ಏಳಿಗೆ ಸಹಿಸದವರು ವಿಷಕನ್ಯೆ ಬಳಸಿದರಾ ಎಂಬ ಅನುಮಾನವಿದೆ - ಮಹೇಶ್ ಕುಮಟಳ್ಳಿ
ಹನಿ ಟ್ರಾಪ್ ಆಯ್ತಾ ಎಂದೂ ನಾವು ಕೇಳಬೇಕಾಗುತ್ತದೆ
ಬೆಂಗಳೂರು: ಹಿಂದೆ ಒಬ್ಬ ಒಳ್ಳೆ ವ್ಯಕ್ತಿಯನ್ನು ಹಾಳು ಮಾಡಲು ವಿಷಕನ್ಯೆಯರನ್ನು ಬಳಸುತ್ತಿದ್ದರು. ಹಾಗೆಯೇ ಇಲ್ಲಿಯೂ ರಮೇಶಣ್ಣನವರನ್ನ, ಅವರ ಏಳಿಗೆ ಸಹಿಸದವರು ವಿಷಕನ್ಯೆ ಬಳಸಿದರಾ ಎಂಬ ಅನುಮಾನವಿದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ತನಿಖೆ ಆಗಬೇಕು. ವಿಡಿಯೋ ಫೇಕ್ ಅಂತ ಈಗಾಗಲೇ ರಮೇಶಣ್ಣನವರು ಹೇಳಿದ್ದಾರೆ. ಅವರ ಕೊರಳಲ್ಲಿ ಮಚ್ಚೆ ಇದೆ. ಆದರೆ, ವಿಡಿಯೋದಲ್ಲಿ ಮಚ್ಚೆ ಇರಲಿಲ್ಲ ಎಂದೆಲ್ಲ ಚರ್ಚೆ ಆಗುತ್ತಿದೆ ಎಂದರು.
ರಮೇಶ್ ಜಾರಕಿಹೊಳಿಯವರ ಜೊತೆ ನಾವಿದ್ದೇವೆ. ಅವರು ಆರೋಪ ಮುಕ್ತರಾಗಿ ಮತ್ತೆ ಮಂತ್ರಿ ಆಗಲಿ. ಅವರನ್ನು ನಾವು ಮಂತ್ರಿ ಮಾಡುತ್ತೇವೆ ಎಂದು ಹೇಳಿದರು.
ಇನ್ನು ದಿನೇಶ್ ಕಲ್ಲಹಳ್ಳಿ ಸಂತ್ರಸ್ಥೆಯನ್ನು ಕರೆದುಕೊಂಡು ಬಂದೆ ದೂರು ನೀಡಬಹುದಿತ್ತು. ಅವರನ್ನು ಸಂತ್ರಸ್ಥೆ ಎನ್ನಲು ಬಲವಂತವಾಗಿ ಏನೂ ನಡೆದಿಲ್ಲ, ಹನಿ ಟ್ರಾಪ್ ಆಯ್ತಾ ಎಂದೂ ನಾವು ಕೇಳಬೇಕಾಗುತ್ತದೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಅವರು ತಮ್ಮ ಮಿತ್ರ ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ.