Top

ಜೆಡಿಎಸ್ ಪಕ್ಷ ಮತ್ತು ನನ್ನ ತಂಟೆಗೆ ಬಂದ್ರೆ ಹುಷಾರ್ - ಮಾಜಿ ಸಿಎಂ ಹೆಚ್ಡಿಕೆ ವಾರ್ನಿಂಗ್​

ಮಹಾರಾಷ್ಟ್ರ ಸಿಎಂ ಒಂದು ರೀತಿಯ ಭಯೋತ್ಪಾದಕ ಹೇಳಿಕೆ ನೀಡಿದ್ದಾರೆ

ಜೆಡಿಎಸ್ ಪಕ್ಷ ಮತ್ತು ನನ್ನ ತಂಟೆಗೆ ಬಂದ್ರೆ ಹುಷಾರ್ - ಮಾಜಿ ಸಿಎಂ ಹೆಚ್ಡಿಕೆ ವಾರ್ನಿಂಗ್​
X

ಬೆಂಗಳೂರು: ಮಹಾರಾಷ್ಟ್ರ ಮುಖ್ಯಮಂತ್ರಿಗಳ ದ್ವೇಷದ, ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕು. ಜವಾಬ್ದಾರಿಯುತ ಸಿಎಂಗಳು ಚೈನಾ ಮತ್ತು ಪಾಕ್ ಆಕ್ರಮಿತ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.

ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಹೇಳಿಕೆ ಬಗ್ಗೆ ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಒಂದು ರೀತಿಯ ಭಯೋತ್ಪಾದಕ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.

2006ರಲ್ಲಿ ನಾನು ಸಿಎಂ ಆಗಿದ್ದಾಗ ಶಿವರಾಜ್ ಪಾಟೀಲ್ ಗೃಹ ಸಚಿವರಾಗಿದರು. ಆ ಸಂದರ್ಭದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಲು ಒತ್ತಡ ಹಾಕಿದರು. ಸುವರ್ಣಸೌಧ ಕಟ್ಟಿ, ಬೆಳಗಾವಿ ಅಧಿವೇಶನ ಮಾಡಲಾಯಿತು ನಂತರ ಬಂದ ಸರ್ಕಾರಗಳು ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಲು ಅವಕಾಶ ನೀಡದವರು ಕನ್ನಡ ದ್ರೋಹಿಗಳು, ಗೃಹ ಸಚಿವರು ಮಹಾರಾಷ್ಟ್ರ ಹೇಳಿಕೆ ಬಗ್ಗೆ ಚಕಾರ ಎತ್ತಿಲ್ಲ, ತಮ್ಮ ಭಾಷಣದಲ್ಲಿ ಮಹಾರಾಷ್ಟ್ರ ಸಿಎಂ ಹೇಳಿಕೆಯನ್ನ ಗೃಹ ಸಚಿವರು ಖಂಡಿಸಬೇಕಿತ್ತು. ಸಂಘಟನೆಗಳ ಪರ ಧ್ವನಿ ಎತ್ತದಿದ್ದಲ್ಲಿ ದ್ರೋಹ ಎಸಗಿದಂತೆ ಒಕ್ಕೂಟ ವ್ಯವಸ್ಥೆಯ ನಿರ್ನಾಮ ಮಾಡಲು ಹೋರಟಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೆಚ್ಡಿಕೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಜೆಡಿಎಸ್ ನಿರ್ನಾಮ ಮಾಡುವವರು ಎಲ್ಲೆಲ್ಲಿಗೋ ಹೋಗಿದ್ದಾರೆ. ಜೆಡಿಎಸ್ ಪಕ್ಷದ ಸುದ್ದಿಗೆ ಬರಬೇಡಿ. ನನ್ನ ತಂಟೆಗೆ ಬಂದ್ರೆ ಹುಷಾರ್(!) ನನ್ನ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಬೇಡಿ ಯಡಿಯೂರಪ್ಪ. ನನ್ನ ಸುದ್ದಿಗೆ ಬಂದ್ರೆ, ಸರಿ ಇರದು.ಹೇಗೋ ಸುಭದ್ರವಾಗಿದ್ದೀರಿ ನಾನು ಕೈ ಹಾಕಿದ್ರೆ ಸರಿ ಇರಲ್ಲ, ಕಾಂಗ್ರೆಸ್ ಬಗ್ಗೆ ಮಾತನಾಡಿಕೊಳ್ಳಿ ಎಂದು ಸಿಎಂ ಬಿಎಸ್​ವೈಗೆ ಹೆಚ್ಡಿಕೆ ವಾರ್ನಿಂಗ್​ ಕೊಟ್ಟಿದ್ದಾರೆ.

