LIVE: ರಾಜ್ಯ ಬಜೆಟ್ 2021-22ರ ಪ್ರಮುಖಾಂಶಗಳು
ರಾಜ್ಯ ಬಜೆಟ್ 2021-22 ಸಾಲಿನ ಬಜೆಟ್ ಮಂಡನೆ
ಬೆಂಗಳೂರು: 2021-22ರ ಸಾಲಿನ ಕರ್ನಾಟಕ ರಾಜ್ಯ ಬಜೆಟ್ಅನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಂಡನೆ ಮಾಡುತ್ತಿದ್ದಾರೆ.
ಬಜೆಟ್ ಹೈಲೆಟ್ಸ್:
1. ಹಿಂದುಳಿದ ವರ್ಗಗಳ ನಿಗಮಕ್ಕೆ 500 ಕೋಟಿ ರೂ. ಅನುದಾನ
2. ಚಿತ್ರದುರ್ಗದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆ
3. ಬಸವ ಕಲ್ಯಾಣಕ್ಕೆ 200 ಕೋಟಿ ರೂ. ಮೀಸಲು.
4.ವೀರಶೈವ ನಿಗಮ ಮಂಡಳಿಗೆ 500 ಕೋಟಿ ರೂ. ಮೀಸಲು
5. ಕಿರು ಆಹಾರ ಸಂಸ್ಕರಣೆಗೆ 21 ಕೋಟಿ ರೂ. ಮೀಸಲು.
6. ಆದಿ ಚುಂಚನಗಿರಿ ಮಠಕ್ಕೆ 10 ಕೋಟಿ ರೂ. ಮೀಸಲು.
6. ಒಕ್ಕಲಿಗ ಅಭಿವೃದ್ಧಿ ನಿಗಮ ಮಂಡಳಿಗೆ 500 ಕೋಟಿ ರೂ.ಅನುದಾನ
7. 60 ಸಾವಿರ ಮಹಿಳೆಯರಿಗೆ ಸ್ವಯಂ ಉದ್ಯೋಗ
6. ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರೆ ನಿವಾಸ ಸ್ಥಾಪನೆ
7. ಬೆಂಗಳೂರಿನಲ್ಲಿ ಮತ್ತೊಂದು ಹೃದ್ರೋಗ ಆಸ್ಪತ್ರೆ ನಿರ್ಮಾಣ
8. ಸೋಮಶ್ವೇರ್ ಕಡಲತೀರ ಪ್ರದೇಶಕ್ಕೆ 10 ಕೋಟಿ ರೂ. ಅನುದಾನ
9. ವಿಜಯನಗರ ಜಿಲ್ಲೆಗೆ ಮೂಲಸೌಕರ್ಯಕ್ಕೆ ಕಲ್ಪಿಸುವುದಕ್ಕೆ ಒತ್ತು.
10. ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ.ಅನುದಾನ
11. ಚಾಮರಾಜನಗರದ ಬೂದಿಪಡಗದಲ್ಲಿ ಆನೆ ಶಿಬಿರ ಸ್ಥಾಪನೆ
12. ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ.
13. ಕಂಬಿನಿ ಮರಂಜನೆ ಪಾರ್ಕ್ಗೆ 50 ಕೋಟಿ ರೂ.ಅನುದಾನ
14. ರಾಜ್ಯದಲ್ಲಿ 52 ಹೊಸ ಬಸ್ ನಿಲ್ದಾಣ ನಿರ್ಮಾಣ
15. ಹಾಸನದಲ್ಲಿ ಏರ್ಪೋರ್ಟ್ ಸ್ಥಾಪನೆ 175 ಕೋಟಿ ರೂ.ಅನುದಾನ
16. ಶಿವಮೊಗ್ಗದಲ್ಲಿ ಏರ್ಪೋರ್ಟ್ ನಿರ್ಮಾಣಕ್ಕೆ 354 ಕೋಟಿ. ರೂ ಅನುದಾನ
17. ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ
18. ರಾಯಚೂರಿನಲ್ಲಿ ರಿಂಗ್ ರಸ್ತೆ ಅಭಿವೃದ್ಧಿ
19. ಬದಾಮಿಯ ಗುಳ್ಳೆಗುಡ್ಡದಲ್ಲಿ ಜವಳಿ ಪಾರ್ಕ್ ನಿರ್ಮಾಣ
20. ಬೈಯಪ್ಪನಹಳ್ಳಿಯಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣ
21. ಹೊಸದಾಗಿ 16 ಬಸ್ ಡಿಪೋಗಳ ನಿರ್ಮಾಣ
22. ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ
23. ಬೆಂಗಳೂರು ನಗರ ಅಭಿವೃದ್ಧಿಗೆ 7,795 ಕೋಟಿ ರೂ.ಅನುದಾನ ಮೀಸಲು
24. 100 ಪೊಲೀಸ್ ಠಾಣೆ ನಿರ್ಮಾಣಕ್ಕೆ 100 ಕೋಟಿ ರೂ.ಅನುದಾನ
25. ಕೆ.ಸಿ ಜನರಲ್ ಆಸ್ಪತ್ರೆ ವಿಸ್ತರಣೆಗೆ ಕ್ರಮ
26. ಕೃಷಿಗೆ 31 ಸಾವಿರ ಕೋಟಿ ಅನುದಾನ
27. ರೇಲ್ವೆ ಮಾರ್ಗಗಳಿಗಾಗಿ 2,640 ಕೋಟಿ ರೂ.ಅನುದಾನ ಮೀಸಲು
28. 100 ಕೋಟಿ ರೂ.ವೆಚ್ಚದಲ್ಲಿ ಕಿದ್ವಾಯಿ ಆಸ್ಪತ್ರೆ ಮಾದರಿಯಲ್ಲಿ ಕ್ಯಾನರ್ ಆಸ್ಪತ್ರೆ ನಿರ್ಮಾಣ.
