Top

ಸಿಎಂ ಕೈಲಿ ಆಗಲ್ಲ ಅಂದ್ರೆ ತ್ಯಾಗ ಮಾಡಿ ಜನರ ಮುಂದೆ ಹೋಗಲಿ - ಡಿ.ಕೆ ಶಿವಕುಮಾರ್

ನಾವು ಸಹ ಪಕ್ಷದ ವತಿಯಿಂದ ಅಲ್ಲಿಗೆ ಭೇಟಿ ನೀಡುತ್ತೇವೆ

ಸಿಎಂ ಕೈಲಿ ಆಗಲ್ಲ ಅಂದ್ರೆ ತ್ಯಾಗ ಮಾಡಿ ಜನರ ಮುಂದೆ ಹೋಗಲಿ - ಡಿ.ಕೆ ಶಿವಕುಮಾರ್
X

ಬೆಂಗಳೂರು: ಶಿವಮೊಗ್ಗ ನಂತರ ಚಿಕ್ಕಬಳ್ಳಾಪುರದಲ್ಲಿ ದುರ್ಘಟನೆ ಇದಕ್ಕೆ ಜವಾಬ್ದಾರಿ ಯಾರು(?) ಇದನ್ನ ಸರ್ಕಾರ ಹೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಲ್ಲು ಕ್ವಾರಿ ನಿಲ್ಲಿಸುವಂತೆ ಜಿಲ್ಲಾಧಿಕಾರಿ ನೋಟಿಸ್ ಕೊಟ್ಟಿದ್ದರು. ಆದರೂ ಕೆಲಸ ಮುಂದುವರೆಸಿದ್ದಾರೆ ಇದರ ಹಿಂದೆ ಯಾರ ಪ್ರಭಾವ ಇದೆ. ಇದರ ಬಗ್ಗೆ ಸರ್ಕಾರವೇ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಾವಿನಲ್ಲೂ ಕೈ ರಾಜಕೀಯ ಎಂಬ ಸಚಿವ ಡಾ.ಕೆ ಸುಧಕಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಬಿಟ್ಟು ಅವರು ಬೇರೇನು ಹೇಳಲು ಸಾಧ್ಯ(?) ವಿಪಕ್ಷ ಇರೋದು ಸರ್ಕಾರದ ವೈಫಲ್ಯಗಳನ್ನ ತೋರಿಸಲು, ಆ ಕೆಲಸ ನಾವು ಮಾಡುತ್ತಿದ್ದೇವೆ. ಬೆಳಗಿನ ಜಾವ ಆಗಿರುವ ಘಟನೆ ಯಾರಿಗೆ ಗೊತ್ತಾಗುತ್ತೆ ಎಂದಿದ್ದಾರೆ.

ನಾವು ಏನು ಮಾಡಕ್ಕೆ ಆಗುತ್ತೆ ಅನ್ನೋ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರ ಕೈಲಿ ಆಗಲ್ಲ ಅಂದ್ರೆ ತ್ಯಾಗ ಮಾಡಿ, ಜನರ ಮುಂದೆ ಹೋಗಲಿ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು. ಈಗ ವಿರೋಧ ಪಕ್ಷದ ನಾಯಕರು ಹೋಗಿ ಬರ್ತಾರೆ. ನಾವು ಸಹ ಪಕ್ಷದ ವತಿಯಿಂದ ಅಲ್ಲಿಗೆ ಭೇಟಿ ನೀಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

Next Story

RELATED STORIES