ಸಿಡಿ ವಿಚಾರದ ಬಗ್ಗೆ ಮಾತನಾಡೋಲ್ಲ, ಈಗಲಾದರೂ ಅಭಿವೃದ್ಧಿಯ ಕಡೆ ಜನ ಗಮನ ಹರಿಸಲಿ. ಆಡಳಿತದ ವೈಫಲ್ಯ ಮುಂದುವರಿದಿದೆ. ಯಾವ ಅಳತೆಗೋಳಿನ ಆಧಾರದಲ್ಲಿ ಮಂತ್ರಿ ಮಾಡಿಜ್ದೀರೋ ತಮಗೆ ಬಿಟ್ಟದ್ದು, ರಾಜ್ಯದ ಅಭಿವೃದ್ದಿ ಬಗ್ಗೆ ಗಮನ ಹರಿಸಿ, ಅಧಿಕಾರದ ಮದದಲ್ಲಿ ಮುಂದಿನ ಬಾರಿಯೂ ನಮ್ಮ ಸರ್ಕಾರ ಬರುತ್ತೆ ಎಂದು ಹೇಳ್ತಾರೆ. ಸಾರ್ವತ್ರಿಕ ಚುನಾವಣೆ ಬೇರೆಯದ್ದೆ ರೀತಿ ನಡೆಯಲಿದೆ. ಮನೆ ಅಡವಿಟ್ಟು ಸರ್ಕಾರ ತಂದೆ ಅಂತಾರೆ. ಅವರ ಸಾಲ ತೀರಿಸಲು ಗಮನ ಹರಿಸಬೇಡಿ. ರಾಜ್ಯದ ಅಭಿವೃದ್ದಿ ಬಗ್ಗೆ ಗಮನ ಹರಿಸಿ, ಇಲ್ಲಿಯವರೆಗೆ ರಾಜ್ಯ ಲೂಟಿ ಮಾಡಿದ್ದು ಸಾಕು ಎಂದರು.

ಬಿ ಟೀಮ್ ಎಂದವರು, ಯಡಿಯೂರಪ್ಪ ಇಳಿಯುತ್ತಾರೆ ಎಂದು ಹೇಳ್ತಾರೆ. ಹಾಗಾದರೆ ಆರ್​ಆರ್​ಎಸ್​ ಬಿ ಟೀಮ್ ಇವರಾ(?) ಎಂದು ಹೆಚ್ಡಿಕೆ ಅವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಸದ್ಯ ಹೇಗೋ ಕ್ಷೇಮವಾಗಿ ಇದ್ದೀರಿ ಇರಿ, ಅಪ್ಪ-ಮಕ್ಕಳ ತಂಟೆಗೆ ಬರಬೇಡಿ. ಇನ್ನೊಂದು ಜನ್ಮ ಎತ್ತಿ ಬಂದರೂ ಜೆಡಿಎಸ್ ನಿರ್ನಾಮ ಅಸಾಧ್ಯ(?) ಎಂದು ಹೆಚ್​.ಡಿ ಕುಮಾರಸ್ವಾಮಿ ಅವರು ಖಡಕ್​ ಆಗಿ ಎದುರಾಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

Next Story

RELATED STORIES