Top

ವಿದ್ಯಾರ್ಥಿಗಳು ಇನ್ನು ನಿರಾತಂಕವಾಗಿ ಓದಿನ ಕಡೆ ಗಮನ ಹರಿಸಬೇಕೆಂದು ನನ್ನ ಮನವಿ

ವಿದ್ಯಾರ್ಥಿಗಳಿಗೆಲ್ಲ ಪರೀಕ್ಷೆಗಳಿಗೆ ಸಿದ್ಧಗೊಳ್ಳಲು ಸಾಕಷ್ಟು ಸಮಯ ನೀಡಲಾಗುತ್ತದೆ.

ವಿದ್ಯಾರ್ಥಿಗಳು ಇನ್ನು ನಿರಾತಂಕವಾಗಿ ಓದಿನ ಕಡೆ ಗಮನ ಹರಿಸಬೇಕೆಂದು ನನ್ನ ಮನವಿ
X

ಬೆಂಗಳೂರು: ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ತಿಳಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಕೇಂದ್ರದ ಸಿಬಿಎಸ್ಸಿ ತರಗತಿಗಳ ಪರೀಕ್ಷೆಗಳ ದಿನಾಂಕಗಳನ್ನೂ ಈಗಾಗಲೇ ಕೇಂದ್ರ ಶಿಕ್ಷಣ ಸಚಿವರು ಪ್ರಕಟಿಸಿದ್ದಾರೆ. ಅದನ್ನು ಗಮನಿಸಿದ ನಂತರ ಸಾಕಷ್ಟು ಅಧ್ಯಯನ ಮಾಡಿ ನಮ್ಮ ರಾಜ್ಯದ ಎರಡನೇ ಪಿಯುಸಿ ಪರೀಕ್ಷೆಗ ಮೇ ಎರಡನೇ ವಾರದಿಂದ ಪ್ರಾರಂಭ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಜೂನ್ ಮೊದಲವಾರದಲ್ಲಿ ಪ್ರಾರಂಭವಾಗುತ್ತವೆ ಎಂದು ಪ್ರಕಟಿಸಲಾಗಿದೆ.

ನಾನು ಕಳೆದ ಎರಡು ತಿಂಗಳಿಂದ ಹೋದಲ್ಲಿ ಎಲ್ಲಾ ಕಡೆ "ಪರೀಕ್ಷೆ ಯಾವಾಗ" ಎನ್ನುವ ಪ್ರಶ್ನೆಯನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೇಳುತ್ತಿದ್ದರು. ಅವರುಗಳಿಂದಲೇ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ಅವರುಗಳೆಲ್ಲಾ ಎರಡು ವಿಚಾರಗಳನ್ನು ಸ್ಪಷ್ಟಪಡಿಸಿದ್ದೇನೆ ಎಂದಿದ್ದಾರೆ.

ಎ) ವಿದ್ಯಾರ್ಥಿಗಳಿಗೆಲ್ಲ ಪರೀಕ್ಷೆಗಳಿಗೆ ಸಿದ್ಧಗೊಳ್ಳಲು ಸಾಕಷ್ಟು ಸಮಯ ನೀಡಲಾಗುತ್ತದೆ.

ಬಿ) ವಿದ್ಯಾರ್ಥಿಗಳ ಮೇಲೆ ಯಾವುದೇ ಹೊರೆ ಬೀಳದಂತೆ ಒತ್ತಡ ಬೀರದಂತೆ ಪಠ್ಯವನ್ನು (ಸಿಲಬಸ್) ನಿರ್ಧರಿಸಲಾಗುತ್ತದೆ, ಎಂದು.

