ಕುಮಾರಸ್ವಾಮಿಯವರು ವಿದೇಶಗಳಲ್ಲಿ ಇಸ್ಪೀಟ್ ಆಡಿದ ಫೋಟೋಗಳು ನನ್ನ ಬಳಿ ಇದೆ
ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ ಸ್ವಾರ್ಥಿಯಾಗುತ್ತಾರೆ

ದಕ್ಷಿಣ ಕನ್ನಡ: ನನ್ನ ಮಾತಿಗೆ ಇವತ್ತು ಕೂಡ ನಾನು ಬದ್ದನಾಗಿದ್ದೇನೆ. ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ ಸ್ವಾರ್ಥಿಯಾಗುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಅವರು ಶಮಿವಾರ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮತದಾರರನ್ನು ಜೀತದಾಳು ಅಂತಾ ತಿಳುದುಕೊಂಡಿದರು. ಅವರ ನಡವಳಿಕೆ ಗಮನಿಸಿದ ಮೇಲೆ ಇದು ನನಗೆ ತಿಳಿದಿದೆ. ಅವರು ಯಾವ ಪಾರ್ಟಿಗೆ ಬೇಕಾದರು ಅಡ್ಜೆಸ್ಟ್ ಆಗ್ತಾರೆ. ಆದರಿಂದ ಅವರನ್ನು ಜೋಕರ್ ಅಂದೆ ಅಷ್ಟೇ. ಅವರ ಬಗ್ಗೆ ನಾನು ಕಾಮಿಡಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿ.ಪಿ. ಯೋಗೇಶ್ವರ್ ಅವರು ಬಚ್ಚಾ ಅನ್ನೊ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಹೌದು ನಾನು ಬಚ್ಚಾನೆ. ರಾಮನಗರಕ್ಕೆ ಕುಮಾರಸ್ವಾಮಿ ಕೂಡ ರಾಜಕೀಯಕ್ಕೆ ಬಂದಾಗ ಬಚ್ಚಾನೆ. ಅವರ ರಾಮನಗರಕ್ಕೆ ಮೊದಲು ಬಂದಾಗ ಹವಾಯಿ ಚಪ್ಪಲಿ ಹಾಕ್ಕೊಂಡು ಬಂದಿದರು ಎಂದರು.
ಇಸ್ಪೀಟ್ ದಂಧೆ ಹಣದಿಂದ ಸಮ್ಮಿಶ್ರ ಸರ್ಕಾರ ಕೆಡವಿದ್ರು ಅನ್ನೊ ಕುಮಾರಸ್ವಾಮಿ ಆರೋಪ ಬಗ್ಗೆ ಮಾತನಾಡಿದ ಅವರು, ನನಗೆ ಇಸ್ಪೀಟ್ ಆಡೋಕೆ ಬರಲ್ಲ. ಇಸ್ಪೀಟ್ ಆಡೋಕೆ ಬರೋದು ಕುಮಾರಸ್ವಾಮಿಗೆ ಮಾತ್ರ. ಅವರು ಸಿಂಗಾಪುರಕ್ಕೆ ಹೋಗಿ ಇಸ್ಪೀಟ್ ಆಡೋದು. ಅವರು ವಿದೇಶಗಳಲ್ಲಿ ಇಸ್ಪೀಟ್ ಆಡಿದ ಫೋಟೊಗಳು ನನ್ನತ್ರ ಇದೆ. ವಿದೇಶದಲ್ಲಿ ಬೇರೆ ಬೇರೆ ಮಾಡಿದ ಫೋಟೊಗಳು ನನ್ನ ಬಳಿ ಇದೆ. ಅವಶ್ಯಕತೆ ಬಿದ್ದಾಗ ಫೋಟೊ ರಿಲೀಸ್ ಮಾಡುತ್ತೇನೆ ಎಂದು ಸಿ.ಪಿ ಯೋಗೇಶ್ವರ್ ಅವರು ಹೇಳಿದರು.