Top

ನಾನು ರಮೇಶ್ ಜಾರಕಿಹೊಳಿಯವರಿಗೆ ನೈತಿಕ ಬೆಂಬಲ ಕೊಡುತ್ತೇನೆ - ಸಚಿವ ಸಿಪಿವೈ

ಎಲ್ಲವೂ ರಮೇಶ್ ಅವರ ಹೇಳಿಕೆ ಪ್ರರಣದ ತನಿಖೆ ಮೇಲೆ ನಿಲ್ಲುತ್ತೆ.

ನಾನು ರಮೇಶ್ ಜಾರಕಿಹೊಳಿಯವರಿಗೆ ನೈತಿಕ ಬೆಂಬಲ ಕೊಡುತ್ತೇನೆ - ಸಚಿವ ಸಿಪಿವೈ
X

ಬೆಂಗಳೂರು: ನಾನು ರಮೇಶ್ ಜಾರಕಿಹೊಳಿಯವರಿಗೆ ನೈತಿಕ ಬೆಂಬಲ ಕೊಡುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಅವರು ಬುಧವಾರ ಹೇಳಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನನಗೆ ಘಟನೆ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ನಾನು ಬೆಂಗಳೂರಿಗೆ ಹೋಗಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.

ಇನ್ನು ವೈಯುಕ್ತಿಕವಾಗಿ ನಾನು ರಮೇಶ್ ಜಾರಕಿಹೊಳಿರನ್ನ ನೋಡಿದ್ದೇನೆ. ಅವರೊಬ್ಬ ದೈವಭಕ್ತ, ಸಮಾಜಕ್ಕೆ ಹೆದರುವಂತವರು. ಅವರ ಜೊತೆ ಮಾತನಾಡಿದಾಗ ಇದೊಂದು ರಾಜಕೀಯ ಪಿತೂರಿ ಅಂತ ಹೇಳಿದ್ದಾರೆ. ಆ ವಿಡಿಯೋ ಫೇಕ್ ಅಥವಾ ಜಿನಿಯನ್ ಅಂತ ಹೇಳಲು ಹೋಗಲ್ಲ. ಆದರೆ, ರಮೇಶ್ ಅವರು ಹೇಳಿದಂತೆ ಇದೊಂದು ದುರುದ್ದೇಶದಿಂದ ಮಾಡಿರೋದು ಅಂತ ಹೇಳಿದ್ದಾರೆ. ಎಲ್ಲವೂ ರಮೇಶ್ ಅವರ ಹೇಳಿಕೆ ಪ್ರರಣದ ತನಿಖೆ ಮೇಲೆ ನಿಲ್ಲುತ್ತೆ. ಈ ಬಗ್ಗೆ ಬೆಂಗಳೂರಿಗೆ ತೆರಳಿ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಮೈಸೂರಿನಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಮಾತನಾಡಿದ್ದಾರೆ.

Next Story

RELATED STORIES