Top

'ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಹೆಚ್ಡಿಕೆ ಈ ರೀತಿ ಮಾಡುತ್ತಿದ್ದಾರೆ'

ಮೈಸೂರಿನಲ್ಲೂ ಶಕುನಿ, ಮಂಥರೆಯ ಮಾತು ಕೇಳುತ್ತಿರುವ, ಕುಮಾರಸ್ವಾಮಿ. ಜೆಡಿಎಸ್​ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ

ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಹೆಚ್ಡಿಕೆ ಈ ರೀತಿ ಮಾಡುತ್ತಿದ್ದಾರೆ
X

ಮೈಸೂರು: ಮೈಮುಲ್ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್​ ಶಾಸಕ ಜಿ.ಟಿ ದೇವೇಗೌಡ ಅವರು ಸೋಮವಾರ ಹೇಳಿದ್ದಾರೆ.

ಈ ಸಂಬಂಧ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮೈಮುಲ್ ಚುನಾವಣೆಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಆದರೆ, ಕುಮಾರಸ್ವಾಮಿ ಏಕೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮೈಮುಲ್ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಗಳ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದಾರೆ. ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಕುಮಾರಸ್ವಾಮಿ ಈ ರೀತಿ ಮಾಡುತ್ತಿದ್ದಾರೆ ಎಂದು ಜಿಟಿಡಿ ಅವರು ಪರೋಕ್ಷವಾಗಿ ಮಾಜಿ ಶಾಸಕ ಸಾ.ರಾ ಮಹೇಶ್​ ವಿರುದ್ಧ ಹರಿಹಾಯ್ದರು.

ಇನ್ನು ಪಿರಿಯಾಪಟ್ಟಣದಲ್ಲಿ ಮಾಜಿ ಶಾಸಕ ವೆಂಕಟೇಶ್ ಬೆಂಬಲಿಗರಿಗೆ ಜೆಡಿಎಸ್​ನವರೇ ಅನುಕೂಲ ಮಾಡಿಕೊಡುತ್ತಿದ್ದಾರೆ. ಜೆಡಿಎಸ್ ಶಾಸಕ ಮಹದೇವ್ ಪುತ್ರನ ವಿರುದ್ಧವಾಗಿ ಜೆಡಿಎಸ್ ನವರು ಕೆಲಸ ಮಾಡುತ್ತಿದ್ದಾರೆ. ಮಹಾಭಾರತದಲ್ಲಿ ಶಕುನಿಯಿಂದ ಕೌರವರ ಸಂತತಿ ಸರ್ವ ನಾಶವಾಯಿತು. ರಾಮಾಯಣದಲ್ಲಿ ಮಂಥರೆಯ ಮಾತು ಕೈಕೇಹಿ ಕೇಳಿದ ಪರಿಣಾಮ ರಾಮ ವನವಾಸಕ್ಕೆ ತೆರಳುವಂತಾಯಿತು. ಇದೀಗ ಮೈಸೂರಿನಲ್ಲೂ ಶಕುನಿ, ಮಂಥರೆಯ ಮಾತು ಕೇಳುತ್ತಿರುವ, ಕುಮಾರಸ್ವಾಮಿ. ಜೆಡಿಎಸ್​ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದಿದ್ದಾರೆ.

ಜಿಟಿಡಿಗೆ ಜೆಡಿಎಸ್ ಬಾಗಿಲು ಬಂದ್ ಆಗಿದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಈಗಲೂ ಜೆಡಿಎಸ್​ನಲ್ಲೇ ಇದ್ದೀನಿ. ವಿಧಾನಸಭೆಯಲ್ಲೂ ಜೆಡಿಎಸ್ ಶಾಸಕರ ಜೊತೆಯೇ ಕುಳಿತುಕೊಳ್ಳುತ್ತಿದ್ದೇನೆ. ನಾನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ನಾನೇನು ಜೆಡಿಎಸ್ ವಿರುದ್ಧ ಕೆಲಸ ಮಾಡುತ್ತಿಲ್ಲ. ನಾನು ಈಗಲೂ ಜೆಡಿಎಸ್​ನಲ್ಲೇ ಇದ್ದೀನಿ. ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಕುಮಾರಸ್ವಾಮಿಯವರು ಈ ರೀತಿ ಹೇಳುತ್ತಿದ್ದಾರೆ ಎಂದು ಜಿಟಿಡಿ ಅವರು ಮಾತನಾಡಿದ್ದಾರೆ.

Next Story

RELATED STORIES