಾಗಿ ವರ್ತಿಸಿದ್ದರು. ಕುಮಾರಸ್ವಾಮಿಯವರಿಗೆ ಆತಂಕ ಕಾಡುತ್ತಿದೆ. ದಿನಬೆಳಗೆದ್ದು ಅವರು ಜನರ ಕಡೆ ಹೋಗುತ್ತಿದ್ದಾರೆ. ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ, ಅಧಿಕಾರ ಇಲ್ಲದಾಗ ಜನರ ಬಳಿ ಹೋಗಿ ಗೋಳಾಡುವುದು. ಕಣ್ಣೀರು ಹಾಕುವುದು ಅವರ ಗುಣವಾಗಿಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸದ್ಯ 2023ರ ಚುನಾವಣೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಬಹುಮತ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸಂಪೂರ್ಣ ನೆಲಕಚ್ಚುತ್ತದೆ. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಆತಂಕದಲ್ಲಿದ್ದಾರೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ಅವರು ಹೇಳಿದರು.

Next Story

RELATED STORIES