Top

ಕಿರುಕುಳ ಆಗಿದ್ರೆ ಆ ಹೆಣ್ ಮಗಳೇ ಬರಬೇಕಿತ್ತಲ್ಲವಾ - ಮಾಜಿ ಸಿಎಂ ಹೆಚ್ಡಿಕೆ ಪ್ರಶ್ನೆ

ಆ ಹೆಣ್ ಮಗಳು ಸಂತ್ರಸ್ಥ ಮಹಿಳೆ ಆಗಿದ್ದರೆ, ಕಿರುಕುಳ ಆಗಿದ್ರೆ ಆ ಹೆಣ್ ಮಗಳೇ ಬರಬೇಕಿತ್ತಲ್ಲವಾ(?) ಸಂತ್ರಸ್ಥರು ಯಾರ್ನ ಮಾಡ್ತೀರಿ(?)

ಕಿರುಕುಳ ಆಗಿದ್ರೆ ಆ ಹೆಣ್ ಮಗಳೇ ಬರಬೇಕಿತ್ತಲ್ಲವಾ - ಮಾಜಿ ಸಿಎಂ ಹೆಚ್ಡಿಕೆ ಪ್ರಶ್ನೆ
X

ಬೆಂಗಳೂರು: ಈ ಬಜೆಟ್ ಆರ್ಥಿಕ ಇಲಾಖೆ ಅಧಿಕಾರಿಗಳು ಮಾಡಿದ್ದಾರೋ(?) ಯಾರು ಮಾಡಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಇದು ಬಜೆಟ್ ಅಂತ ನನಗೆ ಅರ್ಥ ಆಗುತ್ತಿಲ್ಲ. ನಾನೇನು ಆರ್ಥಿಕ ತಜ್ಞ ಅಲ್ಲ. ಆದರೆ, ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ಹೇಳ್ತಾ ಇದ್ದೇನೆ ಎಂದಿದ್ದಾರೆ.

ಇನ್ನು ಇಸ್ರೇಲ್ ಮಾದರಿಗೆ ದುಡ್ಡು ಇಟ್ಟಿದ್ದೆ ಅದು ಎಲ್ಲಿ ಹೋಯ್ತೋ ಗೊತ್ತಿಲ್ಲ, ದ್ರಾಕ್ಷಿ ಬೆಳೆಗಾರರಿಗೆ ದುಡ್ಡು ಕೊಟ್ಟಿದ್ದೆ. ಆ ದುಡ್ಡು ಎಲ್ಲಿ ಡೈವರ್ಟ್ ಮಾಡಿದರೋ ಗೊತ್ತಿಲ್ಲ, ಕೊರೊನಾ ನೆಪ ಹೇಳ್ತಾರೆ, ಹಾಗಾದರೆ ದುಡ್ಡು ಎಲ್ಲಿ ಹೋಯ್ತು(?) ಸದನದಲ್ಲಿ ಒಪ್ಪಿಗೆ ಪಡೆದ ಕಾರ್ಯಕ್ರಮಗಳನ್ನು ಕಸದ ಬುಟ್ಟಿಗೆ ಹಾಕ್ತಿದ್ದೀರಿ. ಯಾವುದಕ್ಕೆ ಬಜೆಟ್ ವಿಧಾನಸಭೆಯಲ್ಲಿ ಮಂಡನೆ ಮಾಡಬೇಕು(?) 224 ಕ್ಷೇತ್ರಗಳಿಗೆ ನ್ಯಾಯಯುತ ಹಂಚಿಕೆ ಆಗಲಿ ಅಂತ ನಾವು ಬಯಸಿದ್ದೆವು. ನಾವು ಅಧಿಕಾರದಲ್ಲಿದ್ದಾಗ ಬಿಜೆಪಿ ಶಾಸಕರಿಗೂ ಅನುದಾನ ನೀಡಿದ್ದೇವೆ ಎಂದು ಮಾಜಿ ಸಿಎಂ ಹೆಚ್ಡಿಕೆ ಅವರು ಮಾತನಾಡಿದ್ದಾರೆ.