29. ಬಿಎಂಟಿಸಿ ಟಿಕೆಟ್ನಲ್ಲಿ ಆಧುನೀಕರಣಕ್ಕೆ ಕ್ರಮ
30. ಜಿಎಸ್ಟಿ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ
31. ಎತ್ತಿನಹೊಳೆ ಭೂಸ್ವಾಧೀನಕ್ಕೆ ಅನುಮತಿ
32. ಮುಂದಿನ ಐದು ವರ್ಷಗಳಲ್ಲಿ 43 ಸಾವಿರ ಉದ್ಯೋಗ ಸೃಷ್ಠಿಸುವ ಗುರಿ.
33. ಮಹದಾಯಿ ಯೋಜನೆಗೆ 1677 ಕೋಟಿ ರೂ.ಅನುದಾನ
34. ಮೇಕೆದಾಟು ಅಣೆಕಟ್ಟಗೆ 9 ಸಾವಿರ ಕೋಟಿ ರೂ.ಕ್ರಿಯಾಯೋಜನೆ
35. ಅಲ್ಪಸಂಖ್ಯಾತರ ಅಭಿವೃದ್ಧಿಗೆ 1500 ಕೋಟಿ ರೂ.ಅನುದಾನ ಮೀಸಲು
36. ಕ್ರೈಸ್ತರ ಅಭಿವೃದ್ಧಿಗೆ 200 ಕೋಟಿ ರೂ.ಅನುದಾನ
37. ಪರಿಶಿಷ್ಟ ಜಾತಿ, ಪಗಂಡದ ಉದ್ಯಮಿಗಳಿಗೆ ಶೇ.40ರಷ್ಟು ಬಡ್ಡಿದರ ಮುದುವರಿಕೆ
38. 100 ಕೋಟಿ ವೆಚ್ಚದಲ್ಲಿ ಪೀಣ್ಯ ಕೈಗಾರಿಕೆಯ ಟೌನ್ಶೀಪ್
39. ಚಾಮರಾಜನಗದಲ್ಲಿ ಅರಿಸಿನ ಮಾರುಕಟ್ಟೆ ನಿರ್ಮಾಣ
40. 60 ಕೋಟಿ ರೂ.ವೆಚ್ಚದಲ್ಲಿ ವಿವಿಧ ಜಲಮಾರ್ಗ ಅಭಿವೃದ್ಧಿ
41. ಪರಿಶಿಷ್ಟರಿಗೆ 1 ಕೋಟಿ ರೂ.ವರೆಗೆ ಉದ್ಯಮಿಗಳಿಗೆ ಸಹಾಯಧನ
42. 50 ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯ ಸ್ಥಾಪನೆ.
43. ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳಿಗೆ ವಾಲ್ಮೀಕಿ ಎಂದು ಮರುನಾಮಕರಣ
44. ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಸೌಲಭ್ಯಕ್ಕೆ 2 ಕೋಟಿ ರೂ.ಅನುದಾನ
45. ಪ್ರವಾಸೋಧ್ಯಮ ಇಲಾಖೆಗೆ 500 ಕೋಟಿ ರೂ.ಮೀಸಲು
46. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಸ್ಮೃತಿ ವನಕ್ಕೆ 2 ಕೋಟಿ ರೂ.ಅನುದಾನ
47. ಉಡುಪಿ ಪೇಜಾವರ ಸ್ಮೃತಿವನಕ್ಕೆ 2 ಕೋಟಿ ರೂ.ಅನುದಾನ
48. ಸಂಸ್ಕೃತಿ ಪರಂಪರೆಗೆ ಒಟ್ಟು 2,645 ಕೋಟಿ ರೂ. ಅನುದಾನ
49. ರಾಜ್ಯದ ಕಾರಗೃಹ ಸಾಮರ್ಥ್ಯ ಹೆಚ್ಚಳಕ್ಕೆ 10 ಕೋಟಿ ರೂ. ಮೀಸಲು
50. ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಸೌಲಭ್ಯಕ್ಕೆ 15 ಕೋಟಿ ರೂ.ಮೀಸಲು