Top

'ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರವಲ್ಲ, ಯಡಿಯೂರಪ್ಪನವರ ಕುಟುಂಬದ ಸರ್ಕಾರ'

ಕಳೆದೊಂದು ವರ್ಷದಿಂದ ನಾನು ನಿಷ್ಕ್ರಿಯನಾಗಿದ್ದೇನೆ ಅದಕ್ಕೆ ಕಾರಣ ವೈದ್ಯರ ಸಲಹೆ

ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರವಲ್ಲ, ಯಡಿಯೂರಪ್ಪನವರ ಕುಟುಂಬದ ಸರ್ಕಾರ
X

ಶಿವಮೊಗ್ಗ: ಕಳೆದ ಒಂದು ವರ್ಷದಿಂದ ಕೊರೊನಾ ಇದ್ದರಿಂದ ರಾಜ್ಯದ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ ವಿಷಯಗಳನ್ನು ನಾನು ಮಾತನಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ರೈತರು ಬೆಳದಂತಹ ಬೆಳೆಗಳು ನಾಶವಾಗಿವೆ. ಭಗವಂತನ ದಯೆಯಿಂದ ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದೆ. ನಾನು, ಜುಲೈನಲ್ಲಿ ಅಧಿಕಾರದಿಂದ ನಿರ್ಗಮಿಸಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದಿದ್ದಾರೆ.

ಆಹಾರ ಸಚಿವರ ಹೇಳಿಕೆ ಅತ್ಯಂತ ಬಾಲಿಷ ಹಾಗೂ ಜನ ಜನ ವಿರೋಧಿ ತೀರ್ಮಾನವಾಗಿದೆ. ಆರೋಗ್ಯ ಸಚಿವರಿಗೆ ಪರಿಜ್ಞಾನ ಇಲ್ಲ. ಇದು ಅತ್ಯಂತ ಕೆಟ್ಟ ತೀರ್ಮಾನವಾಗಿದೆ. ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರವಲ್ಲ, ಯಡಿಯೂರಪ್ಪನವರ ಕುಟುಂಬದ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಕಳೆದೊಂದು ವರ್ಷದಿಂದ ನಾನು ನಿಷ್ಕ್ರಿಯನಾಗಿದ್ದೇನೆ ಅದಕ್ಕೆ ಕಾರಣ ವೈದ್ಯರ ಸಲಹೆ. ನಾನು ಪಕ್ಷದ ಸಂಘಟನೆಗೆ ಚಾಲನೆ ನೀಡಲು ತೀರ್ಮಾನ ಮಾಡಿದ್ದೇನೆ. ಮೈತ್ರಿ ಸರ್ಕಾರ ಪತನವಾದ ಬಳಿಕ ಬಂದ ಸರ್ಕಾರ ಎರಡು ವರ್ಷದಲ್ಲಿ ಮಾಡಿರುವ ಘೋಷಣೆ. ಜನಸಾಮಾನ್ಯರಿಗೆ ಹೇಗೆ ಸ್ಪಂದಿಸಿದ್ದಾರೆ ಎನ್ನುವುದನ್ನ ನೋಡಿದ್ದೇನೆ. ಈ ದೇಶದಲ್ಲಿ ಇರೋ ವ್ಯವಸ್ಥೆ ಕಾರ್ಪೊರೇಟರ್ ಹಾಗೂ ಶ್ರೀಮಂತರಿಗೆ ಅನುಕೂಲವಾಗಲಿವೆ ಎಂದು ಮುಖ್ಯ ನ್ಯಾಯಾಧಿಶರು ಹೇಳಿದ್ದಾರೆ. ಸರ್ಕಾರದ ಹಲವಾರು ಪ್ರಕರಣಗಳನ್ನ ನಾನು ಚರ್ಚೆ ಮಾಡುತ್ತಿಲ್ಲ ಎಂದರು.