ಸದ್ಯ ಇಂತಹ ವಾತಾವರಣ ನಿರ್ಮಾಷ ಮಾಡಿಕೊಂಡು ಯಾಕೆ ಜನರ ಜೊತೆ ಚೆಲ್ಲಾಟ ಆಡ್ತಿದ್ದೀರಿ(?) ಮಾಧ್ಯಮಗಳಲ್ಲಿ ಡೈವರ್ಟ್ ಮಾಡಿ ಮಾನ ಉಳಿಸಿಕೊಳ್ಳೋಕೆ ಹೊರಟಿದ್ದೀರಿ ಎಂದು ಹೇಳಿದರು.

ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವ ಕೆಲಸಕ್ಕೆ ನಮ್ಮ ತಂದೆಯವರ ಕಾಲದಿಂದಲೂ ನಾವು ಕೈ ಹಾಕಿಲ್ಲ. ಆ ಹೆಣ್ ಮಗಳು ಸಂತ್ರಸ್ಥ ಮಹಿಳೆ ಆಗಿದ್ದರೆ, ಕಿರುಕುಳ ಆಗಿದ್ರೆ ಆ ಹೆಣ್ ಮಗಳೇ ಬರಬೇಕಿತ್ತಲ್ಲವಾ(?) ಸಂತ್ರಸ್ಥರು ಯಾರ್ನ ಮಾಡ್ತೀರಿ(?) ಆ ಹೆಣ್ ಮಗಳ ತಂದೆ ತಾಯಿ ನೊಂದುಕೊಳ್ತಾರೆ ಅವರ ತಂದೆ ತಾಯಿನ ಸಂತ್ತಸ್ಥರು ಅಂತೀರೋ(?) ಅಥವಾ ರಮೇಶ್ ಜಾರಕಿಹೊಳಿ ಅಣ್ಣ ತಮ್ಮಂದಿರು ನೋವು ಅನುಭವಿಸ್ತಿದ್ದಾರಲ್ಲಾ ಅವರನ್ನ ಸಂತ್ರಸ್ಥರು ಅಂತ ಕರೆಯಬೇಕಾ(?) ಕೆಲ ಸಚಿವರು ಇಂಜೆಕ್ಷನ್ ಆರ್ಡರ್ ತಂದಿದ್ದಾರೆ. ಇಂಜೆಕ್ಷನ್ ಆರ್ಡರ್ ತರಲು ಸಲಹೆ ಕೊಟ್ಟರು ಯಾರು(?) ಎಂದು ಹೆಚ್ಡಿಕೆ ಪ್ರಶ್ನೆ ಮಾಡಿದ್ದಾರೆ.

2+3 ಏನೋ ಗೊತ್ತಿಲ್ಲ ಆ 2 ಯಾರು(?) 3 ಯಾರು(?) ಬಾಲಚಂದ್ರ ಜಾರಕಿಹೊಳಿನೇ ಹೇಳಬೇಕು ಇದನ್ನ ಬಾಂಬೆಗೆ ಕರಕೊಂಡು ಹೋದ ಇಬ್ರೋ, ಅಲ್ಲಿ ಬಾಂಬೆಯಲ್ಲಿ ಇವರನ್ನು ನೋಡಿಕೊಂಡ ಮೂವರೋ(?) ಅಥವಾ ಮುಂಬೈನಿಂದ ವಾಪಾಸ್ ಕರೆದುಕೊಂಡ ಬಂದ ನಾಲ್ವರೋ ಗೊತ್ತಾಗಬೇಕಲ್ಲಾ(?) ಎಂದು ಮಾಜಿ ಸಿಎಂ ಹೆಚ್ಡಿಕೆ ಅವರು ಮಾತನಾಡಿದ್ದಾರೆ.

Next Story

RELATED STORIES