Top

ಜಿಲ್ಲಾ ಪಂಚಾಯತ್ ಚುನಾವಣೆ ಒಳಗೆ ಒಂದು ದೃಢ ನಿರ್ಧಾರ ಮಾಡುತ್ತೇನೆ - ಮಧು ಬಂಗಾರಪ್ಪ

ಆಂತರಿಕ ಗೊಂದಲ, ವೈಯಕ್ತಿಕ ವಿಚಾರ ನನಗೆ ಯಾವುದು ಇಲ್ಲ. ಆದರೆ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ನಡೆಸಿಕೊಂಡ ಬಗ್ಗೆ ನೋವಿದೆ

ಜಿಲ್ಲಾ ಪಂಚಾಯತ್ ಚುನಾವಣೆ ಒಳಗೆ ಒಂದು ದೃಢ ನಿರ್ಧಾರ ಮಾಡುತ್ತೇನೆ - ಮಧು ಬಂಗಾರಪ್ಪ
X

ಶಿವಮೊಗ್ಗ: ಕಳೆದ ಒಂದೂವರೆ ವರ್ಷದಿಂದ ರಾಜಕೀಯ ಚಟುವಟಿಕೆಯಿಂದ ದೂರ ಉಳಿದಿದ್ದೆ. ಇವತ್ತು ನನ್ನ ಜನ್ಮದಿನ. ಇಂದಿನಿಂದ ಕೆಲ ಬದಲಾವಣೆಗಳನ್ನು ಮಾಡುವ ನಿರ್ಧಾರ ಮಾಡಿದ್ದೇನೆ ಎಂದು ಯುವ ಮುಖಂಡ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಮಂಗಳವಾರ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದಲಾವಣೆ ಅನಿವಾರ್ಯವಾಗಿದ್ದು, ಈ ಸಂಬಂಧ ಚರ್ಚೆ ಮಾಡುತ್ತಿದ್ದೇನೆ. ಜಿಲ್ಲಾ ಪಂಚಾಯತ್ ಚುನಾವಣೆ ಒಳಗೆ ಒಂದು ದೃಢ ನಿರ್ಧಾರ ಮಾಡುತ್ತೇನೆ ಎಂದರು.

ಸದ್ಯ ಕುಮಾರಣ್ಣನ ಜೊತೆ ನಾನು ತುಂಬಾ ಚೆನ್ನಾಗಿದ್ದೇನೆ. ಬೇಗ ನಿರ್ಧಾರ ಮಾಡೋದು ಕಷ್ಟ. ಆದರೆ, ಪಕ್ಷದ ಕೆಲವು ವಿಚಾರಗಳನ್ನು ಗಮನಿಸಿದಾಗ ಬದಲಾವಣೆ ಅನಿವಾರ್ಯ ಎನಿಸುತ್ತಿದೆ. ಆಂತರಿಕ ಗೊಂದಲ, ವೈಯಕ್ತಿಕ ವಿಚಾರ ನನಗೆ ಯಾವುದು ಇಲ್ಲ. ಆದರೆ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ನಡೆಸಿಕೊಂಡ ಬಗ್ಗೆ ನೋವಿದೆ ಎಂದು ಮಧು ಬಂಗಾರಪ್ಪ ಅವರು ಮಾತನಾಡಿದ್ದಾರೆ.

Next Story

RELATED STORIES