2018ರಲ್ಲಿ ಮಳೆಯಿಂದಾಗಿ ಮನೆಗಳು ಬಿದ್ದಿದ್ದವು, ಮನೆ ಕಟ್ಟಲು 5 ಲಕ್ಷ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಮೊನ್ನೆ ಸದನದಲ್ಲಿ ಸಚಿವರು ಸರ್ಕಾರದ ಹಣವನ್ನ ಪಡೆಯಲು ಫಲಾನುಭವಿ ಬೇಡ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ. ಬಜೆಟ್​ನ ಕಾರ್ಯಕ್ರಮಗಳನ್ನ ಡೈ ವರ್ಟ್ ಮಾಡಿ ಶಿವಮೊಗ್ಗನಗರದ ಅಭಿವೃದ್ದಿಗೆ ನೀಡಲಾಗಿತ್ತು. ನಾನು ಶಿವಮೊಗ್ಗದ ಕೆಲ ಪ್ರದೇಶಗಳನ್ನ ನೋಡಿದ್ದೇನೆ. ಅವುಗಳ ಅಭಿವೃದ್ಧಿ ಆಗಿಲ್ಲ. ಎರಡು ವರ್ಷದ ಬಜೆಟ್ ಹಣ ಎಲ್ಲಿ ಹೋಯಿತು. ರಾಜ್ಯದ ಜನರು ಕಟ್ಟುವ ತೆರಿಗೆ ಹಣ ದುರ್ಬಳಿಕೆ ಆಗುತ್ತಿದೆ ಎಂದು ಹೆಚ್ಡಿಕೆ ನುಡಿದರು.

ಮೀಸಲಾತಿ ವಿಚಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಮೀಸಲಾತಿಗೆ ಅವಕಾಶ ಇದೆ ಅಥವಾ ಇಲ್ಲವಾ ಎನ್ನುವ ವಾಸ್ತವಾಂಶಗಳನ್ನ ಜನರಿಗೆ ಸರ್ಕಾರ ಕೊಡುತ್ತಿಲ್ಲ. ಜಾತಿ ಜಾತಿಗಳ ನಡುವೆ ಸಂಘರ್ಷ ಮಾಡುವುದಕ್ಕೆ ಸರ್ಕಾರ ಹೊರಟಿದೆಯ ಎಂಬ ಅನುಮಾನ ಮೂಡಿದೆ. ಮೀಸಲಾತಿ ದೊಡ್ಡ ಮಟ್ಟದಲ್ಲಿ ತೀರ್ಮಾನ ಆಗಬೇಕೆಂಬುದು ನಮ್ಮ ಬಯಕೆ. ನಿಜವಾದ ಬಡವರ್ಗ ಹಾಗೂ ಸಮಾಜಕ್ಕೆ ನ್ಯಾಯಕೂಡುವ ನಿಟ್ಟಿನಲ್ಲಿ ಸರ್ಕಾರ ಮೀಸಲಾತಿ ತೀರ್ಮಾನ ಕೈಗೊಳ್ಳಬೇಕು. ಇನ್ನೊಬ್ಬರ ಟೀಕೆಯ ಬದಲು ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಯಾವ ಪಕ್ಷದ ಆಶ್ರಯವಿಲ್ಲದೆ ಅಧಿಕಾರ ಹಿಡಿಯಲು ಸಂಘಟನೆ ಮಾಡಲಾಗುತ್ತದೆ. ರಾಜ್ಯದಲ್ಲಿ ದೊಡ್ಡಮಟ್ಟದ ಅನಾಹುತಗಳಿಗೆ ಎಡಮಾಡಿಕೊಡ ಬಾರದು ಎಂದು ಮಾಜಿ ಸಿಎಂ ಹೆಚ್ಡಿಕೆ ಸಲಹೆ ನೀಡಿದ್ದಾರೆ.

ಜೆಡಿಎಸ್ ಪಕ್ಷಕ್ಕೆ ಯಾವುದೇ ಒಪ್ಪಂದ ಮಾಡಿಕೊಳ್ಳಲು ಅವಕಾಶವಿಲ್ಲ. ವಿಧಾನ ಪರಿಷತ್ ಸಭಾಪತಿ ಹಾಗೂ ಉಪಸಭಾ ವಿಚಾರದಲ್ಲಿ ಬಿಜೆಪಿ ಪಕ್ಷ ನಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿದ್ದರು. ರಾಜ್ಯದಲ್ಲಿ ಕೃಷಿ ಕಾಯಿದೆ ವಿಚಾರದಲ್ಲಿ ಬದಲಾವಣೆ ತರಲು ನಾನು ಸಲಹೆ ನೀಡಿದೆ. ನಾನು ನೀಡಿದ ಸಲಹೆ ಮೇರೆಗೆ 79ಎ ಹಾಗೂ 79 ಬಿ ಹಳೆಯ ಕಾಯ್ದೆಗಳನ್ನ ಮುಂದುವರಿಸಿದ್ದಾರೆ. ನಮ್ಮ ಪಕ್ಷದ ನಿಲುವು ರಾಜಕೀಯದ ಫಲ ಪಡೆಯುವುದಕ್ಕೆ ಅಲ್ಲ. ನಾವು ಜನಪರವಾಗಿ ತೀರ್ಮಾನ ಮಾಡುತ್ತೇವೆ ಎಂದು ಹೆಚ್​​.ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.

Next Story

RELATED STORIES