Top

ಸಮಾವೇಶದಲ್ಲಿ 2A ಮೀಸಲು ಜಾರಿ ಮಾಡಿಸಿದ್ರೆ ನಿರಾಣಿ ಅವರಿಗೆ ಕುಂದಾ ತಿನ್ನಿಸುತ್ತೇನೆ ಎಂದಿದ್ದೆ

ಸಮಾಜ ಸಂಘಟನೆಯನ್ನು ರಾಜಕೀಯ ಮೆಟ್ಟಲು ಮಾಡಬಾದರು. ಕೇವಲ ಸಮಾಜದ ಒಳಿತಿಗಾಗಿ ಈ ಹೋರಾಟ ಮೀಸಲು ಇಡಬೇಕು

ಸಮಾವೇಶದಲ್ಲಿ 2A ಮೀಸಲು ಜಾರಿ ಮಾಡಿಸಿದ್ರೆ ನಿರಾಣಿ ಅವರಿಗೆ ಕುಂದಾ ತಿನ್ನಿಸುತ್ತೇನೆ ಎಂದಿದ್ದೆ
X

ಬೆಳಗಾವಿ: ಇದು ಸತ್ಯಕ್ಕೆ ದೂರವಾದ ಸಂಗತಿ. ನಿರಾಣಿ ಅಣ್ಣ ಅಧಿಕಾರದಲ್ಲಿ ಇದ್ದು ಸಿಎಂ ಒತ್ತಡದಿಂದ ಹೇಳಿದ್ದಾರೆ. ಅವರು ಸಹ ಪಂಚಮಸಾಲಿ ಹೋರಾಟದಲ್ಲಿ ಭಾಗವಹಿಸಿದ್ದರು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಮಂಗಳವಾರ ಹೇಳಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಕಾಂಗ್ರೆಸ್ 'ಬಿ' ಟೀಮ್ ನಿರಾಣಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹೋರಾಟ ಸಮಾಜದ ಕೆಲಸ ಇದು ಪಕ್ಷ ಪರ ವಿರುದ್ಧ ಇರೋ ಹೋರಾಟ ಅಲ್ಲ. ಕಳೆದ 27 ವರ್ಷಗಳಿಂದ ನಡೆದ ಹೋರಾಟ ಯಶಸ್ವಿ ಆಗೋ ಹಂತ ತಲುಪಿದೆ ಎಂದು ಯತ್ನಾಳ್​ ಪರ ಬ್ಯಾಟಿಂಗ್​ ಮಾಡಿದ್ದಾರೆ.

ನಿರಾಣಿ, ಸಿ.ಸಿ. ಪಾಟೀಲ್ ಇಬ್ಬರು ಸಮಾಜದ ಮಕ್ಕಳಾಗಿ ಸಹಾಯ ಮಾಡಿ. ಸಿಎಂ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಮೊದಲು ಸಿಎಂಗೆ ಒತ್ತಡ ತನ್ನಿ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವಂತೆ ಮಾಡಿ ಎಂದಿದ್ದಾರೆ.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ಘೋಷಣೆ ಕುರಿತು ಮಾತನಾಡಿದ ಅವರು, ಯಾರು ಲಾಯಕ್ ಇದ್ದಾರೆ ಇಲ್ಲವೋ ನಿರಾಣಿ ಹೇಳಿದೆ ಸತ್ಯ ಆಗಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜತೆಗೆ ಚರ್ಚೆ ಮಾಡಿ ಮಾಡಬೇಕು ಅಂತ ಹೇಳಿದರು. ಸಮಾವೇಶದಲ್ಲಿ ಮೂಲೆ ಮೂಲೆಯಿಂದ ಜನ ಬಂದಿದ್ದರು. ಸಮಾವೇಶದಲ್ಲಿ ಪ್ರಕಟ ಮಾಡಿದ್ದರಿಂದ ಸ್ವಲ್ಪ ಹೆಚ್ಚು ಕಮ್ಮಿ ಆಗಿದೆ. ಒಬ್ಬ ವ್ಯಕ್ತಿಯನ್ನು ತೇಜೋವಧೆ ಮಾಡೋದು ಸರಿಯಲ್ಲ. ಸಮಾಜ ಸಂಘಟನೆಯನ್ನು ರಾಜಕೀಯ ಮೆಟ್ಟಲು ಮಾಡಬಾದರು. ಕೇವಲ ಸಮಾಜದ ಒಳಿತಿಗಾಗಿ ಈ ಹೋರಾಟ ಮೀಸಲು ಇಡಬೇಕು ಎಂದರು.

ಇನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯೆ ಶ್ರೀರಕ್ಷೆ. ಜನರ ಬಹಳಷ್ಟು ತಿಳುವಳಿಕೆ ಹೊಂದಿದ್ದಾರೆ. ಮುಂದಿನ ಟಾರ್ಗೆಟ್ ಏನಿದರು ಗೋಕಾಕ್ ಅಂತ ಹೇಳಿದಿನಿ. ಬೆ. ಗ್ರಾಮೀಣ ಕ್ಷೇತ್ರದಲ್ಲಿ ಶೀಘ್ರದಲ್ಲೇ ವಿನೂತನವಾಗಿ ಸಮಾವೇಶ ನಡೆಸಿ ಸತ್ಕಾರ ಮಾಡುತ್ತೇನೆ. ಸಮಾವೇಶದಲ್ಲಿ 2ಎ ಮೀಸಲು ಜಾರಿ ಮಾಡಿಸಿದ್ರೆ ನಿರಾಣಿ ಅವರಿಗೆ ಕುಂದಾ ತಿನ್ನಿಸುತ್ತೇನೆ ಎಂದಿದ್ದೆ. ಅದೇ ಭಾಷಣ ಬೆಂಗಳೂರು ಸಮಾವೇಶದಲ್ಲಿ ಮಾಡಿದೆ. ಜನ ಕುಂದಾ ಬೇಡ, ಗೋಕಾಕ್ ಕರದಂಟು ಬೇಕು ಅಂದರು ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಪರೋಕ್ಷವಾಗಿ ಸಚಿವ ರಮೇಶ್​ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.

Next Story

RELATED STORIES