ಸಿಎಂ ಬಿಎಸ್ವೈಯವರ ನೂತನ ಸಚಿವ ಸಂಪುಟ ಖಾತೆ ಹಂಚಿಕೆ ವಿವರ ಇಲ್ಲಿದೆ

ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟಕ್ಕೆ ಇತ್ತೀಚೆಗೆ ಸೇರ್ಪಡೆಗೊಂಡ ನೂತನ ಸಚಿವರಿಗೆ ಸಂಭಾವ್ಯ ಖಾತೆ ಹಂಚಿಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಗೆ ಅಧಿಕೃತವಾಗಿ ರಾಜ್ಯಪಾಲರ ಅಂಕಿತ ಮಾತ್ರ ಬಾಕಿ ಉಳಿದಿದ್ದು, ಸಂಜೆ ವೇಳೆಗೆ ಪಟ್ಟಿ ಅಧಿಕೃತಗೊಳ್ಳಲಿದೆ. ಜೊತೆಗೆ ಕೆಲವು ಸಚಿವರ ಖಾತೆ ಬದಲಾವಣೆ ಸಹ ಮಾಡಲಾಗಿದೆ.
ಸಂಭಾವ್ಯ ಪಟ್ಟಿಯಲ್ಲಿರುವ ಖಾತೆ ಹಂಚಿಕೆ ವಿವರ ಇಂತಿದೆ:
01. ಸಿ.ಪಿ.ಯೋಗೇಶ್ವರ್ - ಸಣ್ಣ ನೀರಾವರಿ ಇಲಾಖೆ
02. ಆರ್. ಶಂಕರ್ - ಪೌರಾಡಳಿತ ಮತ್ತು ರೇಷ್ಮೆ ಇಲಾಖೆ
03. ಎಂಟಿವಿ ನಾಗರಾಜ್ - ಅಬಕಾರಿ ಇಲಾಖೆ
04. ಮುರುಗೇಶ್ ನಿರಾಣಿ - ಗಣಿ ಮತ್ತು ಭೂ ವಿಜ್ಞಾನ ಇಲಾಖೆ
05. ಉಮೇಶ್ ಕತ್ತಿ - ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
06. ಎಸ್. ಅಂಗಾರ - ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ
07. ಅರವಿಂದ ಲಿಂಬಾವಳಿ - ಅರಣ್ಯ ಇಲಾಖೆ
08. ನಾರಾಯಣಗೌಡ - ಯುವಜನ ಮತ್ತು ಕ್ರೀಡೆ ಇಲಾಖೆ
09. ಕೆ. ಗೋಪಾಲಯ್ಯ - ತೋಟಗಾರಿಕೆ ಇಲಾಖೆ
10. ಆನಂದ್ ಸಿಂಗ್ - ಪ್ರವಾಸೋದ್ಯಮ ಇಲಾಖೆ
11. ಶಿವರಾಂ ಹೆಬ್ಬಾರ್ - ಕಾರ್ಮಿಕ ಇಲಾಖೆ
12. ಪ್ರಭು ಚವ್ಹಾಣ್ - ಪಶುಸಂಗೋಪನೆ ಇಲಾಖೆ
13. ಕೆ.ಸುಧಾಕರ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
14. ಬಸವರಾಜ ಬೊಮ್ಮಾಯಿ - ಗೃಹ ಮತ್ತು ಕಾನೂನು ಇಲಾಖೆ
15. ಜೆ.ಸಿ. ಮಾಧುಸ್ವಾಮಿ - ವೈದ್ಯಕೀಯ ಶಿಕ್ಷಣ ಇಲಾಖೆ
16. ಸಿ.ಸಿ. ಪಾಟೀಲ್ - ಸಣ್ಣ ಕೈಗಾರಿಕೆ ಇಲಾಖೆ
17. ಕೋಟ ಶ್ರೀನಿವಾಸ ಪೂಜಾರಿ - ಮುಜರಾಯಿ ಇಲಾಖೆ
ಜೆ.ಸಿ ಮಾಧುಸ್ವಾಮಿಯವರಿಂದ ಕಾನೂನು ಖಾತೆ ಹಿಂಪಡೆದು ಬಸವಜರಾಜ ಬೊಮ್ಮಾಯಿ ಅವರಿಗೆ ಗೃಹ ಖಾತೆ ಜೊತೆಗೆೆ ಹೆಚ್ಚುವರಿ ಆಗಿ ಕಾನೂನು ಖಾತೆ ನೀಡಲಾಗಿದೆ. ಡಾ. ಕೆ.ಸುಧಾಕರ್ ಅವರಿಂದ ವೈದ್ಯಕೀಯ ಶಿಕ್ಷಣ ಖಾತೆ ಹಿಂಪಡೆದು ಜೆ.ಸಿ ಮಾಧುಸ್ವಾಮಿ ಅವರಿಗೆ ನೀಡಲಾಗಿದೆ.