ಈ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳು ಸಾಕಷ್ಟು ಸುತ್ತು ಚರ್ಚೆಗಳನ್ನು ಶಿಕ್ಷಕರೊಂದಿಗೆ, ತಜ್ಞರ ಜೊತೆಗೆ ನಡೆಸಿ ಈಗ ಎರಡನೇ ವಾರದಿಂದ ಎರಡನೇ ಪಿಯುಸಿ ಹಾಗೂ ಜೂನ್ ಮೊದಲನೇ ವಾರದಿಂದ ಎಸೆಸೆಲ್ಸಿ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಆಖ್ಯೆರು ಗೊಳಿಸಿದ್ದಾರೆ.

ಇನ್ನು ಪರೀಕ್ಷಾ ದೃಷ್ಟಿಯಿಂದ ನಿಗದಿ ಪಡಿಸಿರುವ ಪಠ್ಯ (ಸಿಲಬಸ್) ಬಗ್ಗೆ ಈ ಎರಡು ಸಂಗತಿ ಗಳ ಬಗ್ಗೆ ಸಹ ಗಮನ ಹರಿಸಲಾಗಿದೆ.

ಎ) ಈ ಪಠ್ಯ ಲಭ್ಯವಿರುವ ಸಮಯದಲ್ಲಿ ಸಮರ್ಪಕವಾಗಿ ಕಲಿಯುವಂತೆ ಇರಬೇಕು.

ಬಿ) ಎಸೆಸೆಲ್ಸಿ ಮತ್ತು ಎರಡನೇ ಪಿಯುಸಿ ತರಗತಿಗಳಲ್ಲಿ ಅಗತ್ಯವಾಗಿ ಕಲಿಯಲೇಬೇಕಾದ ಸಂಗತಿಗಳನ್ನು ಬಿಡದಂತೆ ಎಚ್ಚರವಹಿಸಬೇಕು. ಮುಂದಿನ ತರಗತಿಗಳಿಗೆ ಹೋಗುವಾಗ ಅತ್ಯಂತ ಅಗತ್ಯವಿರುವ ಪಾಠಗಳ ಕಲಿಕೆ ಆಗಲೇಬೇಕು. ಈ ದೃಷ್ಟಿಯಿಂದ ವಿಷಯ ತಜ್ಞರು ಮತ್ತು ನಮ್ಮ ಇಲಾಖಾ ಅಧಿಕಾರಿಗಳು ಬಹಳ ವಿಸ್ತೃತವಾಗಿ ಚರ್ಚಿಸಿದ್ದಾರೆ. ವಿಷಯ ತಜ್ಞರ ಅಭಿಪ್ರಾಯದಂತೆ ಈ ಬಾರಿಯ ಪರೀಕ್ಷೆಗಳಿಗಾಗಿ ಪಠ್ಯವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಕೇಂದ್ರದಲ್ಲಿ ಮಾಡಿರುವಂತೆ ನಮ್ಮಲ್ಲಿಯೂ ಒಟ್ಟು ಪಠ್ಯದಲ್ಲಿ ಈ ಸಂದರ್ಭದಲ್ಲಿ, ಲಭ್ಯವಿರುವ ಸಮಯವನ್ನು ಮನದಲ್ಲಿಟ್ಟುಕೊಂಡು ಶೇ.30ರಷ್ಟು ಕಡಿಮೆ ಮಾಡಲು ಆದರೆ ಅಗತ್ಯ ಕಲಿಕೆ ಕುರಿತು ರಾಜಿ ಮಾಡಿಕೊಳ್ಳದೆ ಪಠ್ಯವನ್ನು ನಿರ್ಧರಿಸಿಲಾಗಿದೆ. ವಿವರಗಳನ್ನು ಸೋಮವಾರದ ಒಳಗೆ ಶಾಲೆಗಳಿಗೆ ಮುಟ್ಟಿಸಲಾಗುವುದು. ವಿದ್ಯಾರ್ಥಿಗಳು ಇನ್ನು ನಿರಾತಂಕವಾಗಿ ಓದಿನ ಕಡೆ ಗಮನ ಹರಿಸಬೇಕೆಂದು ನನ್ನ ಮನವಿ ಎಂದು ಸಚಿವ ಎಸ್​ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

Next Story

RELATED STORIES