Top

ನೀವೂ ಆಲದ ಮರವಾಗಲು ಕುಮಾರಣ್ಣ ನೀರು ಹಾಕಿದ್ದಾರೆ - ಮಾಜಿ ಸಚಿವ ಸಾ.ರಾ ಮಹೇಶ್

ಆಲದ ಮರ ಬೇರು ಬಿಟ್ಟರೆ ಪಕ್ಕದಲ್ಲಿ ಯಾವುದೇ ಬೇರು ಬಿಡಲು ಬಿಡೋದಿಲ್ಲ. ನಾನು ಅದನ್ನ ಅರಣ್ಯಾಧಿಕಾರಿ ಬಳಿ ಮಾಹಿತಿ ಪಡೆದುಕೊಂಡೆ.

ನೀವೂ ಆಲದ ಮರವಾಗಲು ಕುಮಾರಣ್ಣ ನೀರು ಹಾಕಿದ್ದಾರೆ - ಮಾಜಿ ಸಚಿವ ಸಾ.ರಾ  ಮಹೇಶ್
X

ಮೈಸೂರು: ಹೆಚ್​.ಡಿ ಕುಮಾರಸ್ವಾಮಿ ಅವರನ್ನ ಸಹಕಾರಿ ಕ್ಷೇತ್ರಕ್ಕೆ ಕರೆತರಬಾರದಿತ್ತು ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಅವರು ಜಿ.ಟಿ ದೇವೇಗೌಡ ಅವರ ಹೇಳಿಕೆಗೆ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸರ್ಕಾರದ ಭಾಗವನ್ನ ಮತದಾನ ಮಾಡಬಹುದು ಎಂದು ತಂದವರು ಯಾರು(?) ಸಬ್ ಡಿವಿಷನ್ ಎಂದು ತಂದು ಮತದಾನಕ್ಕೆ ಆದ್ಯತೆ ಕೊಟ್ಟವರು ಯಾರು(?) ಅಂದು ನಿಮಗೆ ಅದು ನೆನಪಿಗೆ ಬರಲಿಲ್ಲವೇ(?) ಕೆಲ ಮೈಮುಲ್ ಅಭ್ಯರ್ಥಿಗಳಿಗೆ ನಮ್ಮ ಟೀಂಗೆ ಬಂದರೆ ಮಾತ್ರ ಟಿಕೆಟ್ ಕೊಡ್ತಿನಿ ಎಂದವರು ಯಾರು(?) ಎಂದು ಜಿಟಿಡಿಗೆ ಪ್ರಶ್ನೆ ಮಾಡಿದ್ದಾರೆ.

ಇನ್ನು ಪಿರಿಯಾಪಟ್ಟಣದ ಶಾಸಕರ ಮಗ ಹಾಗೂ ಮತ್ತೊಬ್ಬ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೀರಾ ಇಲ್ಲ. ಆ ಶಾಸಕರು ನಮ್ಮ ಜೆಡಿಎಸ್ ಪಕ್ಷದಿಂದ ಗೆದ್ದವರಲ್ಲವೇ(?) ನಾಲ್ಕು ಕಡೆಗಳಲ್ಲಿ ಜೆಡಿಎಸ್ ಬೆಂಬಲಿತರಿಗೆ ನೀವು ಟಿಕೆಟ್ ಕೊಡಲಿಲ್ಲ. ಮೈಸೂರು ಹಾಗೂ ಹುಣಸೂರು ಸಬ್ ಡಿವಿಷನ್​ನಲ್ಲಿ ಬಿಜೆಪಿ ಕಾಂಗ್ರೆಸ್, ನೀವೂ ಮೂರು ಜನ ಒಂದಾದ್ರಿ. ಆದರೂ ಇಲ್ಲಿ ರಾಜಕಾರಣ ಬೇಡ ಅಂತ ಹೇಳ್ತಿರಾ(?) ಆದ್ರು ಕುಮಾರಸ್ವಾಮಿ ಅವರನ್ನ ಇಲ್ಲಿಗೆ ತರಬಾರದಿತ್ತು ಅಂತೀರಾ(?) ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಜನತಾದಳವನ್ನ ಅಣಿಯಲು ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ. ನಾನು ಆಲದ ಮರ ನನ್ನನ್ನು ಕಡಿಯಲು ಆಗಲ್ಲ ಅಂತೀರಾ(?) ನಾವು ನಿಮ್ಮನ್ನ ಕಡಿತಿವಿ ಎಂದು ಎಲ್ಲೂ ಹೇಳಿಲ್ಲ. ಆಲದ ಮರ ಬೇರು ಬಿಟ್ಟರೆ ಪಕ್ಕದಲ್ಲಿ ಯಾವುದೇ ಬೇರು ಬಿಡಲು ಬಿಡೋದಿಲ್ಲ. ನಾನು ಅದನ್ನ ಅರಣ್ಯಾಧಿಕಾರಿ ಬಳಿ ಮಾಹಿತಿ ಪಡೆದುಕೊಂಡೆ. ನೀವೂ ಆಲದ ಮರವಾಗಲು ಕುಮಾರಣ್ಣ ನೀರು ಹಾಕಿದ್ದಾರೆ. ಅದಕ್ಕೆ ಸರಿಯಾದ ಸಸಿಯನ್ನ ಹುಡುಕಿ ನೆಡುವ ಕೆಲಸ ಕುಮಾರಣ್ಣ ಈಗ ಮಾಡುತ್ತಿದ್ದಾರೆ ಎಂದು ಜಿ.ಟಿ ದೇವೇಗೌಡ ಅವರು ಹೇಳಿಕೆಗೆ ಸಾ.ರಾ ಮಹೇಶ್ ಅವರು ತಿರುಗೇಟು ನೀಡಿದ್ದಾರೆ.

Next Story

RELATED STORIES