Top

ಮೀಸಲಾತಿ ಬಗ್ಗೆ ಹೇಳೋರೋ ಕೇಳೋರು ಯಾರು ಇಲ್ವಾ - ವಿ.ಶ್ರೀನಿವಾಸ್ ಪ್ರಸಾದ್

ನಾನು ಜವಾಬ್ದಾರಿಯುತ ಪಾರ್ಲಿಮೆಂಟ್ ಸದಸ್ಯ. ಮೀಸಲಾತಿ ಯಾರು ಮಾಡಬಹುದು ಅನ್ನೋದು ಗೊತ್ತು.

ಮೀಸಲಾತಿ ಬಗ್ಗೆ ಹೇಳೋರೋ ಕೇಳೋರು ಯಾರು ಇಲ್ವಾ - ವಿ.ಶ್ರೀನಿವಾಸ್ ಪ್ರಸಾದ್
X

ಬೆಂಗಳೂರು: ಪಕ್ಷವನ್ನ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಅನ್ನೋ ಉತ್ಸಾಹ ಕಾರ್ಯಕರ್ತರಲ್ಲಿದೆ. ಆದರೆ, ಈ ಉತ್ಸಾಹ ರಾಜ್ಯ ಮಟ್ಟದ ನಾಯಕರಲ್ಲಿಲ್ಲ ಎಂದು ಬಿಜೆಪಿ ಸಂಸದ ಶ್ರೀನಿವಾಸ್​ ಪ್ರಸಾದ್ ಅವರು ರಾಜ್ಯ ಮಟ್ಟದ ನಾಯಕರ ವಿರುದ್ಧ ಗರಂ ಆಗಿದ್ದಾರೆ.

ನಿನ್ನೆ ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಜಿಲ್ಲಾ ಕಾರ್ಯಕರ್ಣಿ ಸಭೆಯಲ್ಲಿ ಬಿಜೆಪಿ ಮುಖಂಡರನ್ನ ತರಾಟೆಗೆ ತೆಗೆದುಕೊಂಡು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, 'ಈಶ್ವರಪ್ಪನೇ ಹೋಗಿ ಮೀಸಲಾತಿ ಹೋರಾಟದಲ್ಲಿ ನಿಂತುಕೊಂಡ್ರೆ. ಶಕ್ತಿ ಪ್ರದರ್ಶನ ಮಾಡಿದ್ರೆ ಪಕ್ಷದ ಕತೆ ಏನ್ ಆಗ್ಬೇಕು(?) ಈಶ್ವರಪ್ಪ, ವಿಶ್ವನಾಥ್​ವರೇ ಮುಂದಾಳತ್ವವಹಿಸಿ ಬಿಟ್ರೆ ಪಕ್ಷದ ಕತೆ ಏನು(?) ಮೀಸಲಾತಿ ಬಗ್ಗೆ ಹೇಳೋರೋ ಕೇಳೋರು ಯಾರು ಇಲ್ವಾ(?) ಮೀಸಲಾತಿಗೆ ಅರ್ಥ ಇಲ್ವಾ(?) ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟವಾದ ಹೇಳಿಕೆ ಕೊಡಬೇಕು ಎಂದು ಹೇಳಿದ್ದಾರೆ.

ಇನ್ನು 'ನಾನು ಜವಾಬ್ದಾರಿಯುತ ಪಾರ್ಲಿಮೆಂಟ್ ಸದಸ್ಯ. ಮೀಸಲಾತಿ ಯಾರು ಮಾಡಬಹುದು ಅನ್ನೋದು ಗೊತ್ತು. ಈ ವಿಚಾರವಾಗಿ ಪಾರ್ಲಿಮೆಂಟ್ ಏನು ಅಧಿಕಾರವಿದೆ ಮತ್ತು ಸುಪ್ರೀಂಕೋರ್ಟ್​ಗೆ ಏನು ಅಧಿಕಾರ ಇದೆ ಅನ್ನೋದು ಗೊತ್ತು. ನೀವೇನು ವಿಮ್ಸ್ ಅಂಡ್ ಫ್ಯಾನ್ಸಿ ನಾ ಟೈಂ ಕೋಡೋದಕ್ಕೆ. ವೇದಿಕೆ ಮೇಲೆ ಭಾಷಣ ಮಾಡಿ ಪಕ್ಷವನ್ನ ಇಕ್ಕಟ್ಟಿಗೆ ಸಿಲುಕಿಸೋದಾ(?) ಮೀಸಲಾತಿ ಬಗ್ಗೆ ಪಕ್ಷದ ಸ್ಪಷ್ಟವಾದ ಹೇಳಿಕೆ ಎಲ್ಲಿದೆ(?) ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ಶ್ರೀನಿವಾಸ್​ ಪ್ರಸಾದ್ ಅವರು ಕಾರ್ಯಕಾರಣಿ ಸಭೆಯಲ್ಲಿ ಬಹಿರಂಗವಾಗೇ ಮೀಸಲಾತಿ ಹೋರಾಟದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಸದ್ಯ 'ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೈಸೂರಿನಲ್ಲಿ ನಮ್ಮ ಪಕ್ಷ ಎಲ್ಲಿದೆ ರೀ(?) ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರದಲ್ಲಿ ಎಲ್ಲಿದೆ(?) ಕೃಷ್ಣರಾಜ, ಚಾಮರಾಜ ಇಡ್ಕೊಂಡು ನೇತಾಡೋದು ಯಾವಾಗಲೂ. ಅದೇ ನರಸಿಂಹರಾಜಗೆ ಹೋದ್ರೆ ಮತ್ತೆ ಠುಸ್. ಚಾಮರಾಜನಗರದಲ್ಲೂ ಇದೆ ಕಥೆ. ನೀವು ಇದರ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಿ' ಎಂದು ಕಾರ್ಯಕಾರಣಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Next Story

RELATED STORIES