Top

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆ ವಿವಾದ ಬಗ್ಗೆ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷರು, ಆಗಮ ಶಾಸ್ತ್ರದ ಗೋವಿಂದ ಭಟ್ ಇರ್ತಾರೆ

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆ ವಿವಾದ ಬಗ್ಗೆ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ
X

ದಕ್ಷಿಣಕನ್ನಡ: ಶಿವರಾತ್ರಿ ಪೂಜಾ ಪದ್ಧತಿ ಕುರಿತು ಕೆಲವೊಂದು ಜಿಜ್ಞಾಸೆಗಳಿವೆ. ಈ ಬಗ್ಗೆ ನಮ್ಮ ಇಲಾಖೆಯ ಆಗಮ ಪಂಡಿತರು, ವೇದಶಾಸ್ತ್ರ ಪರಿಣಿತರು ಕುಳಿತು ಮಾತನಾಡ್ತಾರೆ ಎಂದು ಮುಜುರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್​ ಪೂಜಾರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳೂರಿನಲ್ಲಿಂದು ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷರು, ಆಗಮ ಶಾಸ್ತ್ರದ ಗೋವಿಂದ ಭಟ್ ಇರ್ತಾರೆ. ಅವರು ಈ ಜಿಜ್ಞಾಸೆಗೆ ಒಟ್ಟಾಗಿ ಪರಿಹಾರ ಹುಡುಕ್ತಾರೆ ಎಂದಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲೇ ಸಭೆ ನಡೆಸಲು ನಾನು ಹೇಳಿದ್ದೆ. ಆದರೆ, ಆಗಮ ಶಾಸ್ತ್ರ ಪಂಡಿತರು ಮೈಸೂರಿನಲ್ಲಿದ್ದು, ಇವತ್ತು ಕುಕ್ಕೆಗೆ ಬರ್ತಾರೆ. ಹೀಗಾಗಿ ದೇವಸ್ಥಾನದಲ್ಲೇ ಕೂತು ಪರಿಹಾರ ಮಾಡ್ತಾರೆ. ಮಧ್ಯಾಹ್ನದ ಹೊತ್ತಿಗೆ ಎಲ್ಲರೂ ಕೂತು ಜಿಜ್ಞಾಸೆ ಪರಿಹಾರ ಮಾಡ್ತಾರೆ. ಅವರ ಭಾವನೆ ವ್ಯಕ್ತಪಡಿಸಲು ಎಲ್ಲರಿಗೂ ನಾವು ಅವಕಾಶ ಕೊಡುತ್ತೇವೆ ಎಂದು ಸಚಿವ ಶ್ರೀನಿವಾಸ್ ಪೂಜಾರಿ ಅವರು ಮಾತನಾಡಿದ್ದಾರೆ.

Next Story

RELATED STORIES